ಶಾಂತಿ ವಿಹಾರ್ ಕಾನ್ವೆಂಟ್ನಲ್ಲಿ ಈಸ್ಟರ್ ಹಬ್ಬ ಆಚರಣೆ

116.7K Views 6 Apr 2026

ಮಂಗಳೂರು; ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ಬಳಿ ಇರುವ ಶಾಂತಿ ವಿಹಾರ್ ಕಾನ್ವೆಂಟ್ ಮತ್ತು ಹಿರಿಯ ನಾಗರಿಕರ ಆಶ್ರಯದಲ್ಲಿ ಈಸ್ಟರ್ ಆಚರಣೆ ಮತ್ತು ಕಾನ್ವೆಂಟಿನ ವಾರ್ಷಿಕ ಶುದ್ಧೀಕರಣ ಕಾರ್ಯವನ್ನು ಪಾಲ್ದನೆ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಮಾಜಿ ರೆಕ್ಟರ್ ವಂದನೀಯ ಫಾ. ರೊನಾಲ್ಡ್ ಸೆರಾವೋ ಅವರು ಪ್ರಾರ್ಥನಾ ವಿಧಿಗಳನ್ನು ನಡೆಸಿಕೊಟ್ಟರು.
ಹಿರಿಯ ನಾಗರಿಕರು ಭಾಗವಹಿಸಿ ಈಸ್ಟರ್ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿ ಕೊಂಡರು.
ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ವಿಭಾ, ಪಾಲ್ದನೆ ಚರ್ಚ್ ನ ಡಿಯಾಕೋನ್ ರೋವಿನ್ ಲೋಪೆಜ್, ಚರ್ಚ್ ನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಮಾಜಿ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಮುಂತಾದವರು ಉಪಸ್ಥಿತರಿದ್ದರು.

Read More News

Scroll to Top