ನ್ಯಾಚುರಲ್ ಮೆಡಿಕಲ್ಸ್ ಎರಡನೆಯ ಬ್ರಾಂಚ್ ಉದ್ಘಾಟನೆ. ಮೆಡಿಕಲ್ಸ್ ಗಳು ಸೇವಾ ಉದ್ಯಮವಾಗಿ ಬೆಳೆಯಲಿ: ಕಾಮತ್

93.4K Views 15 Feb 2026

ಮಹಾನಗರ, ಫೆ. 14 : ಜನರು ಅನಾರೋಗ್ಯಕ್ಕೆ ಈಡಾದಾಗ ಔಷಧಿಗೆ ಬರುವ ಸಂದರ್ಭ ಮಾನವೀಯ ಹಾಗೂ ಸೇವಾ ರೂಪದಲ್ಲಿ ಬೇಕಾದ ಔಷಧಿಗಳನ್ನು ಕ್ಲಪ್ತ ಸಮಯದಲ್ಲಿ ನೀಡುವಂತಾಗಬೇಕು.
ಇದರಿಂದ ಗ್ರಾಹಕರು ಹಾಗೂ ಉದ್ಯಮದ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಮೈಲ್ ಸ್ಟೋನ್ -25 ಕಟ್ಟಡದಲ್ಲಿ ಸ್ವಾತಿ ಗಣೇಶ್ ಮಾಲಕತ್ವದ ನ್ಯಾಚುರಲ್ ಗ್ರೂಪ್
ಇವರ ಸಂಪೂರ್ಣ ಹವಾ ನಿಯಂತ್ರಿತ ಔಷಧಿಯ ಮಳಿಗೆ ನ್ಯಾಚುರಲ್ ಮೆಡಿಕಲ್ಸ್ ನ 2ನೇ ಬ್ರಾಂಚ್ ನ್ನು ಉದ್ಘಾಟಿಸಿ ಅವರು ಮಾನಾಡಿದರು.


ಮಂಗಳೂರು ಬೆಳೆಯುತ್ತಿರುವ ನಗರವಾಗಿದ್ದು ಆರೋಗ್ಯ ಕ್ಷೇತ್ರದಲ್ಲಿಯೂ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಹತ್ತಾರು ಮೆಡಿಕಲ್ ಕಾಲೇಜು ಆಸ್ಪತ್ರೆಗಳು ಇಲ್ಲಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಔಷಧಿ ವ್ಯವಸ್ಥೆಗಳು ಒಂದೇ ಸೂರಿ ನಾಡಿ ದೊರಕುವಂತಹ ಮೆಡಿಕಲ್ಸ್ ಕೇಂದ್ರಗಳ ಅಗತ್ಯವಿದೆ.


ಈ ನಿಟ್ಟಿನಲ್ಲಿ ನ್ಯಾಚುರಲ್ ಗ್ರೂಪ್ ಸಂಸ್ಥೆ ಉತ್ತಮ ಹೆಜ್ಜೆಯನ್ನು ಇಟ್ಟಿದೆ. ಜನರಿಗೆ ಮನೆ ಬಾಗಿಲಿನಲ್ಲಿ ದೊರಕುವಂತಹ ಔಷಧ ಕೇಂದ್ರಗಳು ಮಂಗಳೂರು ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲಿಯೂ ಆರಂಭಿಸಲು ದೇವರು ಶಕ್ತಿ ನೀಡಲಿ ಎಂದು ನುಡಿದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮಂಜು ಕಾರ್ನವರ್,
ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಅವರು
ಹೊಸ ಔಷಧಿ ಕೇಂದ್ರದಲ್ಲಿ ಸೇವೆಯ ಜೊತೆಗೆ, ಹಲವು ಮಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟು ಮಹಿಳಾ ಉದ್ಯಮಿ ಸ್ವಾತಿ ಗಣೇಶ ಅವರು ಇತರರಿಗೆ ಮಾದರಿ ಹೆಜ್ಜೆಯನ್ನು ಇಟ್ಟಿದ್ದಾರೆ ಎಂದು ಶ್ಲಾಘಿಸಿದರು.
, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಡೆಂಟ್ ಡಾ. ಉದಯ್ ಕುಮಾರ್ ಅವರು ಮಾತನಾಡಿ ಔಷಧಿ ಕೇಂದ್ರಗಳು ಉತ್ತಮ ಸೇವೆ ನೀಡುವ ಜೊತೆಗೆ, ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರು ಆರೋಗ್ಯಯುತವಾಗಿ ಬಾಳಲು ಸಹಕಾರ ನೀಡಬೇಕು ಎಂದರು.
ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಅವರು ಮಾತನಾಡಿ ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿ ಪ್ರಥಮ ಬ್ರ್ಯಾಂಚ್ ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬರುತ್ತಿದ್ದೀರಿ. ಇಲ್ಲಿಯೂ ಉತ್ತಮ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು.
ಲ್ಯಾಂಡ್ ಟ್ರೇಡ್ಸ್ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್,
ಬಂದರ್ ಸ್ಟೀಲ್ ಸೆಂಟರ್ ನ ಎಂ. ಮೂಸಾ ಮೋಯಿದೀನ್, ಮೆಡಿಕಲ್ಸ್ ಓನರ್ಸ್ ಅಸೋಸಿಯೇಷನ್ ಇದರ ಜಮಾಲ್, ನ್ಯಾಚುರಲ್ ಗ್ರೂಪ್ ನ ಗಣೇಶ್ ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಸ್ವಾತಿ ಗಣೇಶ್ ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ನ್ಯಾಚುರಲ್ ಗ್ರೂಪ್ ಇದರ ಪ್ರಥಮ ಹವಾ ನಿಯಂತ್ರಿತ ಮೆಡಿಕಲ್ ರಾವ್ ಅಂಡ್ ರಾವ್ ಸರ್ಕಲ್ ನಲ್ಲಿರುವ ಸಹಕಾರಿ ಸದನ ಕಟ್ಟಡದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು,
ಇದೀಗ ನೂತನವಾಗಿ ಆರಂಭವಾದ ಹವಾ ನಿಯಂತ್ರಿತ ಔಷಧಿ ಕೇಂದ್ರ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲಿದೆ. ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರ ಮನೆ ಬಾಗಲಿಗೆ ಔಷಧಿ ತಲುಪಿಸುವ ಸೌಲಭ್ಯ ನೀಡಲಿದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top