ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಪಿಯುಸ್ ಎಲ್ ರೋಡ್ರಿಗಸ್ ಆಯ್ಕೆಯಾಗಲಿ. ಇದು ಜನಾಭಿಪ್ರಾಯ.

106.4K Views 15 Jan 2026

ಮಂಗಳೂರು -Mp mlas news ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರು ಮುಂದಿನ ಅಧ್ಯಕ್ಷರಾಗಬೇಕೆಂದು ನಡೆಸಿದ ಜನಾಭಿಪ್ರಾಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದ ,ಸಮರ್ಥ ಸಂಘಟಕರಾಗಿರುವ ಪಿಯುಸ್ ಎಲ್ ರೋಡ್ರಿಗಸ್ ಅವರ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರ ಜೊತೆ ಆಪ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿರುವ ಪಿಯುಸ್
ರೋಡ್ರಿಗಸ್ ಅವರು ನೇರ ನಡೆ ನುಡಿಯ ನಿರ್ಭೀತ ಜನ ನಾಯಕರಾಗಿದ್ದು ,ಜನಪರ ಸೇವೆ, ಅಭಿವೃದ್ಧಿ ಕೆಲಸಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ಅಜಾತಶತ್ರು, ನಿಷ್ಕಳಂಕ ವ್ಯಕ್ತಿತ್ವದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರು ಪಕ್ಷದಲ್ಲಿ ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ಅರ್ಹವಾಗಿಯೇ ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರಾಗಬೇಕೆಂಬ ಜನಾಭಿಪ್ರಾಯಗಳು ಕೇಳಿ ಬಂದಿವೆ.
ಸೌಹಾರ್ದ ವ್ಯಕ್ತಿತ್ವದ ಸದಾ ಸಮಾಜಸೇವೆಯಲ್ಲಿ ಸಕ್ರಿಯರಾಗಿರುವ ಪಿಯುಸ್ ರೋಡ್ರಿಗಸ್ ಅವರು ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷರಾದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠವಾಗಿ ಸಂಘಟಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಜನಾಭಿಪ್ರಾಯ ತಿಳಿಸಿದೆ

Read More News

Scroll to Top