ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ವಿತರಣೆ ಮತ್ತು ವಿಶ್ವ ದಾಖಲೆ ಸಾಧಕಿ ದೀಕ್ಷಾ ವಿ. ಅಭಿನಂದನೆ.

98.5K Views 29 Nov 2025

ಮಂಗಳೂರು-ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಸ್ಥಾನ (NSCDF) ಆಶ್ರಯದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(KS&DL) ಸಹಯೋಗದೊಂದಿಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿರುವ ವಿಶೇಷ ಚೇತನ ಕಲಾವಿದರಿಗೆ ಸಂಗೀತ ಪರಿಕರ ಹಾಗೂ ಧ್ವನಿ ವರ್ಧಕ ವಿತರಣ ಕಾರ್ಯಕ್ರಮ “ಪುರಸ್ಕಾರ” ಸಮಾರಂಭ ದಿನಾಂಕ 27/11/2025 ನೇ ಗುರುವಾರ ಸಂಜೆ ಗಂಟೆ 6ಕ್ಕೆ ಮಂಗಳೂರಿನ ಪುರಭವನದಲ್ಲಿ ಜರುಗಿತು.
ಈ ಮಹತ್ವ ಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪಾಡಿ ಮಾತನಾಡಿ ,ವಿಶೇಷ ಚೇತನರಿಗೆ ಬದುಕು ಕಟ್ಟಿ ಕೊಡುವ NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಈ ಕಾರ್ಯ ಮಹತ್ವ ಪೂರ್ಣವಾದದ್ದು. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಆಗ ವಿಶೇಷ ಚೇತನರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದ ಅವರು ವಿಶೇಷ ಚೇತನರನ್ನು ಸಮಾಜ ಕಡೆ ಗಣಿಸದೆ ಗೌರವ ದಿಂದ ನೋಡುವ ಮನಸ್ಥಿತಿ ಬೆಳಸಿಕೊಳ್ಳಬೇಕು ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ ಇದೊಂದು ಮೌಲ್ಯ ಆಧಾರಿತ ಸುದ್ದಿಯ ಕಾರ್ಯಕ್ರಮ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ, ಬೆಂಗಳೂರು ಮೂಲದ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಸ್ಥಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ ವಿಶೇಷ ಚೇತನಾ ಕಲಾವಿದರಿಗೆ ಸಂಗೀತ ಪರಿಕರ ಮತ್ತು ಧ್ವನಿವರ್ಧಕಗಳನ್ನು ಹಸ್ತಾಂತರಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಮಾತನಾಡಿ ನಮ್ಮ ಸಂಸ್ಥೆಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇದು ಒಂದು, ನಾವು ನಮ್ಮ ಮಿತಿಯಲ್ಲಿ ನಮ್ಮ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ ನಾವು ಪ್ರಚಾರದ ಹಿಂದೆ ಬಿದ್ದವರಲ್ಲ ಎಂದು ಹೇಳಿದರು.


ಸಮಾಜ ಸೇವಕ ರಂಜನ್ ಕುಮಾರ್, ನಿರಂತರ 216 ಗಂಟೆಗಳ ಕಾಲ ಭರತ ನಾಟ್ಯ ಪ್ರದರ್ಶನ ನೀಡುವ ಮೂಲಕ GOLDEN BOOK OF WORLD RECORD ನಲ್ಲಿ ವಿಶ್ವ ದಾಖಲೆ ಮಾಡಿದ ವಿಧುಷಿ ದೀಕ್ಷಾ ವಿ. ಮತ್ತು ಪತ್ರಕರ್ತ ಪುಷ್ಪರಾಜ್ ಬಿನ್ ಇವರನ್ನು NSCDF ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು
“ಒಂದೇ ಮಾತರಂ ” ಗೀತೆಯನ್ನು ,ಹಾಡುವ ಮೂಲಕ ಶಿಲ್ಪಾ ಜೆ. ಸಕಲೇಶಪುರ ಮತ್ತು ರೇಖಾ ಸುದೇಶ್ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡದರು.ಮಾತಿನ ಮಲ್ಲಿ ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗಂಗಾಧರ್ ಗಾಂಧೀ ಮತ್ತು ದೃತಿ ಪಿ.ಶೆಟ್ಟಿ ಬೆಳ್ಳಿ ತೆರೆಯ ಬಂಗಾರದ ಮಧುರ ಗೀತೆಗಳನ್ನು ಹಾಡುವ ನೆರೆದ ಪ್ರೇಕ್ಷಕರ ಮನಸೊರೆಗೊಳಿಸಿದರು.

Read More News

Scroll to Top