ಅಟಲ್ ಬಿಹಾರಿ ವಾಜಪೇಯಿ ಅವರ ಚಾಲಕರಾಗಿದ್ದ ಬಿ.ಸಿ. ಕುಶಾಲಪ್ಪರನ್ನು ಅಭಿನಂದಿಸಲು NSCDF ರಾಷ್ಟ್ರೀಯ ಅಧ್ಯಕ್ಷ ಗಂಗಾಧರ ಗಾಂಧಿ ಮನವಿ.

105.3K Views 12 Nov 2025

ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಲಿರುವ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನದ ಅಟಲ್ ವಿರಾಸಾತ್ ಕಾರ್ಯಕ್ರಮದಲ್ಲಿ ಅವರೊಂದಿಗೆ 2 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದ ಕೊಡಗು ಮದೆನಾಡು ಮೂಲದ ಬಟ್ಯನ ಚಿನ್ನಪ್ಪ ಕುಶಾಲಪ್ಪ ಅವರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಆಗಬೇಕಿದೆ ಎಂದು NSCDF ಅಧ್ಯಕ್ಷ ಗಂಗಾಧರ್ ಗಾಂಧೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ದ.ಕ. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಅವರ ಸುದ್ದಿ ಗೋಷ್ಠಿಯ ವಿಷಯ ತಿಳಿದು ಗಂಗಾಧರ್ ಗಾಂಧೀ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ ಮತ್ತು ಬಟ್ಯಾನ ಚಿನ್ನಪ್ಪ ಕುಶಾಲಪ್ಪ ಕುರಿತಾದ ಸಣ್ಣ ಬರಹ ನೀಡಿದ್ದು ಈ ಮಹತ್ವ ಪೂರ್ಣ ಕಾರ್ಯಕ್ರಮದಲ್ಲಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿರುವ ಕುಶಾಲಪ್ಪರನ್ನು ಗುರುತಿಸಿದರೆ ಕಾರ್ಯಕ್ರಮಕ್ಕೆ ಇನ್ನಷ್ಟು ಮಹತ್ವ ಬರುತ್ತದೆ ಮತ್ತು ಶೋಭೆ ತರಬಲ್ಲದು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬಿ.ಸಿ.ಕುಶಾಲಪ್ಪ,
ಬಟ್ಯನ ಚಿನ್ನಪ್ಪ ಕುಶಾಲಪ್ಪ
ಅವರ ಬಗ್ಗೆ ಒಂದಿಷ್ಟು….
ಅದು 1984 ಸಮಯ. ದೇಶ ಕಂಡ ಪ್ರಭುದ್ದ, ಸಜ್ಜನ ರಾಜಕಾರಣಿ,ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಾರೆ, ಅಗ ಅವರನ್ನು ಕರೆತರಲು ಹೋಗುವ ಚಾಲಕರೇ ಕೊಡಗಿನ ಮದೆನಾಡು ಮೂಲದ ಬಿ.ಸಿ. ಕುಶಾಲಪ್ಪ.!!!
ಬಟ್ಯಾನ ಚೆನ್ನಪ್ಪ ಕುಶಾಲಪ್ಪ ಅವರ ಕಾರು ಚಾಲನ ಪ್ರಭುದ್ಧತೆ ಕಂಡು ಬೆರಗಾದವರೇ ದೇಶ ಕಂಡ ಸಜ್ಜನ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ.ಮಾತ್ರವಲ್ಲ ನೇರವಾಗಿ ದೆಹಲಿಗೆ ಕರೆಸಿಕೊಂಡು ಎರಡು ವರ್ಷಗಳ ತನ್ನ ಚಾಲಕರಾಗಿ ನೇಮಿಸಿಕೊಳ್ಳುತ್ತಾರೆ ಇದು ಕುಶಾಲಪ್ಪ ನಿಷ್ಠೆಗೆ ವಾಜಪೇಯಿ ನೀಡಿದ ಗೌರವ ಎಂದೇ ವ್ಯಾಖ್ಯಾನಿಸಬಹುದಾಗಿದೆ.ಬಳಿಕ ನಡೆದದ್ದೆಲ್ಲ ಪವಾಡವೇ ಎನ್ನಬಹುದು.
ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಸಚಿವ ವಿ.ಎಸ್. ಆಚಾರ್ಯ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ, ಕೊಡಗಿನ ಅಂದಿನ ಉಸ್ತುವಾರಿ ಸಚಿವ ರಾಮಚಂದ್ರ ಗೌಡರಿಗೆ, ಯುವ ರಾಜಕಾರಣಿ ವಿಜೇಯೇಂದ್ರ ಹಾಗೂ ಅನೇಕ ರಾಜಕಾರಣಿಗಳಿಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆ ಇವರದು.
ಇಷ್ಟೆಲ್ಲ ಪ್ರಭುದ್ದ ರಾಜಕಾರಣಿಗಳ ಒಡನಾಟವಿದ್ದರೂ ತನ್ನ ಪಾಡಿಗೆ ತಾನು ಎಂಬಂತೆ ಬದುಕುತ್ತಿರುವ ಬಟ್ಯನ ಚೆನ್ನಪ್ಪ ಕುಶಾಲಪ್ಪ ಅವರನ್ನು ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ಧ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಭಿನಂದಿಸವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇನೆಂದು ಗಂಗಾಧರ ಗಾಂಧಿ ತಿಳಿಸಿದ್ದಾರೆ.ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ
ಗಂಗಾಧರ್ ಗಾಂಧೀ ಮೊಬೈಲ್ ಸಂಖ್ಯೆ
9663593596 ವನ್ನು ಆಸಕ್ತರು ಸಂಪರ್ಕಿಸಬಹುದಾಗಿದೆ

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top