ಸಮಾಜಕ್ಕೆ ಮಾದರಿ ಆಗುವ ಕೆಲಸ ಮಾಡಿದ ಹೆಮ್ಮೆ ಇದೆ – ಶ್ರೀನಿವಾಸ್ ನಾಯಕ್ ಇಂದಾಜೆ

103K Views 11 Nov 2025

ಮಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗಿ ಎರಡು ಅವಧಿ ಗೆ (ಆಗಸ್ಟ್ 4,2018 ರಿಂದ 07.11.2025 ರ ವರೆಗೆ ) ಅವಕಾಶ ನೀಡಿರುವುದಕ್ಕೆ ನನ್ನ ಪತ್ರಕರ್ತ ಮಿತ್ರರಿಗೆ ಧನ್ಯವಾದಗಳು.
ನಮ್ಮ ಅವಧಿಯಲ್ಲಿ ಪತ್ರಕರ್ತರ ಅರೋಗ್ಯ ಕ್ಷೇಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಪತ್ರಿಕಾ ಭವನದಲ್ಲಿ ಮೀಡಿಯಾ ಹೆಲ್ತ್ ಕ್ಲಬ್ ನ್ನು ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಸಹಾಭಾಗೀತ್ವದಲ್ಲಿ ಆರಂಭಿಸಲಾಗಿದೆ. ಈ ಮೂಲಕ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಅರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಕ್ಷೇಮಾ ಹೆಲ್ತ್ ಕಾರ್ಡ್ ಹಾಗೂ ಮಣಿಪಾಲ ಅರೋಗ್ಯ ಕಾರ್ಡ್ ನ್ನು ಪತ್ರಕರ್ತ ಮಿತ್ರರಿಗೆ ವಿತರಿಸಲಾಗಿದೆ.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಆರಂಭಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ಸಂಘದ ಸದಸ್ಯರಿಗೆ 10 ಲಕ್ಷ ರೂಪಾಯಿ ವಿಮೆ ಮಾಡಿಸಲಾಗಿದೆ. ಸಮಾಜಕ್ಕೆ ಮಾದರಿ ಯಾಗುವ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ಇದೆ ಎಂದುl ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಶ್ರೀನಿವಾಸ್ ನಾಯಕ್ ಇಂದಾಜಿ ತಿಳಿಸಿದರು.
ಮಂಗಳೂರು ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು,
ಪತ್ರಕರ್ತರ ಗ್ರಹ ನಿರ್ಮಾಣ ಸಹಕಾರ ಸಂಘ ಆರಂಭಿಸಲಾಗಿದೆ. ಈ ಮೂಲಕ ಪತ್ರಕರ್ತರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವ ಪ್ರಯತ್ನ ಮುಂದುವರಿದಿದೆ. ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರ್ಮ0ಕಿ ಪದವು ಎಂಬಲ್ಲಿ 3 ಎಕರೆ ಕಂದಾಯ ಭೂಮಿಯನ್ನು ನಿವೇಶನ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೊರೋನ ವೇಳೆ 4 ಕುಟುಂಬಗಳಿಗೆ ರಾಜ್ಯ ಸರಕಾರದಿಂದ 14 ಲಕ್ಷ ರೂಪಾಯಿ ನೆರವು ಕೊಡಿಸಲಾಗಿದೆ.
ಕೊರೋನ ವೇಳೆ ಕಾರ್ಮಿಕ ಇಲಾಖೆ ಹಾಗೂ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಸಹಾಯದಲ್ಲಿ ಎಲ್ಲಾ ಪತ್ರಕರ್ತರಿಗೆ ಫುಡ್ ಕಿಟ್ ವಿತರಿಸಲಾಗಿದೆ.
5 ಪತ್ರಕರ್ತರ ಜಿಲ್ಲಾ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮಾವೇಶ ದಲ್ಲಿ ಸಾಧಕ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಅವರನ್ನು ಗುರುತಿಸುವ ಕೆಲಸ ಮಾಡಲಾಗಿದೆ.
ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಹಾಗೂ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಸಾಮಾಜಿಕ ಚಟುವಟಿಕೆಗಳು
ಪತ್ರಕರ್ತರ ಗ್ರಾಮ ವಾಸ್ತವ್ಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗಿದೆ. ಬೆಳ್ತಂಗಡಿ ತಾಲೂಕಿನ ಕುತ್ಲುರು, ಸುಳ್ಯ ತಾಲೂಕಿನ ಮಡಪ್ಪಾಡಿ, ಕೊಲ್ಲಮೊಗರು, ಕಡಬ ತಾಲೂಕಿನ ಸಿರಿಬಾಗಿಲು, ಪುತ್ತೂರು ತಾಲೂಕಿನ ಸುಳ್ಯಪದವು ನಲ್ಲಿ ಯಶಸ್ವಿ ಗ್ರಾಮ ವಾಸ್ತವ್ಯ ಮಾಡಲಾಗಿದೆ.
ಕುತ್ಲುರು ಸರಕಾರಿ ಶಾಲೆ ಗೆ ವಿವಿಧ ಕಂಪನಿ ಹಾಗೂ ಸರಕಾರದ ಮೂಲಕ 50 ಲಕ್ಷಕ್ಕೂ ಮಿಕ್ಕಿ ಅನುದಾನ ತರಲಾಗಿದೆ.
ಮಡಪಾಡ್ಡಿ ಯಲ್ಲಿ 1.5 ಕೋಟಿ ವೆಚ್ಚದಲ್ಲಿ 3 ಕಿಲೋಮೀಟರ್ ರಸ್ತೆ ನಿರ್ಮಾಣ ವಾಗಿದೆ.
ಬಿಜೈ ಕಾಪಿಕಾಡ್ ಅಂಗನವಾಡಿ ಯನ್ನು ದಾನಿಗಳ ಮೂಲಕ ಅಭಿವೃದ್ಧಿ ಪಡಿಸಲಾಗಿದೆ.
ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮ ದ ಮೂಲಕ ಮಂಗಳೂರು ವಿಶ್ವದಲ್ಲಿಯೇ ಗುರುತಿಸುವ ಕೆಲಸ ವಾಗುತ್ತಿದೆ. ಪತ್ರಕರ್ತರ ಸಂಘ ಆರಂಭಿಸಿದ ಈ ಕಾರ್ಯಕ್ರಮ ವನ್ನು ಈಗ ಕೆನರಾ ಚೇಂಬರ್ ಒಫ್ ಕಾಮರ್ಸ್ ಹಾಗೂ ಕ್ರಡೈ ಮುಂದುವರಿಸಿ ಕೊಂಡು ಹೋಗುತ್ತಿದೆ.
ಮುಂದಿನ ಯೋಜನೆಗಳು:
ಬ್ರ್ಯಾಂಡ್ ಮಂಗಳೂರು ಇಂಟರ್ನ್ಯಾಷನಲ್ ಕೌನ್ಸಿಲ್ ಸ್ಥಾಪನೆ
ಮಂಗಳೂರು ನ್ನು ವಿಶ್ವದಲ್ಲಿ ಆಕರ್ಷಸಲು ಈ ಕೌನ್ಸಿಲ್ ಮೂಲಕ ಪ್ರಯತ್ನಿಸಲಾಗುವುದು. ಜನಪ್ರತಿನಿದಿಗಳು, ಅಧಿಕಾರಿಗಳು, ಪತ್ರಕರ್ತರು, ಉದ್ಯಮಿ ಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು.
ಗ್ರಾಮ ವಾಸ್ತವ್ಯ ಫಾಲೋ ಅಪ್ ಸಮಿತಿ:
ಗ್ರಾಮ ವಾಸ್ತವ್ಯ ಮಾಡಿರುವ ಗ್ರಾಮಗಳಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿ ಕೊಂಡು ಹೋಗಲು ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಲಾಗುವುದು.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top