ಮಂಗಳೂರಿನ ಓಷನ್ ಪರ್ಲ್ ನಲ್ಲಿ ಜಾಗತಿಕ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆ

111.7K Views 6 Oct 2025

ಅಖಿಲ ಭಾರತ ಬಿಲ್ಲವರ ಯೂನಿಯನ್ ರಿಜಿಸ್ಟರ್ಡ್ ಮಂಗಳೂರು ಇದರ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವದ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಉದ್ಘಾಟನೆಯನ್ನು ತಾರೀಕು 5 ರಂದು ನಿವೃತ್ತ ಎಸ್ ಪಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಗೌರವಾಧ್ಯಕ್ಷರಾದ, ಪೀತಾಂಬರ ಹೆರಾಜೆ ಯವರು ಮಂಗಳೂರಿನ ಓಷನ್ ಪರ್ಲ್ ಸಭಾಭವನದಲ್ಲಿ ಉದ್ಘಾಟಿಸಿ 2026 ಜನವರಿ 18ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆಯುವ ಜಾಗತಿಕ ಮಟ್ಟದ ಬಿಲ್ಲವ ಸಮಾಜದ ಮಹಿಳೆಯರು ಮತ್ತು ಮಹನೀಯರಿಗಾಗಿ ನಡೆಯುವ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಕರೆ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಡಿ ಸುವರ್ಣ ರವರು ಸ್ವಾಗತಿಸಿ, ಪ್ರಸ್ತಾವಿಸುತ್ತಾ ಇದೊಂದು ಐತಿಹಾಸಿಕ ಸಮಾರಂಭ ಈ ಕ್ರೀಡಾಕೂಟದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧಿಗಳು ಭಾಗವಹಿಸಬೇಕೆಂದು ತಿಳಿಸಿದರು.
ಕ್ರೀಡಾ ಪ್ರಧಾನ ಸಂಚಾಲಕರಾದ ಪುರುಷೋತ್ತಮ ಪೂಜಾರಿಯವರು ಕ್ರೀಡೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಜೀವನ್ ರವರು ವರದಿಯನ್ನು ಯಾಚಿಸಿದರು,ವೇದಿಕೆಯಲ್ಲಿ ಕ್ರೀಡಾ ಸಂಚಾಲಕರಾದ ಶ್ರೀ ಸದಾನಂದ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಸುಮಲತಾ ಎನ್ ಸುವರ್ಣ, ಉಪಾಧ್ಯಕ್ಷರುಗಳಾದ ಶ್ರೀ ಕೆಟಿ ಸುವರ್ಣ, ಶ್ರೀ ಲೋಕನಾಥ್ ಅಮೀನ್ ಕೋಶಾಧಿಕಾರಿ ಶ್ರೀ ಜಯಪ್ರಕಾಶ್,ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಶ್ರೀ ಯೋಗೇಶ್ ಕುಮಾರ್ ಗೇರುಕಟ್ಟೆ, ಸಹಕರಿಸಿದರು. ಸಮಾರಂಭದಲ್ಲಿ ಜಿಲ್ಲೆಯ ಬಿಲ್ಲವ ಸಮಾಜದ ಸಂಘಟನೆಗಳ ಪ್ರಮುಖರು,ದೇವಸ್ಥಾನಗಳ ಮುಖ್ಯಸ್ಥರು ಸಮಾಜದ ಬ್ಯಾಂಕುಗಳ ಅಧ್ಯಕ್ಷರುಗಳು, ಕ್ರೀಡಾಪಟುಗಳು, ರಾಜಕೀಯ, ಸಾಮಾಜಿಕ, ಮತ್ತು ಧಾರ್ಮಿಕ ಪ್ರಮುಖರು ಹಾಜರಿದ್ದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top