ಅ. 2: ಮಂಗಳಾದೇವಿ ದಸರಾ ಕವಿಗೋಷ್ಠಿ – 2025. ಅಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ; ದಶ ಕವಿಗಳ ನವರಸ ರಂಜನೆ

107.8K Views 25 Sep 2025

ಮಂಗಳೂರು: ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿಮೇಳವನ್ನು ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ – ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು.


ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ.ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ.ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ (ತುಳು) ಇವರು ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸುವರು.
ವಿಜಯದಶಮಿ ಪ್ರಯುಕ್ತ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ ವಿದ್ಯಾರಂಭ ಮತ್ತು ತುಲಾಭಾರ, ಮಧ್ಯಾಹ್ನ ಹಾಗೂ ಸಂಜೆ ರಥೋತ್ಸವ ನಡೆಯುವುದು. ಮರುದಿನ ಅವಭೃತ ಮಂಗಳ ಸ್ನಾನದೊಂದಿಗೆ ಮಂಗಳಾದೇವಿ ದಸರಾ ಮಹೋತ್ಸವ ಸಂಪನ್ನಗೊಳ್ಳುವುದೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Read More News

ಇಂದು ಸಂಜೆ (ಸೆ.13 )ಬಿ.ಸಿ. ರೋಡ್ ನಲ್ಲಿ ನಡೆದ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟುಹಬ್ಬದ 75ರ ಸಂಭ್ರಮ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮ.ಜೊತೆಗೆ, ಪ್ರಜ್ಞಾಶ್ರಮದ ವಿದ್ಯಾರ್ಥಿಗಳಿಗೆ ರೋಶನ್ ರೈ ನೇತೃತ್ವದಲ್ಲಿ ಭೋಜನ ವ್ಯವಸ್ಥೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದ ಬೇಬಿಯಣ್ಣನ ಬರ್ತ್ ಡೇ.

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top