ಮಂಗಳೂರು: ಕೆಲರಾಯ್ ಚರ್ಚ್ ನಲ್ಲಿ ಕ್ರೈಸ್ತ ಸಮುದಾಯದ ಜನೋತ್ಸವ

119.9K Views 21 Sep 2025

ಮಂಗಳೂರು: ಮಂಗಳೂರಿನ ಕೆಲರಾಯ್ ಸೈಂಟ್ ಆನ್ಸ್ ಚರ್ಚ್ ಮತ್ತು ಕ್ಯಾಥೊಲಿಕ್ ಸಭಾ ಕೆಲರಾಯ್ ಘಟಕದ ಜಂಟಿ ಆಶ್ರಯದಲ್ಲಿ ಕ್ರೈಸ್ತ ಸಮುದಾಯದ ಜನೋತ್ಸವ (ಲಾಯಿಕೋತ್ಸವ್ – 2025) ಸಪ್ಟೆಂಬರ್ 21 ರಂದು ಕೆಲರಾಯ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ.
ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಲು ಮುಂದಾಳುತ್ವ ವಹಿಸಲು ಆಸಕ್ತಿ ಇರುವ ಕ್ರೈಸ್ತ ಸಮುದಾಯದ ಮುಖಂಡರಿಗೆ, ಯುವ ಜನರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ತರಬೇತಿ, ಮಾಹಿತಿ ನೀಡುವುದು, ಸಮಾಲೋಚನೆ ನಡೆಸುವುದು ಮತ್ತು ಏಕತೆಯ ಬಗ್ಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿದೆ.


ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆ ತನಕ ನಡೆಯುವ ಈ ಕಾರ್ಯಕ್ರಮದಲ್ಲಿ ನೀರುಮಾರ್ಗ, ಬೊಂಡಂತಿಲ, ಉಳಾಯಿಬೆಟ್ಟು, ಮಲ್ಲೂರು, ಅಡ್ಯಾರ್, ಅರ್ಕುಳ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ಮಂಗಳೂರು ಮಹಾ ನಗರ ಪಾಲಿಕೆಯ ಪದವು, ವಾಮಂಜೂರು ವಾರ್ಡ್ ಗಳ ವ್ಯಾಪ್ತಿಗೆ ಬರುವ 5 ಚರ್ಚು ಗಳ (ಕೆಲರಾಯ್, ನೀರುಮಾರ್ಗ, ಪೆರ್ಮಾಯ್, ಪಾಲ್ದನೆ, ವಾಮಂಜೂರು) ಕ್ರೈಸ್ತ ಸಮುದಾಯದ ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಕ್ಯಾಥೊಲಿಕ್ ಸಭಾ ಘಟಕಗಳ ಸದಸ್ಯರು, ಐ. ಸಿ. ವೈ. ಎಂ. ಸದಸ್ಯರು, ವಿವಿಧ ಮುಖಂಡರು ಹಾಗೂ ಆಸಕ್ತರು ಸೇರಿದಂತೆ ಸುಮಾರು 700 ಕ್ಕಿಂತ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೆಲರಾಯ್ ಚರ್ಚ್ ಧರ್ಮಗುರು ವಂದನೀಯ ಫಾ. ಸಿಲ್ವೆಸ್ಟರ್ ಡಿ’ ಕೋಸ್ಟಾ ಮತ್ತು ಕ್ಯಾಥೋಲಿಕ್ ಸಭಾ ಅಧ್ಯಕ್ಷ ಡೊಟ್ಟಿ ಬ್ರಾಗ್ಸ್ ಅವರು ತಿಳಿಸಿದ್ದಾರೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾ. ಫೌಸ್ಟಿನ್ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top