ಕೊಂಕಣಿ ಮಾನ್ಯತಾ ದಿನಾಚರಣೆ

109K Views 27 Aug 2025

ಶ್ರಮಿಕ ಸಂತ ಜೋಸೆಫ್ ರ‍್ಚ್, ವಾಮಂಜೂರ್‌ನಲ್ಲಿ ಭಾನುವಾರ ಕೊಂಕಣಿ ಮಾನ್ಯತಾ ದಿನವನ್ನು ರ‍್ಷೋಲ್ಲಾಸದಿಂದ ಆಚರಿಸಲಾಯಿತು.
ಈ ಕರ‍್ಯಕ್ರಮವನ್ನು ರ‍್ಚ್ನ್ ಐ.ಸಿ.ವೈ.ಎಮ್ ಸದಸ್ಯರು ಮಾಂಡ್ ಸೊಭಾಣ್ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದರು. ಕರ‍್ಯಕ್ರಮವು ಐ.ಸಿ.ವೈ.ಎಮ್ (ಭಾರತೀಯ್ ಕಥೊಲಿಕ ಯುವ ಸಂಚಾಲನ) ಸದಸ್ಯರು ಹಡಿದ ಪ್ರರ‍್ಥನಾ ಗೀತೆಯಿಂದ ಪ್ರಾರಂಭವಾಯಿತು. ನಂತರ ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಸಾಂಪ್ರದಾಯಿಕ ಘುಮಟನ್ನು ಬಾರಿಸುವ ಮೂಲಕ ಕರ‍್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ ಮಾತನಾಡಿ, ನಮ್ಮ ಮುಂದಿನ ಪೀಳಿಗೆಯನ್ನು ಕೊಂಕಣಿ ಭಾಷೆ ಬಳಸಲು ಉತ್ತೇಜಿಸುವಂತೆ ಕರೆ ನೀಡಿದರು. ಜೊತೆಗೆ ಕರ‍್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರ‍್ಚ್ ರ‍್ಮಗುರು ವಂ. ಜೇಮ್ಸ್ ಡಿಸೋಜಾ ಅವರು, “ಕೊಂಕಣಿ ನಮ್ಮ ಹೆಮ್ಮೆ, ನಮ್ಮ ಅಸ್ತಿತ್ವದ ಮೂಲ. ಕೊಂಕಣಿ ಬೆಳೆಯಲಿ, ಬದುಕಲಿ ಮತ್ತು ಉಳಿಯಲಿ ಎನ್ನುವುದು ಪ್ರತಿಯೊಬ್ಬರ ಜವಾಬ್ದಾರಿ” ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಅರುಣ್ ರಾಜ್ ರೊಡ್ರಿಗಸ್ ಅವರು ಕೊಂಕಣಿ ಭಾಷೆಗೆ ದೊರೆತ ಮಾನ್ಯತೆ, ಅದರ ಸಂಸ್ಕöÈತಿ ಮತ್ತು ಪರಂಪರೆಯ ಮಹತ್ವವನ್ನು ವಿವರಿಸಿದರು. “ನಮ್ಮ ಮಾತೃಭಾಷೆ ಮತ್ತು ಸಂಸ್ಕöÈತಿಯನ್ನು ಕಾಪಾಡಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದೆ” ಎಂದು ಹೇಳಿದರು.
ಮಾನ್ಯತಾ ದಿನಾಚರಣೆಯ ಅಂಗವಾಗಿ ವೈವಿಧ್ಯಮಯ ಸಾಂಸ್ಕöÈತಿಕ ಕರ‍್ಯಕ್ರಮಗಳು ನಡೆಯಿತು. ಕೊಂಕಣಿ ಹಾಡುಗಳು, ಸಾಂಪ್ರದಾಯಿಕ ಘುಮಟ ಗಾಯನ, ಎರಡು ಸಾಂಪ್ರದಾಯಿಕ ಕೊಂಕಣಿ ನೃತ್ಯಗಳು ಹಾಗೂ ಕೊಂಕಣಿ ಒಗಟುಗಳು ಪ್ರೇಕ್ಷಕರ ಮನಗೆದ್ದವು.
ಕರ‍್ಯಕ್ರಮದಲ್ಲಿ ರ‍್ಚಿನ ಸಹಾಯಕ ರ‍್ಮಗುರು ವಂ. ಜೀವನ್ ಶೈಲೇಶ್ ಲೋಬೊ, ಐ.ಸಿ.ವೈ.ಎಮ್ ಸಚೇತಕಿ ಸಿ. ಐಡಾ ಡಿಸೋಜಾ, ರ‍್ಚ್ ಪಾಲನಾ ಸಮಿತಿ ಕರ‍್ಯರ‍್ಶಿ ಲೊವೆಲ್ ಮೊಂತೆರೊ, ರ‍್ವ ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಐ.ಸಿ.ವೈ.ಎಮ್ ಘಟಕಾಧ್ಯಕ್ಷ ಮೆಲ್ರೋಯ್ ಡಿಸೋಜಾ ಉಪಸ್ಥಿತರಿದ್ದರು.
ಐ.ಸಿ.ವೈ.ಎಮ್ ಉಪಾಧ್ಯಕ್ಷೆ ಮಹಿಮ ಡಿಸೋಜಾ ಸ್ವಾಗತಿಸಿ, ಕರ‍್ಯರ‍್ಶಿ ಜಾಸ್ಮಿನ್ ಡಿಸೋಜಾ ವಂದಿಸಿದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top