ಪಾಲ್ದನೆ ಚರ್ಚ್: ಐ ಸಿ ವೈ ಎಂ ಘಟಕದಿಂದ ‘ಬುಕ್ ಡ್ರೈವ್’ ಕಾರ್ಯಕ್ರಮ

113K Views 24 Jul 2025

ಮಂಗಳೂರು: ಯುವ ಜನರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಮಂಗಳೂರಿನ ಪಾಲ್ದನೆಯ ಸಂತ ತೆರೆಸಾ ಚರ್ಚಿನ ಐ ಸಿ ವೈ ಎಂ ಘಟಕವು ‘ಬುಕ್ ಡ್ರೈವ್’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ಐ ಸಿ ವೈ ಎಂ ಸದಸ್ಯರು ಚರ್ಚಿನ ಸದಸ್ಯರಿಂದ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಚರ್ಚಿನ ಆಸಕ್ತ ಸದಸ್ಯರಿಗೆ ಅವರವರಿಗೆ ಬೇಕಾಗಿರುವ ಪುಸ್ತಕಗಳನ್ನು ಉಚಿತವಾಗಿ ವಿತರಿಸುತ್ತಾರೆ.
ಈ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಐಸಿವೈಎಂ ಸಂಘಟನೆಯು ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಧುನಿಕ ಮೊಬೈಲ್‌ ಯುಗದಲ್ಲಿ ಪುಸ್ತಕದ ಓದುವಿಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಐಸಿವೈಎಂ ‘ಬುಕ್‌ ಡ್ರೈವ್’ ಎಂಬ ಯೋಜನೆ ಹಮ್ಮಕೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್‌ ಮೊಂತೇರೊ, ಐಸಿವೈಎಂ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡಿನ ಮುಖ್ಯಸ್ಥ ರೋಶನ್‌ ಮೊಂತೇರೊ, ಘಟಕದ ಅಧ್ಯಕ್ಷ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ವಿಶೆಲ್‌ ಲೋಬೊ ಉಪಸ್ಥಿತರಿದ್ದರು.
ಬುಕ್ ಡ್ರೈವ್ ಅಂಗವಾಗಿ ಮೊದಲ ಹಂತದಲ್ಲಿ ಕಥೆ, ಕಾದಂಬರಿ, ಮಾರ್ಕೆಟಿಂಗ್, ಡಿಜಿಟಲ್‌ ಸಂಬಂಧಿತ ಪುಸ್ತಕಗಳು, ಮಕ್ಕಳ ಚಾರ್ಟ್ ಗಳು, ಧಾರ್ಮಿಕ ಮತ್ತು ಆರೋಗ್ಯ ಸಂಬಂಧಿತ ಪುಸ್ತಕಗಳು, ವಿಡಂಬನಾತ್ಮಕ ಬರಹಗಳು ಮತ್ತಿತರ ಸುಮಾರು 800 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top