ಪುತ್ತೂರು – ರೈಸನ್ ನ್ಯೂಟ್ರಿಷನ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಭಾರತೀಯ ಪಶು ವೈದ್ಯಕೀಯ ಮಂಡಳಿಯ ಸದಸ್ಯರಾಗಿರುವ ಡಾ.ಸುಶಾಂತ್ ರೈ ಬೆಳ್ಳಿಪ್ಪಾಡಿ ಅವರು ಪೆರ್ಮೆದ ಬಂಟೆರ್ ಸನ್ಮಾನ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಪುತ್ತೂರು ಕೊಂಬೆಟ್ಟುವಿನಲ್ಲಿರುವ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜುಲೈ12ರ ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆಯುವ ಪುತ್ತೂರು ಬಂಟರ ಸಂಘವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಡಾ.ಸುಶಾಂತ್ ರೈ ಬೆಳ್ಳಿಪ್ಪಾಡಿ ಸೇರಿದಂತೆ 8 ಮಂದಿ ಬಂಟ ಸಾಧಕರು ಪೆರ್ಮೆದ ಬಂಟೆರ್ ಸನ್ಮಾನ ಗೌರವವನ್ನು ಬಂಟ ಗಣ್ಯರ ಸಮ್ಮುಖದಲ್ಲಿ ಸ್ವೀಕರಿಸಲಿದ್ದಾರೆ.























































































































































































