ಭೀಕರ ಕಾಲ್ತುಳಿತದಿಂದ ಮೃತ ಪಟ್ಟ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳಿಗೆ 11 ಲಕ್ಷ ರೂಪಾಯಿ ಪರಿಹಾರ ಘೋಷಣೆ. ಈ ದುರಂತ ಸಾವಿಗೆ ಯಾರೂ ಕಾರಣ?

110.3K Views 5 Jun 2025

ವಿಶೇಷ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಯನ್.
ಬೆಂಗಳೂರು- ಆರ್ ಸಿ ಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಮೃತಪಟ್ಟ 11ಮಂದಿಗಳ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ. ಘಟನೆಗೆ ಕಾರಣ ಸರಕಾರವೇ,ಪೊಲೀಸ್ ಇಲಾಖೆಯೇ,ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಸಾರ್ವತ್ರಿಕ ಒತ್ತಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸುದ್ಧಿ ಗೋಷ್ಠಿ ನಡೆಸಿ ಇದರಲ್ಲಿ ರಾಜಕೀಯ ಬೇಡ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅರ್ಸಿಬಿ ಸಂಭ್ರಮ ಆಚರಣೆ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟ 11ಮಂದಿಗೆ ತಲಾ 10ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಗೊಂಡ 47ಮಂದಿಗಳ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚ ಭರಿಸಲಾಗುವುದೆಂದು ಸಿಎಂ ತಿಳಿಸಿದ್ದಾರೆ.


ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈ ಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆಯಾಗಿರುವುದ್ದರಿಂದ ತನಿಖೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ನೀಡಲಾಗಿದೆ.ತನಿಖೆ ನಡೆಸಿ ಸಂಪೂರ್ಣ ವರದಿ ಒಪ್ಪಿಸಲು ಅವರಿಗೆ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆಂದು ಸಿಎಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲ್ತುಳಿತಕ್ಕೆ ಕಾರಣವೇನು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬಂದವರಿಗೆ ಮಾತ್ರ ಅವಕಾಶ ನೀಡಲಾಗುವುದೆಂದು KSCA ಹೇಳಿತ್ತು. ಜನ ಜೂನ್ 4ರ ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ನೆರೆದಿದ್ದರು.ಆದರೆ,ಗೇಟ್ ಓಪನ್ ಮಾಡಿದ್ದು 4ಗಂಟೆಗೆ.ಆಗ ಲಕ್ಷಕ್ಕೂ ಮಿಕ್ಕಿ ಆರ್ ಸಿ ಫ್ಯಾನ್ಸ್ ಗಳು ಒಮ್ಮೆಲೇ ರಭಸದಿಂದ ನುಗ್ಗಿದ್ದರು.ಆಗ ಬ್ಯಾರಿಕೇಡ್ ಗಳು ತುಂಡಾದವು.ಇನ್ನೊಂದು ಗೇಟ್ ನಲ್ಲಿಯೂ ಫ್ಯಾನ್ಸ್ ಗಳು ನುಗ್ಗಿದಾಗ ಮ್ಯಾನ್ ಹೋಲ್ ಸ್ಲಬ್ ಕಟ್ ಆಗಿ ಜನ ಕೆಳಗೆ ಬಿದ್ದರು. ಇದರಿಂದ ಉಸಿರಾಟದ ಸಮಸ್ಯೆ ಉಂಟಾಯಿತು.


ಮಿತಿ ಮೀರಿದ ಜನರ ನಡುವೆ ನೂಕು ನುಗ್ಗಲು ಶುರುವಾಗಿ ಕೆಳಗೆ ಬಿದ್ದವರ ಎದೆ ಮೇಲೆ ಜನ ತುಳಿದು ಮುನ್ನುಗಿದರು. ಹೀಗೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತ ನಡೆಯಿತು. ಮೊದಲು ಟಿಕೆಟ್ ಬುಕ್ ಮಾಡಿದ್ದ 20ಸಾವಿರ ಮಂದಿಗೆ ಮಾತ್ರ ಪ್ರವೇಶಾವಕಾಶವೆಂದು KSCA ಹೇಳಿದ್ದು,,ಉಳಿದ ಲಕ್ಷಕ್ಕೂ ಮಿಕ್ಕಿ ಜನರ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ಈ ವೇಳೆ ಕ್ರೀಡಾಂಗಣದ ಗೇಟ್ ಮುರಿದ ಘಟನೆ ನಡೆದು ಕಾಲ್ತುಳಿತ ಸಂಭವಿಸಿ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳ ದುರಂತ ಸಾವು ಸಂಭವಿಸಿದೆ..ಅವಸರದಿಂದ ಸರಿಯಾದ ಪ್ಲಾನಿಂಗ್ ಮಾಡದೆ ವಿಜಯೋತ್ಸವ ಸಂಭ್ರಮವನ್ನು ಸಂಘಟಿಸಿದ್ದು ಅಮಾಯಕ 11ಜನರ ಸಾವಿಗೆ ಕಾರಣವಾಯಿತು.ಪೊಲೀಸ್ ವ್ಯವಸ್ಥೆ ವೈಫಲ್ಯ,ಸರಕಾರದ ನಿರ್ಲಕ್ಷ್ಯವೇ ಈ ದುರಂತ ಘಟನೆಗೆ ಕಾರಣವಾಗಿದೆಂದರೂ ತಪ್ಪಲ್ಲ .ಆರು ಮಂದಿ ಬೇರಿಂಗ್ ಆಸ್ಪತ್ರೆಯಲ್ಲಿ , ನಾಲ್ಕು ಮಂದಿ ವೈದೇಹಿ ಆಸ್ಪತ್ರೆಯಲ್ಲಿ,ಒಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.ಜೊತೆಗೆ , ಆರ್ ಸಿ ಬಿ ಕೂಡಾ ಸಂತಾಪ ಸೂಚಿಸಿದೆ.11 ಮಂದಿಗಳ ದುರಂತ ಸಾವಿಗೆ ರಾಜ್ಯ ಸರಕಾರವೇ ನೇರ ಹೊಣೆಯೆಂದು ಬಿಜೆಪಿ ಆರೋಪಿಸಿದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top