ಕ.ವಿ.ಪ್ರ,ನಿ.ನೌ.ಸಂಘ ಮೆಸ್ಕಾಂ ಉಪಾಧ್ಯಕ್ಷ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

103.7K Views 31 May 2025

ಮಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (ರಿ,) ನಂ.659, ಕೇಂದ್ರ ಸಮಿತಿ, ಸ್ಥಳೀಯ ಸಮಿತಿ ಮತ್ತು ಎಲ್ಲಾ ಪ್ರಾರ್ಥಮಿಕ ಸಮಿತಿಗಳ ಸಹಯೋಗದೊಂದಿಗೆ ಕ.ವಿ.ಪ್ರ,ನಿ.ನೌ.ಸಂಘ ಮೆಸ್ಕಾಂ, ಮಂಗಳೂರು ಇದರ ಉಪಾಧ್ಯಕ್ಷರು ಹಾಗೂ (ವಿ), ಎಲ್.ಟಿ.ರೇಟಿಂಗ್ ಉಪವಿಭಾಗ ಅತ್ತಾವರ ಮಂಗಳೂರು ಇದರ ಕಿರಿಯ ಇಂಜಿನಿಯರ್ ಹೆಚ್. ಎಸ್. ಗುರುಮೂರ್ತಿ ಇವರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ ನಗರದ ಬೊಂದೆಲ್‌ನಲ್ಲಿರುವ ಕ.ವಿ.ಪ್ರ,ನಿ.ನೌಕರರ ಸಮುದಾಯ ಭವನದಲ್ಲಿ ಜರಗಿತು.
ಕ.ವಿ.ಪ್ರ,ನಿ.ನೌ.ಸಂಘದ ಅಧ್ಯಕ್ಷರು ಹಾಗೂ ಕ.ವಿ.ಪ್ರ,ನಿ ಮತ್ತು ಎಲ್ಲಾ ಎಸ್ಕಾಂಗಳು ಬೆಂಗಳೂರು, ಇದರ ನಿರ್ದೇಶರಾದ ಕೆ. ಬಲರಾಂ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಮೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾದ ಡಾ. ಮಂಜುನಾಥ ಸ್ವಾಮಿ ಬಿ.ಎಸ್ ಹಾಗೂ ಮಂಗಳೂರು ಬಿಜೈ ಮೆಸ್ಕಾಂನ ನಿರ್ದೇಶಕ (ತಾಂತ್ರಿಕ)ರಾದ ಮಹಾದೇವ ಸ್ವಾಮಿ ಪ್ರಸನ್ನ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಕ.ವಿ.ಪ್ರ,ನಿ.ನೌ.ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಶಿವರಾಂ, ಕ.ವಿ.ಪ್ರ,ನಿ.ನೌ.ಸಂಘ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಕೆ.ಶಂಕರ ಪ್ರಕಾಶ, ಹಿರಿಯ ಕಾರ್ಮಿಕ ಮುಖಂಡ ಕೆ. ಶಶೀಂದ್ರ, ಇ. ಚೆನ್ನೆಶ್, ಕಾರ್ಯದರ್ಶಿ, ಪ್ರಾ.ಸ. ಮಂಗಳೂರು ಮುಂತಾದವರು ಪಾಲ್ಗೊಂಡಿದ್ದರು.
ಕ.ವಿ.ಪ್ರ,ನಿ.ನೌ.ಸಂಘ ಕಾವೂರು ಇದರ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಷಣ್ಮುಖಪ್ಪ ಬಾವಿ ಕಾರ್ಯಕ್ರಮ ನಿರೂಪಿಸಿದರು.
News By: Sathish kapikad.

Scroll to Top