ಪಾಕಿಸ್ತಾನದ ಅಣ್ವಸ್ತ್ರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ನಾವು ಪಾಕ್ ಸೈನ್ಯವನ್ನು ಸೋಲಿಸಿದ್ದೇವೆ. ನಮ್ಮ ಯುದ್ಧ ಭಯೋತ್ಪಾದನೆಯ ವಿರುದ್ಧದ ಸಮರವಾಗಿದೆ- ‘ನಮೋ ಸಂದೇಶ’

119.9K Views 13 May 2025

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಆದಂಪುರ ಏರ್‌ಬೇಸ್: ನಮ್ಮ ಸೈನ್ಯ ಪಾಕ್ ಸೈನ್ಯವನ್ನು ಸಂಪೂರ್ಣವಾಗಿ ಹೊಡೆದುರುಳಿಸಿದೆ. ನಮ್ಮ ವಾಯುದಳ ಕೇವಲ 13 ನಿಮಿಷಗಳಲ್ಲೇ ಪಾಕಿಸ್ತಾನದೊಳಗೆ ನುಗ್ಗಿ ಭಯೋತ್ಪಾದಕರ ನೆಲೆಯನ್ನು ಧ್ವಂಸಗೊಳಿಸಿದೆ. ‘ಭಾರತ್ ಮಾತಾ ಕೀ ಜೈ’ ಎನ್ನುವುದು ನಮ್ಮ ಸೈನಿಕರ ಶಕ್ತಿ. ಇದು ಸಮಸ್ತ 140 ಕೋಟಿ ಭಾರತೀಯರ ಬೃಹತ್ ಶಕ್ತಿ. ನಾನು 3 ಸೇನೆಗಳಿಗೆ ಸಲಾಮ್ ಹೇಳುತ್ತೇನೆ. ಪಾಕಿಸ್ತಾನದ ಅಣ್ವಸ್ತ್ರ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ. ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಇದಕ್ಕಿಂತಲೂ ಕಠಿಣ ರೀತಿಯಲ್ಲಿ ನಾವು ತಕ್ಕ ಉತ್ತರ ಕೊಡುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನ ಗೆದ್ದಿದೆ. ಇದರ ಮುಂದೆ ಪಾಕಿಸ್ತಾನ ನೆಲಕಚ್ಚಿದೆ ಎಂದು ಪ್ರಧಾನಿ ಮೋದಿಯವರು ಮೇ 13ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ಪಂಜಾಬಿನ ಆದಂಪುರ ಏರ್‌ಬೇಸ್‌ನಲ್ಲಿ ಭಾಷಣ ಮಾಡಿದರು.

ನಮೋ ಸಂದೇಶ ಅತ್ಯಾದ್ಭುತವಾಗಿತ್ತು. ಮೋದಿಯವರ ಪ್ರತಿಯೊಂದು ಮಾತುಗಳು ನಮ್ಮ ದೇಶಪ್ರೇಮವನ್ನು ಎತ್ತಿ ತೋರಿಸುತ್ತಿತ್ತು. ನಮ್ಮ ಯುದ್ಧ ಭಯೋತ್ಪಾದಕರ ವಿರುದ್ಧವಾಗಿದೆ. ನಮ್ಮ ಪರವಾಗಿ ಇಡೀ ವಿಶ್ವವೇ ಬೆಂಬಲ ಸೂಚಿಸಿದೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದೇ ನಮ್ಮ ಉದ್ದೇಶವಾಗಿದೆ. ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಬೆಂಬಲ ಕೊಡುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಉಗ್ರವಾದಕ್ಕೆ ನಮ್ಮ ಸೇನೆ ತಕ್ಕ ರೀತಿಯಲ್ಲಿ ಉತ್ತರ ಕೊಟ್ಟಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

Scroll to Top