ಮಂಗಳೂರು:ಕ್ಯಾಥೋಲಿಕ್ ಕ್ರೈಸ್ತ ಧರ್ಮ ಸಭೆಯು ಭರವಸೆಯ ಯಾತ್ರಿಕರು ಎಂಬ ಧ್ಯೇಯದೊಂದಿಗೆ
ಜುಬಿಲಿ ವರ್ಷ 2025 ನ್ನು ಆಚರಿಸುತ್ತಿದ್ದು, ಅದರ ಅಂಗವಾಗಿ ಮಂಗಳೂರು ಧರ್ಮ ಪ್ರಾಂತ್ಯದ ಎಪಿಸ್ಕೋಪಲ್ ಸಿಟಿ ವಲಯವು ಆಧ್ಯಾತ್ಮಿಕ ನವೀಕರಣದ ಉದ್ದೇಶವನ್ನು ಇರಿಸಿಕೊಂಡು ತಪಸ್ಸು ಕಾಲದ
ಬೈಬಲ್ ಆಧಾರಿತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನೆ ಭಾನುವಾರ ನೆರವೇರಿತು.
ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ತೆರೆದ ಮೈದಾನದಲ್ಲಿ ನಡರ ಸಾಮಾ ರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಅವರು 3 ದಿನಗಳ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವಿಶಿಷ್ಟವಾದ ಸ್ಪರ್ಧೆಯು
ಬೈಬಲ್- ಆಧಾರಿತ ಕಿರು ನಾಟಕ ಪ್ರದರ್ಶನ ಮತ್ತು ಕೀರ್ತನೆ ಹಾಡುವ ಸ್ಪರ್ಧೆಗಳನ್ನು ಒಳಗೊಂಡಿದೆ, ಎಪಿಸ್ಕೋಪಲ್ ಸಿಟಿ ವಲಯ ವ್ಯಾಪ್ತಿಯಲ್ಲಿ 11 ಚರ್ಚ್ ಗಳು ಬರುತ್ತಿವೆ.
ಸಮುದಾಯದ ಸಂಪರ್ಕವನ್ನು ಬಳ ಪಡಿಸುವುದು ಮತ್ತು ಸುವಾರ್ತೆಯನ್ನು ಆಧರಿಸಿ ಜೀವಿಸುವ ನವೀಕರಣದ ಬದ್ಧತೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
“ದೇವರ ವಾಕ್ಯದ ಪ್ರಕಾರ ಬದುಕುವವರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುತ್ತಾರೆ. ವಾಕ್ಯವು ಕೇವಲ ಪಠ್ಯವಲ್ಲ; ಇದು ಜೀವನ ವಿಧಾನವಾಗಿದೆ ಎಂದು ಬಿಷಪ್ ಹೇಳಿದರು.
ಸಮಾರಂಭದಲ್ಲಿ ವಿಕಾರ್ ಜನರಲ್ ಅತಿ ವಂದನೀಯ
ಮ್ಯಾಕ್ಸಿಮ್ ನೊರೊನ್ಹಾ, ಚಾನ್ಸಲರ್ ಫಾದರ್ ವಿಕ್ಟರ್ ಜಾರ್ಜ್ ಡಿ’ಸೋಜಾ, ಫಾ. ರೊನಾಲ್ಡ್ ಸೇರಾವೋ, ಫಾ. ಜೆ.ಬಿ.ಸಲ್ಡಾನ್ಹಾ, ಫಾ. ಮ್ಯಾಕ್ಸಿಂ ಡಿಸೋಜಾ, ಫಾ. ವಾಲ್ಟರ್ ಡಿಸೋಜಾ , ಫಾ. ಜೆ. ಬಿ. ಕ್ರಾಸ್ತಾ, ಫಾ. ಎರಿಕ್ ಕ್ರಾಸ್ತಾ, ಫಾ. ವಿಜಯ್ ವಿಕ್ಟರ್ ಲೋಬೊ, ಫಾ. ಬೊನವೆಂಚರ್ ನಜರೆತ್, ಮಾಧ್ಯಮ ಸಂಚಾಲಕ ಎಲಿಯಾಸ್ ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.


























































































































































































