ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 2 ರ ವರೆಗೆ 3 ದಿನಗಳ ಧ್ಯಾನ ಕೂಟವನ್ನು ಏರ್ಪಡಿಸಲಾಗಿದೆ.
ಶಿವಮೊಗ್ಗ ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಧ್ಯಾನ ಕೂಟ ತಂಡದ ಪ್ರಮುಖರಾದ ಹಾಗೂ ಉತ್ತಮ ಪ್ರವಚನಕಾರರೂ ಆಗಿರುವ ವಂದನೀಯ ಫಾದರ್ ಫ್ರಾಂಕ್ಲಿನ್ ಡಿ ಸೋಜಾ ಅವರು ಧ್ಯಾನ ಕೂಟವನ್ನು ನಡೆಸಿ ಕೊಡಲಿದ್ದಾರೆ. ಧ್ಯಾನ ಕೂಟವು ಪ್ರತಿ ದಿನ ಸಂಜೆ 5.30 ರಿಂದ ರಾತ್ರಿ 8.15 ರ ವರೆಗೆ ಇರುತ್ತದೆ.

ಧ್ಯಾನ ಕೂಟವು ಪ್ರವಚನ, ಬಲಿ ಪೂಜೆ, ವಿಶೇಷ ಪ್ರಾರ್ಥನೆ, ಪಾಪ ನಿವೇದನೆ, ಆರಾಧನೆಯನ್ನು ಒಳಗೊಂಡಿರುತ್ತದೆ. ಕೊನೆಯ ದಿನ ಅಂದರೆ ಏಪ್ರಿಲ್ 2 ರಂದು ಪಾಪ ನಿವೇದನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಚರ್ಚಿನ ಪ್ರದಾನ ಧರ್ಮ ಗುರು ವಂದನೀಯ ಫಾ. ಆಲ್ಬನ್ ಡಿ ಸೋಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























































































































































































