ಇಂಜಿನೀಯರ್ ನಾಗೇಂದ್ರ ಅವರಿಗೆ ಡಾ| ರಾಜಕುಮಾರ್ ರವರ ಮಗಳಾದ ಪೂರ್ಣಿಮಾ ರಾಜ್ ಕುಮಾರ್ ರಿಂದ ಅದ್ದೂರಿ ಸನ್ಮಾನ

118.1K Views 21 Mar 2025

ಕರ್ನಾಟಕ ರತ್ನ ಡಾ| ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಆಚರಣೆಯನ್ನು ನಗರದ ಟಾನ್ ಹಾಲ್ ನಲ್ಲಿ ಮಂಗಳೂರಿನ ದೊಡ್ಡ ಮನೆ ಅಪ್ಪು ಯುವ ಸೇನೆ ವತಿಯಿಂದ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಂಧರ್ಭದಲ್ಲಿ ಸಾಧಕರಿಗಾಗಿ ಪ್ರತಿ ವರ್ಷ ಸನ್ಮಾನ ನೀಡುವ ನಿಟ್ಟಿನಲ್ಲಿ ಈ ಬಾರಿ ಇಂಜಿನಿಯರ್ ನಾಗೇಂದ್ರ ಅವರ ಹಲವು ಕ್ಷೇತ್ರದ ಸಾಧನೆಯನ್ನು ಗುರುತಿಸಿ, ಪೂರ್ಣಿಮಾ ರಾಜಕುಮಾರ್,ನಟಿ ಧನ್ಯ ರಾಮ್ ಕುಮಾರ್, ಸಾಹಿತಿ ಪ್ರೇಮಕವಿ ಕೆ.ಕಲ್ಯಾಣ್,ನಟ ಹಾಗೂ ನಿರ್ಮಾಪಕ ಡಿ ಸತ್ಯಪ್ರಕಾಶ್, ರಾಜ್ಯಪ್ರಶಸ್ತಿ ವಿಜೇತ ರಮೇಶಚಂದ್ರ ಸಂಘಟಕ ರಾದ ಜನಾರ್ಧನ್ ಬಾಬು,ಕೆ. ಉಮೇಶ್ ಹಾಗೂ ಚಾನೆಲ್ 9 ರ ಮಾಲಕರಾದ ಪ್ರಸಾದ್ ಸುವರ್ಣ ಇವರುಗಳಿಂದ ಅದ್ದೂರಿಯಾಗಿ ಗೌರವ ಸನ್ಮಾನ ಪಡೆದಿರುತ್ತಾರೆ.


ಇವರ ಸಾಧನೆಗಳನ್ನು ವಿಡಿಯೋ ಮೂಲಕ ಎಲ್ ಇಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳನ್ನು ಕೂಡ ಏಪ೯ಡಿಸಗಿತ್ತು ಮುಖ್ಯವಾಗಿ ಸಂಗೀತ ಸ್ಪರ್ಧೆ ಚಿತ್ರಕಲೆ, ರಂಗೋಲಿ, ಚೆಸ್ ಹಾಗೂ ಆದರ್ಶ ದಂಪತಿಗಳು ಸ್ಪರ್ಧೆಯನ್ನು ಮತ್ತು ರಕ್ತದಾನ ನೇತ್ರದಾನ ಶಿಬಿರ, ಮತ್ತು ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು

Read More News

Scroll to Top