ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವ ಸಂಭ್ರಮ: ಶಶಿಕಿರಣ್ ಶೆಟ್ಟಿಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿ

105.5K Views 29 Jan 2025

ಪುಣೆ : ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಜರಗಿತು . ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನ ಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ,ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ ,ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ ,ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು, ಪುಣೆ-ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ನಿಟ್ಟೆ ಡಿಮ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಷ್ಕ್ರತ, ಬೆಲ್ಜಿಯಮ್‌ನ ಕಿಂಗ್ ಫಿಲಿಪ್ ಅವರಿಂದ ರ‍್ಡರ್ ಆಫ್ ಲಿಯೋಪೋಲ್ಡ್ ಕಮಾಂಡರ್ ಪದಕವನ್ನು,ಪಡೆದ ಬಂಟ ಸಮಾಜದ ದಿಗ್ಗಜ ವಿಶ್ವ ಶ್ರೇಷ್ಟ ಉದ್ಯೋಗಪತಿ ,ಅಗ್ರಮಾನ್ಯ ಸಮಾಜ ಸೇವಾ ಸಾಧಕರಾದ ಆಲ್ ಕರ‍್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂ ಡಿ .ಆಲ್‌ಕರ‍್ಗೊ ಲಾಜಿಸ್ಟಿಕ್ಸ್‌ನ ಸಿ.ಎಸ್.ಆರ್ ವಿಭಾಗ ಅವಶ್ಯ ಫೌಂಡೇಶನ್‌ನ ಮುಖ್ಯಸ್ಥರಾದ ಶಶಿಕಿರಣ್ ಶೆಟ್ಟಿ ಯವರಿಗೆ ಶ್ರೀ ಜಿ .ಎಂ ಶೆಟ್ಟಿ ಬೆಸ್ಟ್ ಸೋಶಿಯಲ್ ರ‍್ವಿಸ್ ಪ್ರಶಸ್ತಿಪ್ರಧಾನ ಮಾಡಿ , ವಿವಿಧ ಬಗೆಯ ತುಳುನಾಡ ಸಂಸ್ಕ್ರತಿಯನ್ನು ಬಿಂಬಿಸುವ ರೀತಿಯಲ್ಲಿ ಫಲ ಪುಷ್ಪ ತರಕಾರಿ ಸೇರಿದಂತೆ, ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ ಶಾಲು, ಹಾರ , ದೇವರ ಮೂರ್ತಿ, ಶಿವಾಜಿ ಪ್ರತಿಮೆ ಸನ್ಮಾನ ಪತ್ರ ಸ್ಮರಣಿಕೆ ನೀಡಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ . ಡಾ ಕೆ .ಪ್ರಕಾಶ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯಾತಿಗಣ್ಯರು ಸನ್ಮಾನಿಸಿದರು.ಇವರ ಪರಿಚಯ ಹಾಗೂ ಸನ್ಮಾನ ಪತ್ರವನ್ನು ರಾಮಕೃಷ್ಣ ಶೆಟ್ಟಿ ಓದಿದರು.
ಅಶೋಕ್ ಪಕ್ಕಳ ಮತ್ತು ಕರ್ನೂರು ಮೋಹನ್ ರೈ ಯವರು ಕಾರ‍್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ: ಹರೀಶ್ ಮೂಡಬಿದ್ರಿ ಪುಣೆ

Read More News

Scroll to Top