ಬಂಟ್ವಾಳ:ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ 2025ನೇ ಸಾಲಿನ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ ಪೂಂಜಾ ಮಾತನಾಡಿ,ನಾವು ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು. ಆ ಮೂಲಕ ಜೀವನ ಸಾರ್ಥಕ ಪಡಿಸಿದಾಗ ಮನಸ್ಸು ಉಲ್ಲಾಸಭರಿತ ವಾಗಿ ಶಾರೀರಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದು ಹೇಳುತ್ತಾ ಇದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು. ಇನ್ನೊರ್ವ ಮುಖ್ಯಅತಿಥಿ ನಿವೃತ್ತ ಪ್ರೊಫೆಸರ್ ಆಗಿರುವ ಡಾ.ಟಿ.ಕೆ ರವೀಂದ್ರನ್ ಮಾತನಾಡಿ,ನಿವೃತ್ತರಾದ ಮೇಲೆ ನಿಂತ ನೀರಾಗದೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಸಹಪಾಠಿಗಳೊಂದಿಗೆ ಬೆರೆಯುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುವುದರ ಮೂಲಕ ಕೆಲವೊಂದು ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಾಗ ಒತ್ತಡ ರಹಿತ ಜೀವನ ಸಾಧ್ಯ ಎಂದು ಹೇಳುತ್ತಾ ಈಗ ಕುಟುಂಬಗಳಲ್ಲಿ ಗಂಡ-ಹೆಂಡತಿ ಮಾತ್ರ ಇರುತ್ತಾರೆ, ಮಕ್ಕಳು ದೂರದಲ್ಲಿ ಉದ್ಯೋಗದಲ್ಲಿದ್ದಾಗ ಸಹಜವಾಗಿಯೇ ಮಾನಸಿಕ ಖಿನ್ನತೆ ಉಂಟಾಗುತ್ತದೆ ಅದಕ್ಕೆಇಂತಹ ಸಭೆಗಳಲ್ಲಿ ಸ್ನೇಹಿತರೊಂದಿಗೆ ಜೊತೆಯಾದಾಗ ಮನಸ್ಸು ಪ್ರಫುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾದ ಲ. ಪಿ. ಲೋಕನಾಥ ಶೆಟ್ಟಿ ಎಂ ಜೆ ಎಫ್ ರವರು ಮಾತನಾಡಿ ಒಂದೇ ಕುಟುಂಬದವರಂತೆ ನಮ್ಮ ಸಂಘಟನೆಯಲ್ಲಿ ನಾವು ತೊಡಗಿಸಿಕೊಂಡು ಕಾರ್ಯಪ್ರವೃತ್ತ ರಾಗುತ್ತಿದ್ದೇವೆ. ಇದರಿಂದ ನಮಗೆ ಸಂತೋಷದೊಂದಿಗೆ ನೆಮ್ಮದಿ ಸಿಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಗತ ವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ಓದಿ ಹೇಳಿದರು. ಸಂಘದ ಸದಸ್ಯರಲ್ಲಿ 75ವರ್ಷ ತುಂಬಿದ ಸದಸ್ಯರಾದ ಪ್ರಾರಂಭದಲ್ಲಿ ವಿ ಶಂಕರ್ ಪ್ರಾರ್ಥನೆ ಮಾಡಿದರು. ಗೋಪಾಲ ರಾವ್ ಸಂಚಯಗಿರಿ, ಕೆ ಎಚ್. ವಸಂತ ಕುಮಾರ್, ಅಪ್ಪಯ್ಯ ಶೆಟ್ಟಿ, ನರಸಿಂಹ ಭಟ್, ವೆಂಕಟ್ರಮಣ ಭಟ್, ಕು. ಆನಂದಿ, ಟಿ ಕೆ ದಯಾನಂದ, ದಾಮೋದರ ಶೆಟ್ಟಿಗಾರ್, ಶ್ರೀಮತಿ ಲಕ್ಶ್ಮಿ ನೇರಳಕಟ್ಟೆ, ಪದ್ಮನಾಭ ರಾವ್ ಕೈಕುಂಜೆ, ಮಾಧವ ಮಾರ್ಲ ಮೊಡಂಕಾಪು, ಜಿ ಎ ಭಾವ ಆಮುಂಜೆ, ಶ್ರೀಮತಿ ವನಿಲಾ ಅಲೆತ್ತೂರು, ಗೋಪಾಲಕೃಷ್ಣ ರೈ ಬರಿಮಾರ್, ಗೋವರ್ಧನ್ ಶೆಣೈ, ಶ್ರೀಮತಿ ಲಕ್ಶ್ಮಿ ಅಮ್ಮ ಬೊಕ್ಕಸ ಇವರನ್ನು ಶಾಲು ಪಲಪುಷ್ಪ ಸ್ಮರಣಿಕೆ (ಪುಸ್ತಕ )ಹಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಹೆಸರನ್ನು ಮಹಾಬಲೇಶ್ವರ ಹೆಬ್ಬಾರ್, ಜಯಂತ ಶೆಟ್ಟಿ, ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಸೋಮಪ್ಪ ಬಂಗೇರ, ಚಂದು ನಾಯ್ಕರವರು ಓದಿ ಹೇಳಿದರು ಸನ್ಮಾನಗೊಂಡವರಲ್ಲಿ ಜಿ ಎ ಬಾವ ಹಾಗೂ ಶ್ರೀಮತಿ ಲಕ್ಶ್ಮಿ ಅಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅನಂತರಾಮ ಹೆರಳೆಯವರು ಸಭಿಕರ ಭಾಷಣ ಮಾಡಿ ಸಲಹೆ ನೀಡಿದರು. ಉಪಾಧ್ಯಕ್ಷರರಾದ ಸಂಕಪ್ಪ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ನಿಲೋಜಿ ರಾವ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಜತೆಕಾ ರ್ಯದರ್ಶಿ ಜಯರಾಮ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗಟ್ಟಿ ಸಹಕರಿಸಿದರು. ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲರಿಗೂ ಸಂಘದ ವತಿಯಿಂದ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.









































































































































































































