ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಮೂಲ್ಕಿಯ ಪಾಯಲ್ ಅವರಿಗೆ ಅವಳಿ ಚಿನ್ನದ ಪದಕ

109.8K Views 18 Nov 2024

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಪಾಯಲ್ ಪಿ. ಉಡುಪಿಯ ಬುಡಕಾನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಕರ್ನಾಟಕ ಇದರ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ಮಾಧವಂಗಣದಲ್ಲಿ 17/11/2024 ರಂದು ಜರುಗಿದ ಉಡುಪಿ ಓಪನ್ ಕರಾಟೆ ಚ್ಯಾಂಪಿಯನ್ ಶಿಪ್ 2024ರ ಸ್ಪರ್ಧೆಯ 12ರ ಹರೆಯದ ಹಳದಿ ಬೆಲ್ಟ್‌ನ ವೈಯಕ್ತಿಕ ವಿಭಾಗದ ಕುಮುಟಿಯಲ್ಲಿ ಪ್ರಥಮ ಮತ್ತು ಕಟಾದಲ್ಲಿ ಪ್ರಥಮ ಸ್ಥಾನ ಪಡೆದು ಅವಳಿ ಚಿನ್ನದ ಪದಕವನ್ನು ಪಡೆದಿದ್ದಾರೆ.


ಇವರು ಮೂಲ್ಕಿ ಕೆ.ಎಸ್.ರಾವ್ ನಗರದ ನಿವೃತ್ತ ಯೋಧ ಪ್ರಶಾಂತ್ ಬಿ. ಮತ್ತು ನಯನ ಪಡುಬಿದ್ರಿ ದಂಪತಿಯ ಪುತ್ರಿಯಾಗಿದ್ದು, ಪಾವಂಜೆ ಶ್ರೀ ವಾಣಿ ಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿ, ಎಸ್.ಕೋಡಿಯ ಕರಾಟೆ ಶಿಕ್ಷಣ ಕೇಂದ್ರದ ಕರಾಟೆ ತರಬೇತುದಾರ ನಾಗರಾಜ್ ಕುಲಾಲ್ ಕುಬೆವೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top