ಮಂಗಳೂರು: ನವೆಂಬರ್ 1 ರಂದು ಬೆಳಿಗ್ಗೆ 1೦:3೦ಕ್ಕೆ ಸರಿಯಾಗಿ ನಾಡಿನ ಹಿರಿಯ ವೈದ್ಯ ಡಾ ಶಾಂತಾರಾಮ ಶೆಟ್ಟಿಯವರ ಅಮೃತ ಹಸ್ತಗಳಿಂದ ನಾಡ ಧ್ವಜಾರೋಹಣ ಜರುಗಲಿದ್ದು, ಡಾ. ಶಾಂತಾರಾಮ ಶೆಟ್ಟಿ ಯವರು ಬರೆದ ಕನ್ನಡ ಪುಸ್ತಕಗಳನ್ನ ಮಾಜಿ ರಾಜ್ಯ ಕಸಾಪ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಬಿಡುಗಡೆ ಮಾಡಲಿದ್ದಾರೆ
ವೈದ್ಯಕೀಯ. ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಜೊತೆಗೆ ನಾಡು ನುಡಿ ನೆಲ ಜಲ ಪರಿಸರಕ್ಕಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಜನಜಾಗೃತಿ ಮೂಡಿಸಿದ ರಾಜ್ಯ ಮಟ್ಟದ ಐಎಂಎ ಯ ವೈದ್ಯ ರೋರ್ವರಿಗೆ ಈ ವರ್ಷದಿಂದ ಐಎಂಎ ಮಂಗಳೂರು ವತಿಯಿಂದ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿಯನ್ನು ನಾಡೋಜ ಜೀ ಶಂಕರ್ ಪ್ರದಾನ ಮಾಡಲಿದ್ದು,ನಿಟ್ಟೆ ವಿವಿಯ ವಿಶ್ರಾಂತ ವೈಸ್ ಚಾನ್ಸಲರ್ ಡಾ ಸತೀಶ್ ಭಂಡಾರಿಯವರು ಶುಭಾಶಯ ನುಡಿ ಸಲ್ಲಿಸಲಿದ್ದು, ಬಹುಭಾಷಾ ನಟ ಸುಮನ್ ತಲ್ವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ದಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳಾದ ಶ್ರೀನಾಥ್ ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅವರುಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವೈದ್ಯೋ ನಾರಾಯಣ ಹರಿ ಇದೆಲ್ಲಾ ಯೆಸ್ಟು ಸರಿ. ಎಂಬ ಕನ್ನಡ ಉಪನ್ಯಾಸವನ್ನ ಹಿರಿಯ ವೈದ್ಯ ಸಾಹಿತಿ, ಸಮಾಜವಿಜ್ಞಾನಿ, ಸಂಘಟಕ ಡಾ ಎಂ ಅಣ್ಣಯ್ಯ ಕುಲಾಲ್ ನಡೆಸಿಕೊಡಲಿದ್ದಾರೆ. ಜೊತೆಗೆ ರಕ್ತ ಸಂಬಂಧಿತ ಕಾಯಿಲೆಗಳ ತಜ್ಞ ವೈದ್ಯರಾದ ಕೆ ಎಂ ಸಿ ಯ ಡಾ ಪ್ರಶಾಂತ್ ಬಿ ಯವರು ಹಿರಿಯರಲ್ಲಿ ರಕ್ತ ಹೀನತೆ ಯೆಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಐಎಂಎ ಮಂಗಳೂರು ಇದರ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಜಿ ಗಳಾದ ಡಾ ರಂಜಾನ್, ಡಾ ಆವಿನ್ ಆಳ್ವ ಹಾಗೂ ಡಾ ಪ್ರಶಾಂತ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.









































































































































































































