ಮಿತ್ರಂಪಾಡಿ ಜಯರಾಮ ರೈಯವರಿಗೆ ಬೆಂಗಳೂರಿನಲ್ಲಿ ನವಕರ್ನಾಟಕ ರತ್ನ ಪ್ರಶಸ್ತಿ ಮತ್ತು ದುಬೈ ಗಡಿನಾಡ ಉತ್ಸವದಲ್ಲಿ ನಾಗರಿಕ ಸನ್ಮಾನ.

98K Views 19 Oct 2024

ಬೆಂಗಳೂರು /ದುಬೈ :ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆ ಇಂಡಿಯನ್ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷರಾಗಿರುವ ಮಿತ್ರಂಪಾಡಿ ಜಯರಾಮ ರೈಯವರಿಗೆ ಬೆಂಗಳೂರಿನಲ್ಲಿ ನಡೆದ ಪ್ರಥಮ ಕರ್ನಾಟಕ ಎನ್ಆರ್ ಐ ಸಮ್ಮೇಳನದಲ್ಲಿ ಪ್ರತಿಷ್ಟಿತ ನವಕರ್ನಾಟಕ ಪ್ರಶಸ್ತಿ ಮತ್ತು ದುಬೈಯಲ್ಲಿ ನಡೆದ ಗಡಿನಾಡ ಉತ್ಸವದಲ್ಲಿ ನಾಗರಿಕ ಸನ್ಮಾನ ಮಾಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಮಿತ್ರಂಪಾಡಿ ಜಯರಾಮ ರೈಯವರು ಲೋಕೋಪಕಾರ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ನಿಸ್ವಾರ್ಥ ಮತ್ತು ವಿಶಿಷ್ಟ ಸೇವೆಗಾಗಿ ಅವರನ್ನು ಪ್ರಶಸ್ತಿ, ಸನ್ಮಾನದೊಂದಿಗೆ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಉಪಸ್ಥಿತರಿದ್ದರು

Read More News

Scroll to Top