ಬಾವುಟಗುಡ್ಡದಿಂದ ಮಂಗಳಾದೇವಿಗೆ 103 ರೂಪಾಯಿ ಆಟೋ ಚಾರ್ಜ್. ನಗರದಲ್ಲಿ ಹೀಗೂ ಉಂಟೇ?

108.5K Views 27 Sep 2024

ವರದಿ : ಡಾ. ಅಶೋಕ್ ಶೆಟ್ಟಿ. ಬಿ.ಎನ್.
ಮಂಗಳೂರು: ಮಂಗಳೂರಿನ ಮಹಿಳಾ ಪ್ರಯಾಣಿಕರೊಬ್ಬರು ಬಾವುಟಗುಡ್ಡದ ಬಳಿ ನಿಂತು ಮಂಗಳಾದೇವಿಗೆ ಡ್ರಾಪ್ ಮಾಡಿಯೆಂದು ಎಲೆಕ್ಟ್ರಿಕ್ ಆಟೋಚಾಲಕಿಯೊಬ್ಬರಲ್ಲಿ ಹೇಳಿದಾಗ ಆ ಚಾಲಕಿ ಕಂಕನಾಡಿ -ಮಾರ್ನಮಿಕಟ್ಟೆ ಮಾರ್ಗವಾಗಿ ಆ ಮಹಿಳಾ ಪ್ರಯಾಣಿಕರನ್ನು ತನ್ನ ಆಟೋದಲ್ಲಿ ತಲುಪಿಸಿದರು. ಆಗ ಮೀಟರ್ ಚಾರ್ಜ್ ಬರೋಬ್ಬರಿ 103 ರೂಪಾಯಿ ಆಗಿತ್ತು. ಇಷ್ಟಕ್ಕೂ ಆ ಮಹಿಳಾ ಆಟೋ ಚಾಲಕಿಗೆ ಬಾವುಟಗುಡ್ಡೆಯಿಂದ ಜ್ಯೋತಿ -ಆರ್ ಟಿ ಓ ಮಾರ್ಗವಾಗಿ ಮಂಗಳಾದೇವಿಗೆ ಹೋಗಲು ಗೊತ್ತಿಲ್ಲವೇ?ಹಾಗೆ ಹೋಗಿದ್ದರೆ ಮೀಟರ್ ಚಾರ್ಜ್ 55 ರೂಪಾಯಿ ಆಗುತ್ತಿತ್ತು. ಪಾಪ! ಬಡಪಾಯಿ ಮಹಿಳಾ ಪ್ರಯಾಣಿಕೆ ದುಬಾರಿ ಆಟೋ ಚಾರ್ಜ್ ಕೊಟ್ಟು ಮಂಗಳಾದೇವಿ ತಲುಪಬೇಕಾದ ಪರಿಸ್ಥಿತಿ ಬಂದಿದೆ. ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಬಂದ ಮೇಲೆ ಹೊರಗಿನ ಜಿಲ್ಲೆಯವರು ರಾಶಿ ರಾಶಿಯಾಗಿ ಮಂಗಳೂರಿಗೆ ವಕ್ಕರಿಸಿದ್ದು,ಅವರಿಗೆ ಸರಿಯಾಗಿ ಮಂಗಳೂರು ಸಿಟಿಯ ಮಾರ್ಗಗಳ ಅನುಭವವೇ ಇಲ್ಲ. ಇಂತಹವರು ಆಟೋ ಓಡಿಸಿದರೆ ಇದೇ ಪರಿಸ್ಥಿತಿ ಬರುವುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಇಂತಹ ಅನನುಭವಿ ಚಾಲಕರ ಪಟ್ಟಿ ತಯಾರಿಸಿ ಸೂಕ್ತ ಕ್ರಮ ಕೈ ಗೊಳ್ಳಿ. ಇಲ್ಲದಿದ್ದಲ್ಲಿ ಮಂಗಳೂರಿನ ಬಡಪಾಯಿ ಪ್ರಯಾಣಿಕರ ಪರಿಸ್ಥಿತಿ ಅಧೋಗತಿಯಾಗುವ ಅಪಾಯವಿದೆ.

Read More News

Scroll to Top