ಮಂಗಳೂರು: ತನ್ನನ್ನು ತುಳು ಚಿತ್ರರಂಗದ ನಂ.1 ಸ್ಟಾರ್ ವ್ಯಾಲ್ಯೂವಿರುವ ಹಾಸ್ಯ ನಟನೆಂದುಕೊಂಡಿರುವ ಅರವಿಂದ ಬೋಳಾರ್ ಅವರು ‘ಚಾ ಪರ‍್ಕ’ದ ಮೂಲಕ ದೇವದಾಸ್ ಕಾಪಿಕಾಡ್ ಅವರ ಕಾರಣದಿಂದ ರಂಗಭೂಮಿಯಲ್ಲಿ ಮಿಂಚಿ ಬೆಳಕಿಗೆ ಬಂದರು.

‘ಚಾ ಪರ‍್ಕ’ದ ನಂತರ ‘ಕಲಾಸಂಗಮ’ದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಜೊತೆ ಸೇರಿದ ಅರವಿಂದ ಬೋಳಾರ್, ನಂತರ ಲ| ಕಿಶೋರ್ ಡಿ. ಶೆಟ್ಟಿಯವರ ‘ಲಕುಮಿ’ ತಂಡ ಸೇರಿದರು.
ಅಲ್ಲಿಂದ ನಂತರ ಮತ್ತೆ ‘ಚಾ ಪರ‍್ಕ’ಕ್ಕೆ ಬಂದ ಈ ಜಪ್ಪಿಂಗ್ ಸ್ಟಾರ್‌ನ್ನು ಇದೀಗ ‘ಲಕುಮಿ’ ತಂಡಕ್ಕೆ ಬರಮಾಡಿಕೊಳ್ಳುವಲ್ಲಿ ಕಿಶೋರ್ ಡಿ.ಶೆಟ್ಟಿಯವರು ಯಶಸ್ವಿಯಾಗಿದ್ದಾರೆ.
ಹಾಸ್ಯ ಲೋಕದಲ್ಲಿ ಇವರ ನಟನೆಗೆ ನಗದವರೇ ಇಲ್ಲ. ಅದನ್ನೇ ತನ್ನ ಸ್ಟಾರ್ ವ್ಯಾಲ್ಯೂ ಎಂದು ತಿಳಿದುಕೊಂಡಿರುವ ಅರವಿಂದ ಬೋಳಾರ್ ಈ ಹಂತಕ್ಕೆ ಬರಲು ಮಾಧ್ಯಮದವರೇ ಕಾರಣ.
ಆದರೆ, ಮಾಧ್ಯಮದವರು ಎದುರಿಗೆ ಸಿಕ್ಕಿ ನಮಸ್ಕರಿಸಿದರೂ ‘ಡೋಂಟ್‌ಕೇರ್’ ಎನ್ನುತ್ತಿರುವ ಅರವಿಂದ ಬೋಳಾರ್ ತಾನು ನಡೆದು ಬಂದ ದಾರಿಯನ್ನು ಸಂಪೂರ್ಣ ಮರೆತಂತಿದೆ. ಅರವಿಂದ ಬೋಳಾರ್‌ರನ್ನು ರಂಗಭೂಮಿಗೆ ಪರಿಚಯಿಸಿದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಅವರಿಗೆ ಮಾಧ್ಯಮದವರೆಂದರೆ ಪಂಚಪ್ರಾಣ. ಆದರೆ, ‘ಜಂಪಿಂಗ್ ಸ್ಟಾರ್’ ಅರವಿಂದ ಬೋಳಾರ್ ಇದಕ್ಕೆ ತದ್ವಿರುದ್ಧ. ಮಾಧ್ಯಮದವರೆಂದರೆ ನಿರ್ಲಕ್ಷ್ಯ, ತಾತ್ಸಾರ ಮನೋಭಾವನೆ. ಯಾಕೆ ಅಂತ ಗೊತ್ತಿಲ್ಲ. ಈ ರೀತಿಯ ಅವರ ಅಸಡ್ಡೆ ವರ್ತನೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದೆ. ಕಾಲ ಒಂದೇ ರೀತಿ ಇರುವುದಿಲ್ಲ. ಆರಕ್ಕೇರಿದವನೂ ಮೂರಕ್ಕೇ ಇಳಿಯಲೇ ಬೇಕು ಅಲ್ಲವೇ?








































































































































































































