ಮಂಗಳೂರು: ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟಾ, ಮಂಗಳೂರಿನಲ್ಲಿರುವ ಎಸ್. ಎಲ್. ಶೆಟ್ ಜ್ಯುವೆಲ್ಲರ್ಸ್ ಅಂಡ್ ಡೈಮಂಡ್ ಹೌಸ್ 1947ರಿಂದ ಗ್ರಾಹಕರ ವಿಶ್ವಾಸಾರ್ಹ,ನಂಬಿಕೆಯ ಉದ್ಯಮ ಪರಂಪರೆಯಾಗಿ ಹೆಗ್ಗಳಿಕೆ ಪಡೆದಿದೆ
1947ರಲ್ಲಿ ದಿ. ಸುಬ್ರಾಯ ಲಕ್ಷ್ಮಣ ಶೇಟ್ ಅವರಿಂದ ಸ್ಥಾಪನೆಯಾದ ಈ ಸಂಸ್ಥೆ ಇಂದು ಕರಾವಳಿ ಕರ್ನಾಟಕದ ಹೆಸರಾಂತ ಚಿನ್ನದ ಮಳಿಗೆಯಾಗಿದ್ದು, 79 ವರ್ಷಗಳ ನಿರಂತರ ಸೇವೆಯ ಮೂಲಕ ಗ್ರಾಹಕರ ಮನ ಗೆದ್ದಿದೆ.
ಇಂದು ಈ ಪರಂಪರೆಯನ್ನು ಎಂ. ಪ್ರಶಾಂತ್ ಶೆಟ್ (ದಿ. ರಘುನಾಥ ಶೆಟ್ ಅವರ ಪುತ್ರ) ಅವರು ಆಡಳಿತ ಪಾಲುದಾರರಾಗಿ, ಪದ್ಮಾ ರಘುನಾಥ ಶೆಟ್, ಹೇಮಂತ್ ಶೆಟ್ ಮತ್ತು ನಿಶಾಂತ್ ಶೆಟ್ ಅವರೊಂದಿಗೆ ಮುನ್ನಡೆಸುತ್ತಿದ್ದಾರೆ. ಪ್ರಶಾಂತ್ ಶೇಟ್ ಅವರು 1988ರಲ್ಲಿ ಸಂಸ್ಥೆಗೆ ಸೇರಿ ಆಧುನಿಕ ಬೆಳವಣಿಗೆಗೆ ಕಾರಣರಾಗಿದ್ದು, ಸಹೃದಯಿ ಉದ್ಯಮಿ ಮತ್ತು ನಿಸ್ವಾರ್ಥ ಸಮಾಜ ಸೇವಕರಾಗಿದ್ದಾರೆ.
ವ್ಯಾಪಾರ ಸಾಧನೆ:
-ಪ್ಲಾಟಿನಂ ಜುಬಿಲಿ 2022: 75 ವರ್ಷಗಳ ಅಪರೂಪದ ಸಾಧನೆ ಆಚರಣೆ, ಗ್ರಾಹಕರಿಗೆ ವಿಶೇಷ ಯೋಜನೆಗಳು
-De Beers Forevermark ಮೊದಲ ಬೊಟಿಕ್: ಮಂಗಳೂರಿನಲ್ಲಿ ಮೊದಲ ಎಕ್ಸ್ಕ್ಲೂಸಿವ್ ಬೊಟಿಕ್ ಸೌಜಾ ಆರ್ಕೇಡ್ ನಲ್ಲಿ ಪ್ರಾರಂಭ, ರಾಷ್ಟ್ರಮಟ್ಟದ ಗುಣಮಟ್ಟಕ್ಕೆ ಸಾಕ್ಷಿ
-ಗ್ರಾಹಕರ ನಂಬಿಕೆ: Justdial ನಲ್ಲಿ 400ಕ್ಕೂ ಹೆಚ್ಚು ಗ್ರಾಹಕರಿಂದ 4.4 ಸ್ಟಾರ್ ರೇಟಿಂಗ್, “Serve with a Smile” – 1947 ರಿಂದ ಧ್ಯೇಯ
-ನಾವೀನ್ಯತೆ: ಚಿನ್ನ, ವಜ್ರ, ಬೆಳ್ಳಿ, ಅಮೂಲ್ಯ ಕಲ್ಲುಗಳು, ದೇವಸ್ಥಾನದ ಸಾಂಪ್ರದಾಯಿಕ ಆಭರಣಗಳು – ಕಡಿಮೆ ಮತ್ತು ಮಧ್ಯಮ ವರ್ಗದ ಸಾವಿರಾರು ಕುಟುಂಬಗಳ ಕನಸನ್ನು ನನಸಾಗಿಸಿದ ಪಾರದರ್ಶಕ ಯೋಜನೆಗಳು
-ಸ್ವರ್ಣ ವ್ಯಾಪಾರಿ ಸಂಘ: ಸಣ್ಣ ಜ್ಯುವೆಲ್ಲರ್ಸ್ ಕಲ್ಯಾಣಕ್ಕಾಗಿ ಸದಾ ನಿಲ್ಲುವ ಸಕ್ರಿಯ ಸದಸ್ಯರು




ಸಮಾಜ ಸೇವೆ – ತಂದೆಯ ಹೆಜ್ಜೆಯಲ್ಲಿ:
ಪ್ರಶಾಂತ್ ಶೇಟ್ ಅವರ ತಂದೆ ದಿ. ಎಂ. ರಘುನಾಥ್ ಶೇಟ್ ಅವರು ಮಹಾನ್ ಸಮಾಜ ಸೇವಕರಾಗಿದ್ದು, ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಟ್ರಸ್ಟಿ, ಕೆನರಾ ಹೈಸ್ಕೂಲ್ ಕಿಂಡರ್ಗಾರ್ಟನ್ಗೆ ಕಟ್ಟಡ ದಾನ, ದೈವಜ್ಞ ಬ್ರಾಹ್ಮಣ ಸಂಘದಲ್ಲಿ 36 ವರ್ಷ ಸೇವೆ ಸಲ್ಲಿಸಿದ್ದಾರೆ. ಅದೇ ದಾರಿಯಲ್ಲಿ ಪ್ರಶಾಂತ್ ಶೇಟ್ ಅವರು ಸಾಗುತ್ತಿದ್ದಾರೆ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅವರ ಗುಣ ಶ್ಲಾಘನೀಯ ಹಾಗೂ ಯುವ ಜನರಿಗೆ ಸ್ಫೂರ್ತಿ ಆಗಿದೆ.


ಮಂಗಳೂರು ಮ್ಯಾರಥಾನ್: ಕಳೆದ ಎರಡು ವರ್ಷಗಳಿಂದ Niveus Mangalore Marathon ನ ಅಧಿಕೃತ ಪದಕ ಪ್ರಾಯೋಜಕರು (5000+ ಓಟಗಾರರು). ಪ್ರಶಾಂತ್ ಶೇಟ್ ಸ್ವತಃ ಕಂಬಳ ಕಲೆ ಒಳಗೊಂಡ ಪದಕಗಳನ್ನು ವಿನ್ಯಾಸಗೊಳಿಸಿದ್ದಾರೆ – ಇದು ತುಳುನಾಡಿನ ಶಕ್ತಿ ಮತ್ತು ಸಾಂಸ್ಕೃತಿಕ ಹೆಮ್ಮೆಯ ಪ್ರತೀಕ
-ಕಂಬಳ ಕಲೆ ಸಂರಕ್ಷಣೆ: ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಮತ್ತು ಪರಂಪರೆಯ ಸಂರಕ್ಷಣೆ, ಪ್ರೋತ್ಸಾಹ
-ಎಸ್. ಎಲ್. ಶೆಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್: ಮಕ್ಕಳ ಕಲ್ಯಾಣ, ಶಿಕ್ಷಣ, ಸಮುದಾಯ ಅಭಿವೃದ್ಧಿ, ಆರೋಗ್ಯ ಶಿಬಿರಗಳು, ಅನ್ನದಾನ ಸೇವೆ
-ಶಿಕ್ಷಣ ಮತ್ತು ಸಂಸ್ಕೃತಿ: ಕನ್ನಡ ಮತ್ತು ಕೊಂಕಣಿ ಸಂಸ್ಕೃತಿ, ಶೈಕ್ಷಣಿಕ ಸಂಸ್ಥೆಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ
MP MLA’s NEWS TV ಜೊತೆಗಿನ ಬಾಂಧವ್ಯ:
MP MLA’s NEWS & MP MLA’s NewsTV 24×7 News Portal (0.15 Million Followers) ನ ಹೆಮ್ಮೆಯ ಪೋಷಕ ಸದಸ್ಯರಾಗಿ ಪ್ರಶಾಂತ್ ಶೆಟ್ ಅವರು ಕರ್ನಾಟಕದಲ್ಲಿ ಸ್ವತಂತ್ರ ಪತ್ರಿಕೋದ್ಯಮಕ್ಕೆ ಆಧಾರ ಸ್ತಂಭವಾಗಿದ್ದಾರೆ. ಅವರ ಪೋಷಕತ್ವವು ಕರಾವಳಿ ಉದ್ಯಮ ಸಮುದಾಯವನ್ನು ತಲುಪಲು ಮತ್ತು ಸಮಾಜ ಸೇವೆಯ ನಿಜವಾದ ಕಥೆಗಳನ್ನು ಎತ್ತಿ ತೋರಿಸಲು ಸಹಾಯ ಮಾಡುತ್ತದೆ.
ಸಂಪಾದಕರ ಮಾತು – ಡಾ. ಅಶೋಕ್ ಶೆಟ್ಟಿ ಬಿ.ಎನ್.: “ಪ್ರಶಾಂತ್ ಶೆಟ್ ಅವರು ಯಶಸ್ವಿ ಉದ್ಯಮಿ.ಸಮಾಜ ಸೇವೆ ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ.1947ರ ಪರಂಪರೆಯನ್ನು,ಸಾಮಾನ್ಯ ಜನರ ನಂಬಿಕೆಯನ್ನು ಕಳೆದುಕೊಳ್ಳದೆ ಆಧುನಿಕ ಐಷಾರಾಮಿ ಬ್ರಾಂಡ್ ಆಗಿ ಪರಿವರ್ತಿಸಿದ್ದಾರೆ. ಮ್ಯಾರಥಾನ್ ಪದಕಗಳು, ಚಾರಿಟೇಬಲ್ ಟ್ರಸ್ಟ್ ಮತ್ತು ಶಿಕ್ಷಣಕ್ಕೆ ಬೆಂಬಲದ ಮೂಲಕ ಅವರ ಸಮಾಜ ಸೇವೆ ಜನ ಶ್ಲಾಘನೆಗೆ ಪಾತ್ರವಾಗಿದೆ Mp.MLA’s News Industry ಶೇಟ್ ಅವರು ವಾರ್ಷಿಕ ಮಹಾಪೋಷಕರಾಗಿ ಪ್ರೋತ್ಸಾಹ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತದೆ
















































































































































































