ಮಂಗಳೂರು, ಸೆ.18 – ಪಡೀಲ್ ಪ್ರಜಾ ಸೌಧ: ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನ ಪ್ರಜಾ ಸೌಧದಲ್ಲಿ ನಡೆದ 21ನೇ ಸಚಿವ ಸಂಪುಟ ಸಭೆಯ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಕರೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ MP MLA’S NEWS ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ.ಎನ್. ಅವರು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿ ವೇಳೆ ಮಹತ್ವದ ಎರಡು ಜನಪರ ಪ್ರಶ್ನೆಗಳನ್ನು ಕೇಳಲಾಯಿತು, ಆದರೆ ಉತ್ತರ ಮಾತ್ರ ತಪ್ಪಿಸಿಕೊಳ್ಳುವಂತಿತ್ತು.
- ₹30,000 ಕೋಟಿ ಗುತ್ತಿಗೆದಾರರ ಬಾಕಿ – ಡಿಸಿಎಂ ಪರಮೇಶ್ವರ್ ಹಿಂದೇಟು:
ರಾಜ್ಯದ ಗುತ್ತಿಗೆದಾರರಿಗೆ ಸರ್ಕಾರ ₹30,000 ಕೋಟಿ ಬಾಕಿ ಉಳಿಸಿಕೊಂಡಿದೆ ಎಂಬ ಗಂಭೀರ ಪ್ರಶ್ನೆಗೆ ಉತ್ತರಿಸಲು ಡಿಸಿಎಂ ಡಾ. ಜಿ. ಪರಮೇಶ್ವರ್ ಹಿಂದೇಟು ಹಾಕಿದರು. ಸ್ಪಷ್ಟ ಉತ್ತರ ನೀಡದೆ ವಿಷಯವನ್ನು ತಪ್ಪಿಸಿದರು. - ರಾತ್ರಿ 11.30ಕ್ಕೆ ಹೋಟೆಲ್ ಬಂದ್ ಯಾತಕ್ಕೆ? – ಖಾದರ್ ಹೇಳಿದ್ದು ‘ಸಣ್ಣ ಪ್ರಶ್ನೆ’:
ಮಂಗಳೂರಿನಲ್ಲಿ ರಾತ್ರಿ 11.30ಕ್ಕೆ ಹೋಟೆಲ್‌ಗಳನ್ನು ಬಂದ್ ಮಾಡಿಸುವುದೇಕೆ? ಪ್ರವಾಸೋದ್ಯಮಕ್ಕೆ ಇದರಿಂದ ಹೊಡೆತ ಬೀಳುತ್ತಿದೆ ಎಂಬ ನೇರ ಪ್ರಶ್ನೆಗೆ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಇದನ್ನು ‘ಸಣ್ಣ ಪ್ರಶ್ನೆ’ ಎಂದು ನಿರ್ಲಕ್ಷಿಸಿ, ರಿಪಬ್ಲಿಕ್ ಚಾನಲ್‌ನ ಬೈಟ್‌ಗೆ ಮಾತ್ರ ಆಸಕ್ತಿ ತೋರಿಸಿದರು.
ಒಂದೆಡೆ ಕರಾವಳಿ ಮಲೆನಾಡು ಪ್ರವಾಸೋದ್ಯಮ ನೀತಿ 2026 ಎಂದು ಹೇಳುತ್ತಾ, ಮತ್ತೊಂದೆಡೆ ರಾತ್ರಿ 11.30ಕ್ಕೆ ನಗರವನ್ನು ಬಂದ್ ಮಾಡಿಸಿದರೆ ಪ್ರವಾಸೋದ್ಯಮ ಹೇಗೆ ಬೆಳೆಯುತ್ತದೆ ಎಂಬುದು ಕರಾವಳಿಗರ ಪ್ರಶ್ನೆಯಾಗಿದೆ.
ಒಟ್ಟಾರೆ:* ₹32,611 ಕೋಟಿ ಯೋಜನೆ, ತುಳುವಿಗೆ ಅಧಿಕೃತ ಸ್ಥಾನಮಾನದಂತಹ ಐತಿಹಾಸಿಕ ಘೋಷಣೆಗಳ ನಡುವೆ ಈ ಎರಡು ಪ್ರಶ್ನೆಗಳಿಗೆ ಸಚಿವರು ಉತ್ತರಿಸದಿರುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ














































































































































































