BREAKING NEWS. ವಿದೇಶಿ ಸುದ್ದಿ. ಮಧ್ಯ ಪ್ರಾಚ್ಯ ಗಳ ಯುದ್ಧ. 14 ದಿನಗಳ ಕದನ ವಿರಾಮ.

100.1K Views 8 Apr 2026

*ಡಾ.ಅಶೋಕ್ ಶೆಟ್ಟಿ ಬಿ.ಎನ್
.ಅಮೆರಿಕ, ಇಸ್ರೇಲ್, ಇರಾನ್ ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಟ್ರಂಪ್ ಇರಾನ್ ನ ಎಲ್ಲಾ 10 ಷರತ್ತುಗಳಿಗೆ ಒಪ್ಪಿಗೆ ಸೂಚಿಸುವುದರೊಂದಿಗೆ ಇರಾನ್ ಕೂಡಾ ಯುದ್ಧದಿಂದ ಹಿಂದೆ ಸರಿದು ಕದನ ವಿರಾಮಕ್ಕೆ ಸಮ್ಮತಿಸಿ ಶಾಂತಿ ಮಂತ್ರಕ್ಕೆ ಮುಂದಾಗಿದೆ. ಹಾರ್ಮೋಜ್ ಜಲಸಂಧಿಯನ್ನು ಇರಾನ್ ನ ನಿಯಂತ್ರಣಕ್ಕೆ ಬಿಡಲು ಒಪ್ಪಿರುವ ಟ್ರಂಪ್ ಯುದ್ಧದಿಂದ ಇರಾನ್ ಗೆ ಉಂಟಾದ ಸಂಪೂರ್ಣ ನಷ್ಟ ಭರಿಸಲು ಒಪ್ಪಿದ್ದಾರೆ.ಇದರ ಜತೆಗೆ ಇಡೀ ವಿಶ್ವದ ಕುತೂಹಲಕ್ಕೊಳಗಾಗಿರುವ ಇರಾನ್ ನ ಯುರೇನಿಯಂ ಘಟಕ ಸಂಸ್ಕರಣೆಗೆ ಮಾನ್ಯತೆ ನೀಡಲು ಅಮೇರಿಕಾ ಒಪ್ಪಿದೆ.ಇದರೊಂದಿಗೆ ಇರಾನ್ ನ ಈಡೇರಿಕೆಗಳಿಗೆಲ್ಲಾ ಅಮೇರಿಕಾ ಅಧಿಕೃತ ಒಪ್ಪಿಗೆಯ ಮುದ್ರೆ ನೀಡಿದ್ದು ಸ್ವತಃ ಇರಾನ್ ಸಂತೋಷದಿಂದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿ ಟ್ರಂಪ್ ಜೊತೆ ರಾಜಿಯಾಗಿದೆ.ಇದರಿಂದ ಇಡೀ ವಿಶ್ವವೇ ನಿಟ್ಟುಸಿರು ಬಿಡುವಂತಾಗಿದೆ. ಯುದ್ಧ ದಿಂದ ತಲೆದೋರಿದ ಗ್ಯಾಸ್, ಪೆಟ್ರೋಲ್, ಡೀಸೆಲ್, ಔಷಧಿಗಳು ಸೇರಿದಂತೆ ಅವಶ್ಯ ವಸ್ತುಗಳ ಸಮಸ್ಯೆಗಳಿಗೆ ಅತೀ ಶೀಘ್ರದಲ್ಲೇ ಪರಿಹಾರ ದೊರಕಲಿದೆ. ಇದು ಹಿರಿಯಣ್ಣನ ಮೇಲೆ ಪುಟ್ಟ ರಾಷ್ಟ್ರ ಇರಾನ್ ಸಾಧಿಸಿದ ಐತಿಹಾಸಿಕ ಗೆಲುವುವಾಗಿದ್ದರೂ , ಟ್ರಂಪ್ ಮಾತ್ರ ಇರಾನ್ ವಿರುದ್ಧ ಅಮೆರಿಕ ಐತಿಹಾಸಿಕ ಗೆಲುವು ಸಾಧಿಸಿದೆ ಎಂದಿದ್ದಾರೆ. ಇನ್ನೂ ಮುಂದೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸುವರ್ಣಯುಗ ಆರಂಭವಾಗಲಿದೆಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.ಒಟ್ಟಿನಲ್ಲಿ 40ದಿನಗಳ ಯುದ್ಧ ನಿಂತಿದೆ. ಶಾಂತಿ ನೆಲೆಸಿ ಜನಜೀವನ ಯಥಾ ಸ್ಥಿತಿಗೆ ಬರುವಂತಾಗಿದೆ

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top