ಸುರತ್ಕಲ್ ನಲ್ಲಿ “ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್ ಉದ್ಘಾಟನೆ. ಸುರತ್ಕಲ್ ಬಂಟರ ಭವನದಲ್ಲಿ  ಮೂರು ದಿನ ಜನ ಜಾತ್ರೆ

109.2K Views 19 Dec 2025

ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ  “ಪರ್ವ 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದ್ದು, ಕಾರ್ಯಕ್ರಮವನ್ನು ಮನಪಾ ಸುರತ್ಕಲ್ ವಲಯ ಕಛೇರಿಯ ಆಯುಕ್ತರಾದ ವಾಣಿ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಸುರತ್ಕಲ್ ಬಂಟರ ಸಂಘದಲ್ಲಿ ಮಹಿಳಾ ವೇದಿಕೆ ನಿರಂತರ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದೆ. ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ವಿಭಾಗಗಳಲ್ಲೂ ಮಹಿಳಾ ವೇದಿಕೆ ಮುಂಚೂಣಿಯಲ್ಲಿದೆ ಎಂದರು.
ಮುಖ್ಯ ಅತಿಥಿ  ಎಸ್ ಸಿಡಿಸಿಸಿ ಬ್ಯಾಂಕ್ ಕಾಟಿಪಳ್ಳ ಶಾಖೆಯ ಶಾಖಾ ವ್ಯವಸ್ಥಾಪಕರಾದ ಕೇಸರಿ ಶೆಟ್ಟಿ ಶುಭ ಹಾರೈಸಿದರು.
ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯೆಕ್ಷೆ ಜಯಂತಿ ಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕವಿತಾ ಶೆಟ್ಟಿ ವಂದಿಸಿದರು.
ಜ್ಯೋತಿ ಪಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ  ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ.
ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ ಬಗೆಬಗೆಯ ತಿಂಡಿತಿನಿಸುಗಳ ಫುಡ್ ಫೆಸ್ಟಿವಲ್ ನಡೆಯಲಿದೆ.
*ಸೀರೆ ಮೇಳ:* ಮೂರು ದಿನಗಳ ಕಾಲ ಸುರತ್ಕಲ್ ಬಂಟರ ಭವನದಲ್ಲಿ  ವಿವಿಧ ಮಳಿಗೆಗಳ ಸೀರೆ ಮಾರಾಟ ಮೇಳವೂ ನಡೆಯಲಿದೆ.
ನವನವೀನ ಮಾದರಿಯ ಕಾಂಚಿಪುರಂ, ಬನಾರಸ್, ರೇಷ್ಮೆ, ಬಂಗಾಲಿ ಕಾಟನ್ ಹಾಗೂ ವಿವಿಧ ಮಾದರಿಯ ಸೀರೆಗಳು ಸಲ್ವಾರ್ ಸೂಟ್, ಕುರ್ತಾಗಳು, ಖಾದಿ ಭಂಡಾರ, ಕಸೂತಿ, ಹಸ್ತಕಲೆ ಬ್ಯಾಗುಗಳು, ಒಂದು ಗ್ರಾಂ ಚಿನ್ನಾಭರಣ ವಿವಿಧ ವಿನ್ಯಾಸದ ಆರ್ಟಿಫಿಶಲ್ ಜ್ಯುವೆಲ್ಲರಿ ಮಸಾಲೆ ಹುಡಿಗಳು, ಹರ್ಬಲ್ ಉತ್ಪನ್ನಗಳು ಹಾಗೂ ಅನೇಕ ವಿಧವಿಧ ಉತ್ಪನ್ನಗಳ ಅಪೂರ್ವ ಸಂಗ್ರಹವೂ ಇದೆ.
ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಉತ್ಪನ್ನಗಳು ದೊರೆಯಲಿದೆ. ಇದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆಯುವಂತಹ ಕಾರ್ಯಕ್ರಮವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top