ಮಿಥುನ್ ರೈ ಅವರ ಸಮಾಜ ಸ್ಪಂದನೆಯೇ ಸ್ಪೂರ್ತಿ: ಅಶೋಕ್ ಪೂಜಾರ್

119.1K Views 5 Oct 2025

ಮೂಲ್ಕಿ: ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸದಾ ಬೆರೆತು ಸಾಮಾಜಿಕ ಸ್ಪಂದನೆ ನೀಡುವ ಯುವನೇತಾರ ಮಿಥುನ್ ರೈ ಅವರೇ ನಮಗೆ ಸ್ಪೂರ್ತಿಯಾಗಿದ್ದು ಅವರ ಹುಟ್ಟು ಹಬ್ಬದ ದಿನದಂದು ಸಮಾಜದ ಚಿಂತನೆ ಮಾಡುವ ಅವಕಾಶ ನಮಗೆಲ್ಲರಿಗೂ ಸಿಕ್ಕಿದೆ ಎಂದು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು. ಅವರು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲನ್ನು ವಿತರಿಸಿ ಮಾತನಾಡಿದರು
ಆಸ್ಪತ್ರೆಯ ಡಾ. ಜತ್ತನ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ರಕ್ಷಿತ್ ಪೂಜಾರಿ ಕೊಳಚಿಕಂಬಳ, ಕಿರಣ್ ಶೆಟ್ಟಿ ಕೆರೆಮನೆ, ದೀಕ್ಷಿತ್ ಪೂಜಾರಿ ಮತ್ತಿತರರು ಇದ್ದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top