ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಭಕ್ತಾದಿಗಳಿಗೆ ವಿನಂತಿ.
ಮೀರಾರೋಡ್,
ಮೀರಾ ರೋಡ್ ಶಾಂತಿ ನಗರ ಪ್ರೇಮ್ ಜ್ಯೋತಿ ಸೊಸೈಟಿ, ಸೆಕ್ಟರ್ 4, ಸಿ-002, ಸಿ-19 ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಸೆ. 22ರಿಂದ ಅ. 2ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಸೆ. 22ರಂದು ಬೆಳಿಗ್ಗೆ 6ರಿಂದ ಅರ್ಚಕ ಮೀರಾ ರೋಡ್ ಶ್ರೀಶ ಭಟ್ ನೇತೃತ್ವದಲ್ಲಿ ಗಣಪತಿಹೋಮ, ಕಲಶ ಪ್ರತಿಷ್ಠಾಪನೆ ನೆರವೇರಲಿದೆ.
ಸೆ. 22ರಿಂದ ಪ್ರತೀ ರಾತ್ರಿ 7.30ರಿಂದ 9.30ರ ವರೆಗೆ ಸ್ಥಳೀಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ. 26ರಂದು ಬೆಳಿಗ್ಗೆ 7ರಿಂದ ಪಂಚಮಿ ಪೂಜೆ ಪ್ರಯುಕ್ತ ನಾಗದೇವರಿಗೆ ತನು-ತಂಬಿಲ ಸೇವೆ, 11ರಿಂದ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದಿಂದ ಭಜನಾಮೃತ, ಮಧ್ಯಾಹ್ನ 12.30ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.
ನವರಾತ್ರಿ ಪ್ರಯುಕ್ತ ಶ್ರೀದೇವಿಗೆ ಅರ್ಪಿಸಲಿರುವ ವಿವಿಧ ರೀತಿಯ ಸೇವೆಗಳಿಗಾಗಿ ಮುಂಚಿತವಾಗಿ ಸನ್ನಿಧಾನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಮಂದಿರದ ಪ್ರಧಾನ ಅರ್ಚಕ ಲಕ್ಷ್ಮಣ್ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















































































































































































