ಪಾಲ್ದನೆ ಚರ್ಚ್: ಮೊಂತಿ ಫೆಸ್ತ್‌ ಪ್ರಯುಕ್ತ ಸ್ವಚ್ಛತಾ ಕಾರ್ಯ

119.2K Views 6 Sep 2025

ಮಂಗಳೂರು: ಕ್ಯಾಥೊಲಿಕ್‌ ಕ್ರೈಸ್ತರು ಸಪ್ಟೆಂಬರ್‌ 8 ರಂದು ‘ಮೊಂತಿ ಫೆಸ್ತ್’ ಆಚರಿಸುತ್ತಿದ್ದು, ಈ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ. ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಮೊಂತಿ ಫೆಸ್ತ್ ಆಚರಣೆಗೆ ಪೂರ್ವ ಸಿದ್ಧತೆಯಾಗಿ ಚರ್ಚ್‌ ಹಾಗೂ ಚರ್ಚ್ ವಠಾರವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಚರ್ಚ್‌ ನ ಸದಸ್ಯರು ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರ ಮಾರ್ಗದರ್ಶನದಲ್ಲಿ ಶ್ರಮದಾನದ ಮೂಲಕ ಈ ಕಾರ್ಯವನ್ನು ನೆರವೇರಿಸಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್, ಸರ್ವ ಆಯೋಗಳ ಸಂಚಾಲಕ ಜೊಸ್ಲಿನ್‌ ಲೋಬೊ, ವಾರ್ಡ್‌ ಗಳ ಮುಖ್ಯಸ್ಥರಾದ ರೋಶನ್‌ ಮೊಂತೇರೊ, ವಿಲಿಯಂ ಫೆರ್ನಾಂಡಿಸ್, ಶೀಲಾ ಡಿ’ಸೋಜಾ, ಜಸಿಂತಾ ಫೆರ್ನಾಂಡಿಸ್, ಆಧ್ಯಾತ್ಮಿಕ ಸಮಿತಿಯ ಸಂಚಾಲಕಿ ಪ್ರೆಸಿಲ್ಲಾ ಫೆರ್ನಾಂಡಿಸ್, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಚಾಲಕಿ ಲಿಝಿ ಫೆರ್ನಾಂಡಿಸ್ ಅವರು ಶ್ರಮದಾನದಲ್ಲಿ ನೇತೃತ್ವ ವಹಿಸಿದ್ದರು.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top