ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ

104K Views 22 Aug 2025

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿರೋಡು, ಮೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಮಂಗಳೂರಿನ ಹಿರಿಯ ನ್ಯಾಯವಾದಿ, ಸರಕಾರಿ ಅಭಿಯೋಜಕರಾದ ಉದಯಾನಂದ ಎ.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಒಂದು ಕಾಲದಲ್ಲಿ ಅವಿಭಕ್ತ ಕುಟುಂಬವನ್ನು ಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ ಎಂದರು.
ಹಿರಿಯರು,ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದ ಅವರು ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಅತಿಥಿಯಾಗಿದ್ದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷರಾದ ಭಾಸ್ಕರ ಪೆರುವಾಯಿ ಮಾತನಾಡಿ,ಭವಿಷ್ಯದಲ್ಲಿ ಸಂಘದ ಕಟ್ಟಡ ನಿರ್ಮಾಣ ಅಥವಾ ಯಾವುದೇ ಜನಪಯೋಗಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಸ್ತ್ರೋದ್ಯಮಿ ರಮಾನಂದ ನಾರಾಯಣ ಬಂಗೇರ ನಾಸಿಕ್ ,ಉದ್ಯಮಿ ಮನೋಜ್ ಬಾಸಬೈಲು,ಬಂಟ್ವಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ರಮೇಶ ಸಂಚಯಗಿರಿ,ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಅಧ್ಯಕ್ಷ
ಸುಮಿತ್ ಸಾಲಿಯಾನ್ ವೇದಿಕೆಯಲ್ಲಿದ್ದರು‌.
ಸಂಘದ ಅಧ್ಯಕ್ಷರಾದ ಸೋಮಯ್ಯ ಹನ್ನೆರಡೆಯವರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ಟಿ. ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು.
72 ವರ್ಷ ತುಂಬಿದ ಸಂಘದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ.ಸಿ.ರೋಡು, ಜನಾರ್ಧನ ಸಾಲಿಯಾನ್ ವೀರಕಂಭ, ಧರ್ಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್ ಸೋರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಧೋಳ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ ಅಂಗರ ಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮ ಡಿ. ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಆಮ್ಟಾಡಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಸದಸ್ಯರಾದ ದಿನಕರ ಉದ್ಯಾವರ, ರೋಕಿಂಣಿ, ಓಬಯ್ಯ ಮೂಲ್ಯ ಜತೆ. ಕಾರ್ಯದರ್ಶಿ ಶ್ರೀನಿವಾಸ ಅವರು ಸನ್ಮಾನ ಪತ್ರ ವಾಚಿಸಿದರು.
ಇದೇ ವೇಳೆ
ಆಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮಮೂಲ್ಯ ಮರ್ದೊಳಿ ಅಗಲಿದ ಸದಸ್ಯರ ಮಾಹಿತಿ ನೀಡಿದರು.
ಈ ಸಂದರ್ಭ 2025-27ನೇ ಸಾಲಿಗೆ ಕಾರಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ದೇವದಾಸ್ ಮಾಸ್ಟರ್ ಕೊಡಾಣ್ ನಡೆಸಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಖಚಾಂಚಿ ಸೋಮಪ್ಪ ಬಂಗೇರ ಲೆಕ್ಕ ಪತ್ರ ಮಂಡಿಸಿದರು.

ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು . ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಾದ ವಿಠಲ ಮೂಲ್ಯ ಜಕ್ರಿಬೆಟ್ಟು, ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top