ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ದಿವಂಗತ ರಾಮ ದೇವಾಡಿಗ ಅವರ ಸ್ಮರಣಾರ್ಥ ಕೊಡುಗೆಯಾಗಿ ನಿರ್ಮಿಸಲಾಗಿರುವ ಹೊಸ ಧ್ವಜಾಸ್ತಂಭವನ್ನು ಅವರ ಧರ್ಮಪತ್ನಿ ಸೀತಾ ದೇವಾಡಿಗರವರು ಉದ್ಘಾಟಿಸಿದರು.
SDMC ಅಧ್ಯಕ್ಷರಾದ ಗುಣಪಾಲ್ ದೇವಾಡಿಗರವರು ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿವಂಗತ ರಾಮ ದೇವಾಡಿಗರ ಸ್ಮರಣಾರ್ಥ ಶಾಲೆಗೆ ನೂತನ ಧ್ವಜಸ್ತಂಭವನ್ನುನಿರ್ಮಿಸಿ ಕೊಟ್ಟ ಸೀತಾ ದೇವಾಡಿಗ ಹಾಗೂ ಅವರ ಕುಟುಂಬವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಕೋರ್ದಬ್ಬು ದೈವಸ್ಥಾನ ಕರಂಬಾರು ನ ಅಧ್ಯಕ್ಷರಾದ ಜಗನಾಥ್ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ! ಸಮೀಕ್ಷಾ ಡಿ. ಪಿ , ನಮ್ಮ ಜವನೆರ್ ಕರಂಬಾರು ಅಧ್ಯಕ್ಷರಾದ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಅಧ್ಯಕ್ಷರಾದ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್ ಕೆಂಜಾರು ಕರಂಬಾರು ಅಧ್ಯಕ್ಷರಾದ ಮನೋಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ವಿನೋದ್ ಅರ್ಬಿ, ಖಜಾಂಚಿ ಮಿಥುನ್ ಪೂಜಾರಿ, ಶಾಲಾ SDMC ಉಪಾಧ್ಯಕ್ಷರಾದ ಲಾವಣ್ಯ, ಮಾಜಿ SDMC ಅಧ್ಯಕ್ಷರಾದ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಷಾ ಕಿರಣ ಸ್ವಾಗತಿಸಿದರು, ಗೀತಾ ಟೀಚರ್ ನಿರೂಪಿಸಿ, ವಂದಿಸಿದರು.









































































































































































































