ಮಯೂರ ಪ್ರತಿಷ್ಠಾನ ಮಂಗಳೂರು: ಮಯೂರ ಯಾನ -1. ಕಟೀಲು: ಆ.9ರಂದು ಯಕ್ಷ ವೇಷಭೂಷಣ ಉದ್ಘಾಟನೆ, ಯಕ್ಷಗಾನ

116.3K Views 7 Aug 2025

ಕಿನ್ನಿಗೋಳಿ ಆ.7: ಮಯೂರ ಪ್ರತಿಷ್ಠಾನ ಮಂಗಳೂರು ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ ಯಕ್ಷ ಗುರು ರಕ್ಷಿತ್ ಪಡ್ರೆ ಶಿಷ್ಯವೃಂದದ ನೂತನ ಯಕ್ಷವೇಷಭೂಷಣ ಉದ್ಘಾಟನಾ ಕಾರ್ಯಕ್ರಮ ಮಯೂರಯಾನ-1 ಕಟೀಲು ರಥಬೀದಿ ಶ್ರೀ ಸರಸ್ವತಿ ಸದನದಲ್ಲಿ ಆ.9ರಂದು ನಡೆಯಲಿದೆ.


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿದಾಸ ಆಸ್ರಣ್ಣ ಅವರು ನೂತನ ವೇಷಭೂಷಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಹಿರಿಯ ನ್ಯಾಯವಾದಿ, ಮಯೂರ ಪ್ರತಿಷ್ಠಾನದ ಅಧ್ಯಕ್ಷ ಪಿ.ಸದಾಶಿವ ಐತಾಳ ಅವರು ಅಧ್ಯಕ್ಷತೆ ವಹಿಸಲಿರುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರಾಜೇಶ್ ಕೆ., ಪಣಂಬೂರು ಪಿ.ವಿ.ಐತಾಳ ಇಂಗ್ಲೀಷ್ ಯಕ್ಷಗಾನ ಬಳಗದ ಸಂಚಾಲಕ ಪಿ.ಸಂತೋಷ್ ಐತಾಳ, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ಮಂಗಳೂರು ಯಕ್ಷ ಮಂಜೂಷ ನಿರ್ದೇಶಕಿ ವಿದ್ಯಾ ಕೂಳ್ಯೂರು ಅತಿಥಿಗಳಾಗಿ ಭಾಗವಹಿಸಿಲಿರುವರು.


ಸಂಜೆ ಗಂಟೆ 4.30ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು,5.30ರ ವರೆಗೆ ಪೂರ್ವ ರಂಗ, ಬಳಿಕ ಸಭಾ ಕಾರ್ಯಕ್ರಮ, ಗಂಟೆ 7ರಿಂದ ಮಯೂರ ಪ್ರತಿಷ್ಠಾನ ಕಲಾವಿದರಿಂದ ಯಕ್ಷಗಾನ ಬಯಲಾಟ ಅಶ್ವಮೇಧ ಪ್ರದರ್ಶನ ನಡೆಯಲಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಕೆ.ಸದಾಶಿವ ಐತಾಳ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top