ಮಂಗಳೂರು -“ಎಕ್ಸ್ ಆಂಡ್ ವೈ” ಟೈಟಲ್ ಇಂಗ್ಲೀಷ್ ಆಗಿದ್ರೂ ಪಕ್ಕಾ ಕನ್ನಡ ಸಿನಿಮಾ. ಮನೆಮಂದಿ ಒಟ್ಟಿಗೆ ಕೂತು ನೋಡಬಹುದಾದ ಸೀದಾ ಸಾದಾ ಸಿನಿಮಾ. ಈ ಬಾರಿ ಸತ್ಯಪ್ರಕಾಶ್ ಡಿಫರೆಂಟ್ ಆಗಿರೋ ಕತೆಯನ್ನು ಹಿಡ್ಕೊಂಡು ಬಂದು ಅದನ್ನು ತಾನೇ ಮುಖ್ಯಪಾತ್ರದಲ್ಲಿ ನಟಿಸೋ ಮೂಲಕ ಸ್ವಾರಸ್ಯಕರವಾಗಿ ಸಿನಿಮಾ ಪ್ರೇಮಿಗಳಿಗೆ ನೀಡಿದ್ದಾರೆ. ಹೀಗಾಗಿ ಚಿತ್ರ ಕಷ್ಟವಾಗದೆ ಇಷ್ಟವಾಗುತ್ತೆ.



ಸಿನಿಮಾದ ಹೈಲೈಟ್ ನಟ ಅಥರ್ವ ಪ್ರಕಾಶ್ ಸಿಂಪಲ್ ನಟನೆ. ಎಲ್ಲೂ ನಟಿಸುತ್ತಿದ್ದಾನೆ ಅಂತ ಗೊತ್ತಾಗದಷ್ಟು ಸಹಜವಾಗಿ ಅಥರ್ವ ಅಭಿನಯಿಸಿದ್ದು ನಟಿಯರಾಗಿ ಬೃಂದಾ ಆಚಾರ್ಯ, ಅಯನ ಚೆನ್ನಾಗಿ ನಟಿಸಿದ್ದಾರೆ.

ಸಿನಿಮಾದಲ್ಲಿ ನಮ್ಮಬದುಕು ಭಾವನೆ ಗಳ ಕುರಿತ ಸೊಗಸಾದ ವಿಶ್ಲೇಷಣೆಯಿದೆ. ವೃದ್ಧಾಪ್ಯದಲ್ಲಿ ಅನಾಥಶ್ರಮ ಸೇರುವ ಹೆತ್ತವರು, ಮಕ್ಕಳ ದಾರ್ಷ್ಟ್ಯತನ ಎಲ್ಲವೂ ಸಿನಿಮಾದಲ್ಲಿದ್ದು ಮನರಂಜನೆ ಜೊತೆಗೆ ಒಳ್ಳೆಯ ಸಂದೇಶ ಕೂಡ ಸಿನಿಮಾದಲ್ಲಿದೆ. ಇನ್ನು ಸುಂದರ್, ದೊಡ್ಡಣ್ಣ, ವೀಣಾ ಸುಂದರ್ ರಂತಹ ಹಿರಿಯರು ಕೂಡ ಸಿನಿಮಾದಲ್ಲಿದ್ದಾರೆ. ಒಂದೊಳ್ಳೆ ಸಿನಿಮಾ ಮಿಸ್ ಮಾಡ್ದೆ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ.
©️ಶಶಿ ಬೆಳ್ಳಾಯರು








































































































































































































