ಪವಿತ್ರ ಹಜ್ಜ್ ಕರ್ಮ ನಿರ್ವಹಿಸಿ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಅವರನ್ನು ಬರಮಾಡಿಕೊಡಲು ಕುಟುಂಬಸ್ಥರು ಸ್ನೇಹಿಗಳು ಕಾಯುತ್ತಿದ್ದರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಕಿ ಇರುವ ಕಡತಗಳಿಗೆ ಸಹಿ ಹಾಕುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳನ್ನು ಕರೆಸಿ ಇಷ್ಟು ದಿನ ಬಾಕಿ ಉಳಿದ ಹಲವು ಕಡತಗಳನ್ನು ಪರಿಶೀಲಿಸಿ ಸಹಿ ಹಾಕಿ ಕಳಿಸಿದ್ದಾರೆ.
ಹಜ್ಜ್ ಯಾತ್ರೆ ಮುಗಿಸಿ ಬರುವಾಗ ಸಹಜವಾದ ಅರೋಗ್ಯ ಏರು ಪೇರನ್ನು ಲೆಕ್ಕಿಸದೆ ಸೇವೆಗೆ ಇಳಿದಿರುವುದು ಅವರ ಕೆಲಸದ ಮೇಲಿರುವ ಗೌರವ ಎತ್ತಿ ತೋರಿಸಿವೆ.
ಇದೀಗ ಬೆಂಗಳೂರಿನಲ್ಲೇ ಕೆಲವೊಂದು ಸಭೆಯ ಬಳಿಕ ಮಂಗಳೂರು ತಲುಪಲಿರುವ ಹಾಜಿ ಯು.ಟಿ ಖಾದರ್ ಫರೀದ್ ನಾಳೆ ದಿನ ಪೂರ್ತಿ ಸೇವೆಯಲ್ಲಿ ನಿರತರಾಗಲಿದ್ದಾರೆ.





















































































































































































