ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆ

116.5K Views 5 Jun 2025

ಮಂಗಳೂರು: ನಾಟಕಗಳು ಅಥವಾ ರಂಗಭೂಮಿ ಹೊಸ ದೃಷ್ಟಿಕೋನದತ್ತ ತೆರೆದುಕೊಂಡಾಗ ಮಾತ್ರ ಅದು ಪ್ರೇಕ್ಷಕನನ್ನ ತಲುಪಲು ಸಾಧ್ಯ ಎಂದು ರಂಗಕರ್ಮಿ, ನಾಟಕ ರಚನೆಕಾರ,ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ಅವರು ತ್ರಿನೇತ್ರ ಕಲಾವಿದರು ಮಂಗಳೂರು ಅಭಿನಯಿಸುವ ಬ್ರಹ್ಮರಕ್ಕಸೆ ತುಳು ನಾಟಕದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ನಾಟಕಕಾರ ಶಶಿ ರಾಜ್ ಕಾವೂರು, ಯಶವಂತ ಬೋಳೂರೂ, ಪರಮಾನಂದ ಸಾಲ್ಯಾನ್ ಸಸಿಹಿತ್ಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷುದ್ರ ಶಕ್ತಿಯೊಂದರ ಕಥೆಯಾಧರಿಸಿಕೊಂಡಿರುವಂಹ ಬ್ರಹ್ಮ ರಕ್ಕಸೆ ಭಯಾನಕ ನಾಟಕ ವಿಭಿನ್ನವಾದಂತ ರಂಗ ಸಜ್ಜಿಕೆ, 3ಡಿ ಪರಿಕಲ್ಪನೆ ಯೊಂದಿಗೆ ರಂಗಭೂಮಿಗೆ ಬರಲಿದೆ. ತ್ರಿನೇತ್ರ ಕಲಾವಿದರು ಮಂಗಳೂರು ನಾಟಕವನ್ನು ಅಭಿನಯಿಸುತ್ತಿದ್ದು, ಕಥೆ ಸಾಹಿತ್ಯ ಸಂಭಾಷಣೆ ಪರಿಕಲ್ಪನೆ ನಿರ್ದೇಶನವನ್ನು ನರೇಶ್ ಕುಮಾರ್ ಮಾಡಿದ್ದು ಭಾಸ್ಕರ್ ಸಸಿಹಿತ್ಲು ಸಾರಥ್ಯದಲ್ಲಿ ಸಂಜೀತ್ ಚಿತ್ರಾಪುರ ಇವರ ನಿರ್ಮಾಣ ನಿರ್ವಹಣೆಯಲ್ಲಿ ಬ್ರಹ್ಮರಕ್ಕಸೆ ರಂಗಭೂಮಿಗೆ ಬರಲಿದ್ದು ಒಂದು ವಿಭಿನ್ನ ಪ್ರಯೋಗ ಎನಿಸಿಕೊಳ್ಳಲಿದೆ.

Read More News

ವಿದೇಶಿ ನೆಲ ಅಬುಧಾಬಿಯಲ್ಲಿ ಕನ್ನಡದ ಬಾವುಟ ಹಾರಿಸಿ, ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿ ಕನ್ನಡದ ಕಂಪು ಪಸರಿಸಿದ ಸಮಾಜ ಸೇವೆ, ಸಾಂಸ್ಕೃತಿಕ ರಾಯಭಾರಿಯಾಗಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾದ ಭಾರತದ ಕುವರ. ಕರಾವಳಿ ಕರ್ನಾಟಕದ ಅಮೂಲ್ಯ ಬಂಟ ರತ್ನ, ತುಳುನಾಡಿನ ಬಹುಮುಖ ಪ್ರತಿಭೆ, ಜಾತ್ಯತೀತ ಸೇವಾ ಮನೋಭಾವದ ವಿಶ್ವ ಮಾನವ, ಅಜಾತ ಶತ್ರು, ಮಹಾನ್ ಸಾಧಕ, ಹೆಮ್ಮೆಯ ತುಳುವ, ಮಂಗಳೂರು ಸ್ಟಾರ್ ಸರ್ವೋತ್ತಮ ಶೆಟ್ಟಿಯವರ ಕುರಿತು Mp MLA’s News ಅಂತಾರಾಷ್ಟ್ರೀಯ ವಿಶೇಷ ಸಂದರ್ಶನ. INTERNATIONAL ACHIEVERS Special Interview By: Dr Ashok shetty B N.

Scroll to Top