ಆಂಜೆಲೋರ್‌ ಚರ್ಚ್ ಪಾಲನಾ ಸಮಿತಿಯಿಂದ ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮ

108.7K Views 12 May 2025

ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್‌ ಏಂಜಲ್ಸ್‌ ಚರ್ಚ್, ಆಂಜೆಲೋರ್‌, ಇದರ ಚರ್ಚ್ ಪಾಲನಾ ಸಮಿತಿಯ ಸದಸ್ಯರು ‘ಪ್ರಕೃತಿಯಲ್ಲಿ ಒಂದು ದಿನ’ ವನ್ನು ಬ್ರಹ್ಮಾವರದ ರಮಣೀಯ ತಾಣದಲ್ಲಿ ಕಳೆದರು.
ಚರ್ಚ್ ಗಳಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಚರ್ಚ್ ಪಾಲನಾ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಈ ಸಮಿತಿಯ ಸೇವಾವಧಿ 2025 ಡಿಸೆಂಬರ್ 31 ರ ವರೆಗೆ ಇರುತ್ತದೆ. ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಫೆಡ್ರಿಕ್‌ ಮೊಂತೇರೊ, ವಾಸ್ತವ್ಯ ಧರ್ಮಗುರು ವಂ. ಫಾ. ಸ್ಟೇನಿ ಫೆರ್ನಾಂಡಿಸ್‌, ಚರ್ಚ್ ಉಪಾಧ್ಯಕ್ಷ ಪಾವುಲ್‌ ರೊಡ್ರಿಗಸ್‌, ಕಾರ್ಯದರ್ಶಿ ಲೊಲಿನಾ ಡಿ’ಸೋಜಾ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್‌, ಕಪಿತಾನಿಯೋ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಪ್ರೆಸಿಲ್ಲಾ ಮಿನೇಜಸ್‌, ಬೆಲ್ವದೆರೆ ಕಾನ್ವೆಂಟೊನ ಸುಪೀರಿಯರ್ ಭಗಿನಿ ಸ್ಟೆಫಾನಿಯೋ ಕುವೆಲ್ಲೊ, ಕಾಸಾಗಯಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಪ್ರಮಿಳಾ ಡಿ’ಸೋಜಾ ಮುಂತಾದವರು ಭಾಗವಹಿಸಿದ್ದರು.
ಈ ಪ್ರಕೃತಿ ಪ್ರವಾಸದ ಸಂದರ್ಭದಲ್ಲಿ ಪ್ರಕೃತಿಯ ಸೌಂದಯರ್ವನ್ನು ಸವಿಯುವುದರ ಜತೆಗೆ ಚರ್ಚ್ ನ ಸಮಗ್ರ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ವಿವಿಧ ಆಟೋಟಗಳನ್ನು ಕೂಡಾ ಆಯೋಜಿಸಲಾಗಿತ್ತು.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top