ವಿದ್ಯಾದಾಯಿನಿ ಕಪ್ ವಾಲಿಬಾಲ್ ಪಂದ್ಯಾಟ ಉದ್ಘಾಟನೆ.

103K Views 5 May 2025

ಸುರತ್ಕಲ್ ಹಿಂದೂ ವಿದ್ಯಾದಾಯನಿ ಸಂಘ ಹಾಗೂ ವಿದ್ಯಾದಾಯಿನಿ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ 15 ಹಾಗೂ 18ರ ವಯೋಮಿತಿಯ ಬಾಲಕ, ಬಾಲಕಿಯರ “ವಿದ್ಯಾದಾಯನೀ ಕಪ್ — 2025” ವಾಲಿಬಾಲ್ ಪಂದ್ಯಾಟವನ್ನು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ಇವರು ಉದ್ಘಾಟಿಸಿದರು.

“ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಆಡಿ ಕ್ರೀಡೆಯಲ್ಲಿ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಸಾಧಿಸಿ ತೋರಿಸಿ ಎಂದು ಯುವ ಕ್ರೀಡಾ ಪಟುಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು. ನನ್ನ ಕ್ರೀಡಾ ಸಾಧನೆಗೆ “ಹಿಂದೂ ವಿದ್ಯಾದಾಯಿನಿ ಸಂಸ್ಥೆಯೇ ಪ್ರೇರಣಾಶಕ್ತಿ ” ಎಂದು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ಹಿಂದೂ ವಿದ್ಯಾದಾಯಿನಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀರಂಗ ಎಚ್, ಜೊತೆ ಕಾರ್ಯದರ್ಶಿ ಎಂ ಜಿ ರಾಮಚಂದ್ರ ರಾವ್, ವಿದ್ಯಾದಾಯಿನಿ ಸ್ಫೋಟ್ಸ್ ಅಕಾಡೆಮಿಯ ಸಂಚಾಲಕ ಸುಬ್ರಹ್ಮಣ್ಯ ಟಿ, ಹಿರಿಯ ವಾಲಿಬಾಲ್ ಕೋಚ್ ಎವರೆಸ್ಟ್ ಪಿಂಟೋ, ಮೃದುಲಾ, ಶಾಲೆಯ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರು ಉಪಸ್ಥಿತರಿದ್ದರು.

Read More News

Scroll to Top