ಫೆಬ್ರವರಿ 8ಕ್ಕೆ ಬಂಟ್ಸ್ ಅಸೋಸಿಯೇಶನ್ ಪುಣೆ ಇದರ 12ನೇ ವಾರ್ಷಿಕ ಸಮ್ಮಿಲನ.

110.7K Views 29 Jan 2025

ಪುಣೆ -ಬಂಟರ ಭವನ ಮರ್ಸಿಡಿಸ್ ಶೋ ರೂಂನ ಹತ್ತಿರ ಪೂಣೆ-ಬೆಂಗಳೂರು ಹೈವೇ ಬಳಿ ಬಂಟ್ಸ್ ಅಸೋಸಿಯೇಶನ್ ಪುಣೆ ಇವರ 12ನೇ ವಾರ್ಷಿಕ ಸಮ್ಮಿಲನವು ಫೆಬ್ರವರಿ 8ರ ಶನಿವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ಚೇರ್‍ಮೇನ್ ಕೆ.ಡಿ. ಶೆಟ್ಟಿ ಚೆಲ್ಲಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೈಂದೂರು ಎಂಎಲ್‍ಎ ಗುರುರಾಜ್ ಗಂಟಿಹೊಳೆ ಮತ್ತು ಸುಪ್ರಸಿದ್ಧ ಬಾಲಿವುಡ್ ಸೆಲೆಬ್ರಿಟಿ ಮಿಸಸ್ ಅಮಿತಾ ರಾವ್ ಪಾಲ್ಗೊಳ್ಳಲಿದ್ದಾರೆ. ಬಂಟ್ಸ್ ಅಸೋಸಿಯೇಶನ್ ಪುಣೆಯು ಇದರ ಅಧ್ಯಕ್ಷ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು ಇವರ ಸಾರಥ್ಯದಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳಿಂದ ಬಂಟ ಸಮಾಜದಲ್ಲಿ ವಿಶಿಷ್ಟವಾದ ಪಾತ್ರ, ಹೆಗ್ಗಳಿಕೆ,ಬಂಟ ಬಾಂಧವರ ಪ್ರೀತಿ – ವಿಶ್ವಾಸಗಳಿಗೆ ಪಾತ್ರವಾಗಿದೆ.

Read More News

ಮೇರಿಹಿಲ್ ಪಾಲೆಮಾರ್ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು (ಮೇ. 23 ರಂದು) ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾಲಕತ್ವದ ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಭವ್ಯ ಸಭಾ ಭವನಗಳನ್ನು ಲೋಕಾರ್ಪಣೆ ಮಾಡಿದ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜೀರ್. ಪಾಲೆಮಾರ್ ಅವರನ್ನು ಕೋಟಿಗೊಬ್ಬರು ಎಂದು ಗುಣಗಾನ ಮಾಡಿದ ಜಸ್ಟಿಸ್ ಅಬ್ದುಲ್ ನಜೀರ್.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರಿಂದ ಕರಾವಳಿ ಜನತೆಗೆ ವಿಶಿಷ್ಟ ಕೊಡುಗೆ: ಕರಾವಳಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ನಾಲ್ಕು ಅತ್ಯಾಧುನಿಕ ಅದ್ದೂರಿ ಸಭಾಭವನಗಳ ಲೋಕಾರ್ಪಣೆ

Scroll to Top