ಕರ್ನಾಟಕ ವಾರ್ತೆಗಳು

ಕರ್ನಾಟಕ ವಾರ್ತೆಗಳು

ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ನ. 13 ರಂದು ಉಪ ಚುನಾವಣೆ.

ಬೆಂಗಳೂರು :ಎಚ್ ಡಿಕೆ, ಬೊಮ್ಮಾಯಿ, ಇ. ತುಕಾರಾಂ ಅವರು ಸಂಸದರಾಗಿ ಆಯ್ಕೆಯಾಗಿರುವುದ್ದರಿಂದ ಅವರಿಂದ ತೆರವಾದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ನ. 13 ರಂದು ಉಪ ಚುನಾವಣೆ ನಡೆಯಲಿದ್ದು, ನ. 23 ರಂದು ಫಲಿತಾಂಶ ಹೊರಬೀಳಲಿದೆ. ಸಂಡೂರು, ಚನ್ನಪಟ್ಟಣ, ಶಿಗ್ಗಾoವಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಎನ್ ಡಿ ಎ ಅಭ್ಯರ್ಥಿಗಳು (ಬಿಜೆಪಿ -ಜೆಡಿಎಸ್ ಮೈತ್ರಿ) ಸ್ಪರ್ಧಿಸಲಿದ್ದಾರೆ. ಈ ಪೈಕಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಿದರೆ,ಸಿ. ಪಿ. ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಆಗ ಅಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಬಹುದು. ಚನ್ನಪಟ್ಟಣ ಎಚ್ ಡಿಕೆ ಗೆದ್ದಿದ್ದ ಕ್ಷೇತ್ರವಾಗಿದ್ದು, ಇಲ್ಲಿ ಕಾಂಗ್ರೆಸ್ ನಿಂದ ಡಿ. ಕೆ. ಸುರೇಶ್ ಸ್ಪರ್ಧಿಸುವ ಸುದ್ದಿಯಿದೆ. ಇದು ಒಂದು ರೀತಿಯಲ್ಲಿ ಡಿಕೆಶಿ ಮತ್ತು ಎಚ್ ಡಿ ಕೆ ಅವರ ಪ್ರತಿಷ್ಠೆಯ ಕಣವಾಗಿದೆ.

ಕರ್ನಾಟಕ ವಾರ್ತೆಗಳು

ದರ್ಶನ್ ಗೆ ಸದ್ಯಕ್ಕೆ ಜೈಲೇ ಗತಿ!

ಬ್ರೇಕಿಂಗ್ ನ್ಯೂಸ್. ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿರುವ ದರ್ಶನ್ ಗೆ 57ನೇ CCH ಕೋರ್ಟ್ ಜಾಮೀನು ನಿರಾಕರಿಸಿದೆ. ಈ ಹಿನ್ನಲೆಯಲ್ಲಿ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲಿ ತನಕ ಅಂದರೆ ಇನ್ನು 15 ದಿನಗಳ ಕಾಲ ದರ್ಶನ್ ಗೆ ಜೈಲೇ ಗತಿ!. ದರ್ಶನ್ ಪರವಾಗಿ ಸಿ.ವಿ. ನಾಗೇಶ್ ಮತ್ತು ದಿವಾಕರ್ ವಾದಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ನೀರ್ದೋಷಿ. ರೇಣುಕಾಸ್ವಾಮಿ ಯಾರೆಂದೇ ದರ್ಶನ್ ಗೆ ಗೊತ್ತಿಲ್ಲ. ಇದು ಪೊಲೀಸರೇ ಕಟ್ಟಿದ ಕಟ್ಟು ಕಥೆವೆಂಬುದು ದರ್ಶನ್ ಪರ ವಕೀಲರ ವಾದವಾಗಿತ್ತು. ಆದರೆ, ಕೋರ್ಟ್ ದರ್ಶನ್ ಗೆ ಸದ್ಯ ಬೇಲ್ (ನಿರೀಕ್ಷಣಾ ಜಾಮೀನು) ನಿರಾಕರಿಸಿದೆ.

ಕರ್ನಾಟಕ ವಾರ್ತೆಗಳು

ಮುಡಾ ಕೇಸ್‌ನಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿರುವ ಸಿಎಂ ನಡೆ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು: ಕ್ಷಣಕ್ಷಣಕ್ಕೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಕುತೂಹಲ ಕೆರಳಿಸುತ್ತಿದೆ. ತನ್ನ ವಿರುದ್ಧ ಮುಡಾ ಹಗರಣದ ತನಿಖೆಯ ಕುಣಿಕೆಯಿದ್ದರೂ ಸಿದ್ದರಾಮಯ್ಯನವರು ಸುತರಾಂ ರಾಜೀನಾಮೆ ನೀಡುವುದಿಲ್ಲ, ತನಿಖೆ ಎದುರಿಸುವೆ ಎನ್ನುತ್ತಿದ್ದಾರೆ.ಸಿದ್ಧರಾಮಯ್ಯ ಅವರು ತನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರ ರಹಿತ ರಾಜಕಾರಣಿಯೆಂದು ಜನಜನಿತರಾದವರು. ಆದರೆ, 4೦ ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊತ್ತ ತನಿಖೆ ಎದುರಾಗಿದೆ.ಈ ತನಿಖೆಯನ್ನು ಲೋಕಾಯುಕ್ತ ನಡೆಸಬೇಕಾಗಿದ್ದು, ಅದು ಕರ್ನಾಟಕ ಸರಕಾರದ ಅಧೀನದಲ್ಲಿದೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡದೆ ಸಿಎಂ ಆಗಿಯೇ ತನಿಖೆ ಎದುರಿಸಿದರೆ ಇದು ಪಾರದರ್ಶಕವಾಗಿರುವುದಿಲ್ಲವೆಂದು ದೂರುದಾರ ಸ್ನೇಹಮಯಿ ಕೃಷ್ಣ ಅವರು ಮತ್ತೆ ಹೈಕೋರ್ಟು ಮೆಟ್ಟಿಲೇರಿದ್ದು, ಇದನ್ನು ಸಿಬಿಐಗೆ ನೀಡುವಂತೆ ಕೋರ್ಟಿಗೆ ಮನವಿ ಮಾಡಿದ್ದಾರೆ. ಅಬಕಾರಿ ಹಗರಣದಲ್ಲಿ ಜೈಲು ಸೇರಿ ಬಿಡುಗಡೆಯಾದ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಅವತ್ತು ದೆಹಲಿ ಪೊಲೀಸರು ಬಂಧಿಸಿದ್ದರು. ಆದರೆ, ಸಿದ್ದರಾಮಯ್ಯನವರ ಮೇಲೆ ಎಫ್‌ಐಆರ್ ದಾಖಲಾದರೂ ಕರ್ನಾಟಕ ಪೊಲೀಸರು ಬಂಧಿಸಲಾರರು.ಯಾಕೆಂದರೆ, ದೆಹಲಿಯಲ್ಲಿ ಪೊಲೀಸ್ ವ್ಯವಸ್ಥೆ ಕೇಂದ್ರ ಸರಕಾರದ ಕೈಯಲ್ಲಿದೆ. ಆದರೆ, ಇಲ್ಲಿ ಪೊಲೀಸ್ ವ್ಯವಸ್ಥೆ ಕರ್ನಾಟಕ ಸರಕಾರದ ಅಧೀನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿಯೇ ಮುಂದುವರಿದರೆ ಕರ್ನಾಟಕ ಪೊಲೀಸರು ಅವರನ್ನು ಹೇಗೇ ಬಂಧಿಸಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.ಪ್ರಶ್ನೆಗಳು ಹಲವು ಇರಬಹುದು. ಆದರೆ, ಉತ್ತರ ಒಂದೇ, ಸಿದ್ಧರಾಮಯ್ಯನವರು ಮೂಡಾ ಕೇಸ್‌ನಿಂದ ಹೇಗೇ ನಿರಪರಾಧಿಯಾಗಿ ಹೊರ ಬರುತ್ತಾರೆಂಬ ಜನರ ಸಹಜ ಕುತೂಹಲದ ಕಾತರ. ಏನಿದ್ದರೂ, ಸಿದ್ಧರಾಮಯ್ಯನವರು ಪ್ರಸ್ತುತ ನಡೆ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಅದು ಸಿದ್ಧರಾಮಯ್ಯನವರು ಊಹಿಸಿದ್ದಷ್ಟು ಸುಲಭವಲ್ಲ ಎಂಬುವುದು ಸ್ಪಷ್ಟ ಸಂಗತಿ. ಒಂದು ವೇಳೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಿಪಕ್ಷಗಳ ಕೈ ಮೇಲಾಗುತ್ತದೆ. ಮುಂದೆ ಬರಲಿರುವ ಹೊರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಹೈಕಮಾಂಡ್ ನ ಬೆಂಬಲದೊಂದಿಗೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ತನಿಖೆಯನ್ನು ಎದುರಿಸುತ್ತೇನೆ ಎನ್ನುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಅಷ್ಟು ಸುಲಭವೇ? ಯಾವುದಕ್ಕೂ ಸ್ವಲ್ಪ ಕಾದು ನೋಡೋಣ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು. ಅಂತೂ ಇಂತೂ ಸಿಎಂ ಕುರ್ಚಿ ಅಲುಗಾಡುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

ಕರ್ನಾಟಕ ವಾರ್ತೆಗಳು

ಪಿಲಿಕುಲದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ ಕಂಬಳ ತುಳುನಾಡ ಉತ್ಸವ-ಯು.ಟಿ.ಖಾದರ್

ಬೆಂಗಳೂರು,ಸೆ.12; ಪಿಲಿಕುಲ ನಿಸರ್ಗ ಧಾಮ ಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಂಬಳ ತುಳು ನಾಡ ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲು ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.ಅವರು ಗುರುವಾರ ವಿಧಾನ ಸಭಾ ಕಚೇರಿಯ ಸಭಾಂಗಣದಲ್ಲಿ ಪಿಲಿಕುಲ ಕಂಬಳ,ತುಳು ನಾಡ ಉತ್ಸವದ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಗಳ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು.ಪಿಲಿಕುಲದಲ್ಲಿ ಕೆಲವೊಂದು ಶಾಶ್ವತವಾದ ಕಾಮಗಾರಿಗಳನ್ನು ಕೈ ಗೊಂಡು ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಲು ತುಳು ನಾಡು ಉತ್ಸವದ ಮೂಲಕ ತುಳು ನಾಡಿನ ಕಂಬಳ ಸೇರಿದಂತೆ ಕಲೆ,ಸಂಸ್ಕೃತಿಕ ಕಾರ್ಯಕ್ರಮ ವಸ್ತು ಪ್ರದರ್ಶನಗಳು ಕೃಷಿ ಮೇಳಗಳು ಆಹಾರ ಮೇಳಗಳ ಮೂಲಕ ಚಾಲನೆ ನೀಡುವ ಚಿಂತನೆ ಇದೆ.ಈ ಬಗ್ಗೆ ಸಂಸದರು ಶಾಸಕರು ಅಧಿಕಾರಿಗಳು ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಮಾಲೋಚನೆ ಸಲಹೆ ಸೂಚನೆಗಳನ್ನು ಪಡೆದು ಕಾರ್ಯ ಕ್ರಮ ರೂಪಿಸಲಾಗುವುದು .ಇದಕ್ಕೆ ಪೂರಕವಾಗಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಜಿಲ್ಲಾ ಮಟ್ಟದ ಅಧಿಕಾರಿಗಳು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಕಾರ್ಯ ಯೋಜನೆರೂಪಿಸಲು ಯು.ಟಿ.ಖಾದರ್ ಸಲಹೆ ನೀಡಿದರು‌. ಇದರಿಂದ ಪಿಲಿಕುಲಕ್ಜೆ ಸಾಕಷ್ಟು ಮಂದಿಪ್ರವಾಸಿಗರು,ವಿದ್ಯಾರ್ಥಿಗಳು ಭೇಟಿ ನೀಡಿ ನಿಸರ್ಗ ಧಾಮದ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ ಎಂದು ಯು.ಟಿ. ಖಾದರ್ ವಿವರಿಸಿದರು. ತುಳುನಾಡು ಉತ್ಸವ ವನ್ನು ಈ ಬಾರಿ ಯಶಸ್ವಿಯಾಗಿ ಆಚರಿಸಿ ಮುಂದಿನ ಹಂತದಲ್ಲಿ ರಾಜ್ಯದ ಬಜೆಟ್ ನಲ್ಲಿ ಈ ಉತ್ಸವಕ್ಕೆ ಅನುದಾನ ನಿಗದಿ ಪಡಿಸಿ ಶಾಶ್ವತವಾಗಿ ಕಾರ್ಯಕ್ರಮ ನಡೆಸಬಹುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ,ಪಿಲಿಕುಲದ ಅಭಿವೃದ್ಧಿ ಹಾಗೂ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಒಳ್ಳೆಯ ಉದ್ದೇಶದಿಂದ ಈ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರು ,ಶಾಸಕರು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಸಮಾಲೋಚನಾ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸಂಸದ ಬೃಜೇಶ್ ಚೌಟ ಮಾತನಾಡಿ ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳು ವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್ ರಾಜೇಶ್ ನಾಯ್ಕ್,ಡಾ.ಭರತ್ ಶೆಟ್ಟಿ,ಹರೀಶ್ ಪೂಂಜಾ,ಅಶೋಕ್ ಕುಮಾರ್ ರೈ,ಡಾ.ಮಂಜುನಾಥ ಭಂಡಾರಿ, ಐವನ್ ಡಿ ಸೋಜ ,ಭೋಜೇ ಗೌಡ,ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ದಕ್ಷಿಣ ಕನ್ನಡ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ,ಆಳ್ವಾಸ್ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ಡಾ.ಮೋಹನ್ ಆಳ್ವ,ಪಿಲಿಕುಲ ಅಭಿವೃದ್ಧಿ ಪ್ರತಿಷ್ಠಾನದ ಅಧಿಕಾರಿಗಳು, ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕ ವಾರ್ತೆಗಳು

ಪುತ್ತಿಲರ ವಿರುದ್ದ ದಾಖಲಾದ ಎಫ್ ಐ ಆರ್ ಮತ್ತು ಮುಂದಿನ ತನಿಖೆಗೆ ತಾತ್ಕಾಲಿಕ ತಡೆ.

ಬೆಂಗಳೂರು: ಪುತ್ತಿಲರ ವಿರುದ್ದ ವಿವಾಹಿತ ಮಹಿಳೆಯೊಬ್ಬರಿಂದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲ್ಪಟ್ಟು ದಾಖಲಾದ ಲೈಂಗಿಕ ದೌರ್ಜನ್ಯದ ಎಫ್ಐಆರ್ ಮತ್ತು ಅದರ ಮುಂದಿನ ತನಿಖೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಪುತ್ತಿಲರ ಪರ ಖ್ಯಾತ ಹೈಕೋರ್ಟ್ ನ್ಯಾಯಾವಾದಿ ಪಿ. ಪಿ. ಹೆಗ್ಡೆ ಅವರು ವಾದಿಸಿದ್ದರು.

ಕರ್ನಾಟಕ ವಾರ್ತೆಗಳು

ಬೆಂಗಳೂರು ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರ್ ಶಾಲಾ “ಮಾದರಿ ಸಂಸತ್ತು” ಸ್ಪರ್ಧೆಗೆ ಚಾಲನೆ. ಸ್ಪೀಕರ್ ಯು. ಟಿ. ಖಾದರ್ ರವರ ವಿದ್ಯಾರ್ಥಿ ನಾಯಕತ್ವ ಬೆಳವಣಿಗೆಯ ಆಶಯಕ್ಕೆ ಇಂತಹ ಸ್ಪರ್ಧೆಗಳು ಪೂರಕ : ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ

ಬೆಂಗಳೂರು ದೆಹಲಿ ಸ್ಕೂಲ್ ನಲ್ಲಿ ಎರಡು ದಿನಗಳ ಅಂತರ್ ಶಾಲಾ ಮಾದರಿ ಸಂಸತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಚಾಲನೆ ನೀಡಿದ ಮೀಫ್ ಉಪಾಧ್ಯಕ್ಷ ಮಾತನಾಡಿ ಯು. ಟಿ. ಖಾದರ್ ರವರು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆದ ನಂತರ ತನ್ನ ಪರಿಕಲ್ಪನೆ ಯಂತೆ ನೂರಾರು ವಿದ್ಯಾ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿ ಗಳು ಅಧಿವೇಶನ ವೀಕ್ಷಣೆ ಮಾಡಿರುವುದು ಇಂತಹ ಕಾರ್ಯಕ್ರಮ ಗಳಿಗೆ ಪ್ರೇರಣೆ ಎಂದರು.ಸಂಪನ್ಮೂಲ ವ್ಯಕ್ತಿ ಅಡ್ವೋಕೇಟ್ ಹರೀಶ್ ರವರು ಮಾತನಾಡಿ ಚರ್ಚೆ ಯ ಸ್ವರೂಪಗಳು ರಚನಾ ತ್ಮಕ ವಾಗಿರಲಿ ಎಂದರು.ವಿದ್ಯಾ ಸಂಸ್ಥೆಯ ಉಪ ಪ್ರಾoಶುಪಾಲೆ ಪ್ರೀತಿ, ಕಾರ್ಯಕ್ರಮ ಸಂಯೋಜಕರುಗಳಾದ ಸೋಶಿಯಲ್ ಸಯನ್ಸ್ ಮುಖ್ಯಸ್ಥ ಚಂದ್ರಶೇಖರ್ ಶ್ರೀಮತಿ ಹಂಸ ಮೊದಲಾದವರು ಉಪಸ್ಥಿತರಿದ್ದರುತೀರ್ಪು ಗಾರರಾಗಿ ಆನಂದ್ ಮತ್ತು ಹರ್ಷಿತ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಮುಖಾoಶಗಳುಪ್ರಾರಂಭದಲ್ಲಿ ಮಾದರಿ ಸಂಸತ್ತಿನ ರಾಷ್ಟ್ರಪತಿಗಳು ಶಿಷ್ಟಾಚಾರದಂತೆ ಆಗಮಿಸಿ ಅಧಿವೇಶನಕ್ಕೆ ಆಗಮಿಸಿದಾ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸಿದ ನಂತರ ಮಾದರಿ ಲೋಕಸಭೆ ಅಧಿವೇಶನ ಪ್ರಾರಂಭ ಗೊಂಡಿತು.ಆಡಳಿತ ಪಕ್ಷದ ಸದಸ್ಯರಿಂದ ಸರ್ಕಾರ ದ ಜನಪರ ಕಾರ್ಯಕ್ರಮ ಗಳ ಪ್ರಕಟಣೆ ಪ್ರತಿಪಕ್ಷದ ಸದಸ್ಯರು ಶಿಕ್ಷಣ, ಫಸಲ್ ಭೀಮಾ ಯೋಜನೆ, ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ, ಆರ್ಥಿಕತೆ, ಉದ್ಯೋಗ ವಕಾಶ,ಮೊದಲಾದ ವಿಷಯಗಳಲ್ಲಿ ಕೇಳಿದ ಪ್ರಶ್ನೆ ಗಳಿಗೆ ಆಡಳಿತ ಪಕ್ಷದ ಕೌನ್ಸಿಲ್ ಮಿನಿಸ್ಟರ್ ಗಳು ಉತ್ತರ ನೀಡಿದರು.ಆತ್ಮ ನಿರ್ಭರ, ಮೇಕ್ ಇನ್ ಇಂಡಿಯಾ, ಅಂತ್ಯೋದಯ ಅನ್ನ ಯೋಜನೆ ಮೊದಲಾದ ಜನ ಪರ ಕಾರ್ಯಕ್ರಮ ಗಳ ಬಗ್ಗೆ ವಿವರಿಸಲಾಯಿತು.

ಕರ್ನಾಟಕ ವಾರ್ತೆಗಳು

ದಕ್ಷಿಣ ಭಾರತದ ಸುಪ್ರಸಿದ್ದ, ಪ್ರಶಸ್ತಿ ವಿಜೇತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ ಪ್ರೊಡಕ್ಷನ್ ನಂಬರ್ 14 ಅಮೃತ್ ಫಿಲಂಸ್ ಸೆಂಟರ್ ಅವರ ಭಾರೀ ನಿರೀಕ್ಷೆಯ ಬಹುಭಾಷಾ ಸಿನೆಮಾ “ಹೇ ಪ್ರಭು “ವಿನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಗ್ರಾಮೀಣ ವೈದ್ಯಕೀಯದ ಬಗ್ಗೆ ನೈಜ ಅಭಿನಯದ ಮೂಲಕ ಮಹತ್ವ ಸಾರಿದ ಹೊರನಾಡ ಕನ್ನಡ ರತ್ನ ಡಾ. ಸುಧಾಕರ್ ಶೆಟ್ಟಿ.

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು :ವೈದ್ಯಕೀಯ ಸಮಾಜ ಸೇವೆ ಮೂಲಕ ರಾಷ್ಟ್ರ -ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ದಕ್ಷಿಣ ಕನ್ನಡದ ಮೂಡಬಿದ್ರಿಯ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರಿಗೆ ಚಿಕಿತ್ಸೆ ನೀಡಿದ ಡಾ. ಸುಧಾಕರ್ ಶೆಟ್ಟಿಯವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚಾರ್ ಸಹಿ ಬಜಾದೆ ಅವಾರ್ಡ್, ಕಂಟೋನೂಮೆಂಟ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪಡೆದಿರುವ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್ ನ್ನು ನಡೆಸುತ್ತಿದ್ದೂ, ಪುಣೆಯ ಹೆಸರಾಂತ ಆಸ್ಪತ್ರೆಗಳಲ್ಲಿ ಪ್ರೊಫೆಸರ್ ಆಗಿದ್ದಾರೆ. ಮೂಡಬಿದ್ರಿಯ ಆಳ್ವಾಸ್ ಮೆಡಿಕಲ್ ಕಾಲೇಜ್ ನಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದಾರೆ. ಪುಣೆಯಲ್ಲಿ ಸ್ಲಂ ಮಕ್ಕಳಿಂದ ಎಲ್ಲ ವರ್ಗದ ಮಕ್ಕಳ ತನಕ ಸಾವಿರಾರು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿರುವ ಅವರು ಮೂಡಬಿದ್ರಿಯಲ್ಲಿ ಮಕ್ಕಳ ಸಂಚಾರಿ ಕ್ಲಿನಿಕ್ ನ್ನು ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಕಳೆದೊಂದು ವರ್ಷಗಳಿಂದ ನಡೆಸುತ್ತಿದ್ದಾರೆ. ವೈದ್ಯಕೀಯ ಜಗತ್ತಿನಲ್ಲಿ ನೇರ ನಡೆ ನುಡಿಯ ಕಠಿಣ ಪರಿಶ್ರಮಿ, ದಣಿವರಿಯದ ವೈದ್ಯರಾಗಿರುವ ಇವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಡಾ. ಸುಧಾಕರ್ ಶೆಟ್ಟಿಯವರ ಜನಪ್ರಿಯತೆ ಇದೀಗ ಅವರನ್ನು ಸಿನೆಮಾ ಜಗತ್ತಿನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸುವ ಪಾತ್ರಕ್ಕೆ ಸ್ವತಃ ಬಹುಭಾಷಾ ನಿರ್ದೇಶಕರೊಬ್ಬರು ಆಹ್ವಾನ ಕೊಟ್ಟಿದ್ದು, ಆಗಸ್ಟ್ 24 ರಂದು ಅದರಂತೆ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಿಂದ ಬೆಂಗಳೂರಿಗೆ ಬಂದು’ ಹೇ ಪ್ರಭು ‘ ಎಂಬ ಭಾರೀ ನಿರೀಕ್ಷೆಯ ಬಹು ಭಾಷಾ ಸಿನೆಮಾದಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ್ದಾರೆ. ಬೆಂಗಳೂರಿನ ಬೆಂಗಳೂರು -ಮೈಸೂರು ರೋಡ್ ನಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿದ ಚಿತ್ರದ ಚಿತ್ರೀಕರಣ ನಡೆದಿದೆ. ಗ್ರಾಮೀಣ ವೈದ್ಯಕೀಯ ಕ್ಷೇತ್ರದ ಬಗ್ಗೆ ಮಹತ್ವ ಸಾರುವ ಸಂದೇಶವನ್ನು ಡಾ. ಸುಧಾಕರ್ ಶೆಟ್ಟಿಯವರ ಮೂಲಕ ಚಿತ್ರದ ನಿರ್ದೇಶಕ ವೆಂಕಟ್ ಭಾರಧ್ವಜ್ ಅವರು ನೀಡಿದ್ದಾರೆ. ‘ ಹೇ ಪ್ರಭು’ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಇದು ಅಮೃತ ಫಿಲಂಸ್ ಸೆಂಟರ್ ಅವರ ಸಿನೆಮಾವಾಗಿದೆ. ವೆಂಕಟ್ ಭಾರಧ್ವಜ್ ನಿರ್ದೇಶನದ ಪ್ರೊಡಕ್ಷನ್ ನಂ-14 ಬಹುನಿರೀಕ್ಷೆಯ ಸಿನಿಮಾವಾಗಿದೆ. ಹಳ್ಳಿಗೆ ಹೋಗಲಿಚ್ಚಿಸದ ಚಿತ್ರದ ನಾಯಕ ಯುವ ವೈದ್ಯನಿಗೆ ಗ್ರಾಮೀಣ ವೈದ್ಯಕೀಯದ ಮಹತ್ವವನ್ನು ತಿಳಿಸುವ ಪಾತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ನೈಜ ಅಭಿನಯ ನೀಡಿದ್ದು, ಚಿತ್ರೀಕರಣದ ವೇಳೆ ಅನುಭವದ ಮಾತುಗಳನ್ನಾಡಿದ್ದಾರೆ. ವೆಂಕಟ್ ಭಾರದ್ವಜ್ ಅವರು ಅತ್ಯಂತ ಪ್ರತಿಭಾವಂತ, ಅತ್ಯುತ್ತಮ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದು, ಡಾ. ಸುಧಾಕರ್ ಶೆಟ್ಟಿಯವರು ಹೆಸರಾಂತ ಹಾಗೂ ಹಿರಿಯ ಅನುಭವಿ ಜನಪ್ರಿಯ ವೈದ್ಯರಾಗಿದ್ದು ಈ ಚಿತ್ರದ ವೈದ್ಯಕೀಯ ಪ್ರೊಫೆಸರ್ ಪಾತ್ರಕ್ಕೆ ನೈಜಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಅವರು ಚಿತ್ರದ ಪಾತ್ರಕ್ಕೆ ನಿರೀಕ್ಷೆಗಿಂತ ಹೆಚ್ಚು ನ್ಯಾಯ ಒದಗಿಸಿದ್ದಾರೆಂದಿದ್ದಾರೆ. ಹೇ ಪ್ರಭು ಚಿತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ಈ ಚಿತ್ರದ ಬಗ್ಗೆ ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಲಕ್ಷಾಂತರ ಮಂದಿ ಡಾ. ಸುಧಾಕರ್ ಶೆಟ್ಟಿಯವರ ಅಭಿಮಾನಿಗಳು ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ.ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆದರ್ಶ್ E ಅವರು ಕೂಡಾ ಡಾ. ಸುಧಾಕರ್ ಶೆಟ್ಟಿಯವರ ಜೊತೆ ಅಭಿನಯಿಸಿದ್ದರು.ಹೇ ಪ್ರಭುವಿನಲ್ಲಿ ಡಾ. ಸುಧಾಕರ್ ಶೆಟ್ಟಿಯವರು ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ ದೃಶ್ಯವನ್ನು ನೋಡಲು ಈ ಲಿಂಕ್ ಬಳಸಿ https://drive.google.com/file/d/1F74BbGb2WnvEmBuUWEUG4yC_odjDvAaQ/view?usp=sharing

ಕರ್ನಾಟಕ ವಾರ್ತೆಗಳು

ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಜೇಂದ್ರ ವಿ. ಶೆಟ್ಟಿಯವರು ಅವಿರೋಧವಾಗಿ ಆಯ್ಕೆ

ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜಸೇವಕ, ರಾಜಕೀಯ ಧುರೀಣ ವಿಜಯಾನಂದ ಶೆಟ್ಟಿಯವರು ಧಾರವಾಡದಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ಸಮಾಜಸೇವೆಯೇ ಸರ್ವಸ್ವ ಎಂದು ನಂಬಿರುವ ರಾಜೇಂದ್ರ ವಿ ಶೆಟ್ಟಿಯವರು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಕೊಡಲ್ಪಡುವ 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಕರ್ನಾಟಕ ವಾರ್ತೆಗಳು

ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸಿಎ ಅಶೋಕ್ ಶೆಟ್ಟಿ ಆಯ್ಕೆ.

ಬೆಂಗಳೂರು :ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸಿಎ ಅಶೋಕ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಅವರಿಗೆ Mp mla’s ನ್ಯೂಸ್ ಸಂಪಾದಕ ಡಾ. ಅಶೋಕ್ ಶೆಟ್ಟಿ ಬಿ. ಎನ್. ಅವರು ಶುಭ ಹಾರೈಸಿದ್ದಾರೆ.

ಕರ್ನಾಟಕ ವಾರ್ತೆಗಳು

ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳವರ 39ನೇ ವರ್ಷದ ಚಾತುರ್ಮಾಸ್ಯ ಹಾಗೂ ಕಿರಿಯ ಶ್ರೀಗಳಾದ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳವರು ಪ್ರಥಮ ವರ್ಷದ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪ ಶಿರಸಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ರವಿವಾರ ಗುರುಪೂರ್ಣಿಮೆ ದಿನದಂದು ನೆರವೇರಿತು.

ಶಿರಸಿ: ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀಗಳವರಿಂದ ವ್ಯಾಸ ಪಂಚಕ, ಆದಿಶಂಕರಚಾರ್ಯರ ಪೂಜೆ ಮೂಲಕ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪಿಸಿದರು.ಬಳಿಕ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಕುಲಗುರುಗಳ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ವ್ಯಾಸಕ್ಷತೆ ನಡೆಯಿತು. 12.30ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.ಸೆ. 18ರಂದು ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಸತೀಶ್ ಕಾಪಿಕಾಡ್.

Scroll to Top