ಬೆಂಗಳೂರು :ಎಚ್ ಡಿಕೆ, ಬೊಮ್ಮಾಯಿ, ಇ. ತುಕಾರಾಂ ಅವರು ಸಂಸದರಾಗಿ ಆಯ್ಕೆಯಾಗಿರುವುದ್ದರಿಂದ ಅವರಿಂದ ತೆರವಾದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ನ. 13 ರಂದು ಉಪ ಚುನಾವಣೆ ನಡೆಯಲಿದ್ದು, ನ. 23 ರಂದು ಫಲಿತಾಂಶ ಹೊರಬೀಳಲಿದೆ. ಸಂಡೂರು, ಚನ್ನಪಟ್ಟಣ, ಶಿಗ್ಗಾoವಿ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಎನ್ ಡಿ ಎ ಅಭ್ಯರ್ಥಿಗಳು (ಬಿಜೆಪಿ -ಜೆಡಿಎಸ್ ಮೈತ್ರಿ) ಸ್ಪರ್ಧಿಸಲಿದ್ದಾರೆ. ಈ ಪೈಕಿ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಿದರೆ,ಸಿ. ಪಿ. ಯೋಗೇಶ್ವರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಆಗ ಅಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಬಹುದು. ಚನ್ನಪಟ್ಟಣ ಎಚ್ ಡಿಕೆ ಗೆದ್ದಿದ್ದ ಕ್ಷೇತ್ರವಾಗಿದ್ದು, ಇಲ್ಲಿ ಕಾಂಗ್ರೆಸ್ ನಿಂದ ಡಿ. ಕೆ. ಸುರೇಶ್ ಸ್ಪರ್ಧಿಸುವ ಸುದ್ದಿಯಿದೆ. ಇದು ಒಂದು ರೀತಿಯಲ್ಲಿ ಡಿಕೆಶಿ ಮತ್ತು ಎಚ್ ಡಿ ಕೆ ಅವರ ಪ್ರತಿಷ್ಠೆಯ ಕಣವಾಗಿದೆ.
























































































































































































