ಕರ್ನಾಟಕ ವಾರ್ತೆಗಳು

ಕರ್ನಾಟಕ ವಾರ್ತೆಗಳು

*ಕರ್ನಾಟಕ ಪ್ರದೇಶ ಈಡಿಗರ ಸಂಘದ ಸಮಾಜ ದ್ರೋಹಿ ಕೆಲಸದ ವಿರುದ್ಧ ಹೋರಾಟಕ್ಕೆ ಸಜ್ಜು : ಮಾಲೀಕಯ್ಯ ಗುತ್ತೇದಾರ್*

ಗಂಗಾವತಿ : ರಾಜ್ಯದ ಈಡಿಗ ಸೇರಿದಂತೆ 26 ಪಂಗಡಗಳ ಪ್ರಾತಿನಿಧ್ಯ ಹೊಂದಿದ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಸಮಾಜ ದ್ರೋಹಿ ಕೆಲಸ ಹಾಗೂ ಸ್ವಾರ್ಥ ಸಾಧನೆ ಮಾಡುವುದರ ವಿರುದ್ಧ ಮತ್ತು ಅಧ್ಯಕ್ಷರಾದ ತಿಮ್ಮೇಗೌಡ ಪದಚ್ಯುತಿ ಜೊತೆಗೆ ಎಲ್ಲ ಅಕ್ರಮಗಳ ವಿರುದ್ಧ ಹೋರಾಟ ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವರು ಹಾಗೂ ಸಮಾಜದ ಹಿರಿಯ ಮುಖಂಡರಾದ ಮಾಲೀಕಯ್ಯ ವಿ ಗುತ್ತೇದಾರ್ ತಿಳಿಸಿದರು. ಗಂಗಾವತಿ ಸಮೀಪದ ಕಿಷ್ಕಿಂದ ರೆಸಾರ್ಟ್ ಸಭಾಂಗಣದಲ್ಲಿ ಫೆ.23ರಂದು ಡಾ. ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ನಡೆದ ಸಮಾಜದ ಹಿರಿಯ ಮುಖಂಡರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡು ರಾಜ್ಯದ 26 ಪಂಗಡಗಳ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಹಿರಿಯ ಮುಖಂಡರಾದ ಎಚ್.ಆರ್ ಶ್ರೀನಾಥ್, ಲಕ್ಷ್ಮಿ ನರಸಯ್ಯ ಮುಂತಾದವರ ಉಪಸ್ಥಿತಿಯಲ್ಲಿ ರಾಜ್ಯದಾದ್ಯಂತದಿಂದ ಆಗಮಿಸಿದ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಹಲವು ನಿರ್ಣಯ ಅಂಗೀಕರಿಸಲಾಗಿದೆ ಎಂದು ಮಾಲೀಕಯ್ಯ ಗುತ್ತೇದಾರ್ ಸುದ್ದಿಗಾರರಿಗೆ ತಿಳಿಸಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ತನ್ನ ಸಂಘದ ನೀತಿ ನಿಯಮಾವಳಿಗೆ ವಿರುದ್ಧವಾಗಿ ಸ್ವಾರ್ಥ ಪರವಾಗಿ ಮತ್ತು ತಮ್ಮ ಉದ್ಯಮಗಳ ಬೆಳವಣಿಗೆಗೆ ಮಾತ್ರ ಸಂಘದ ಹೆಸರನ್ನು ಬಳಸಿ ಮುಂದುವರಿ ಯುತ್ತಿದೆ. ಸೋಲೂರು ಮಠದಲ್ಲಿ ಸಂಘಕ್ಕೆ ಉದಾರಿಗಳು ನೀಡಿದ ದೇಣಿಗೆ ಮತ್ತು ಸರಕಾರದಿಂದ ಕೊಡಮಾಡಿದ ಅನೇಕ ಸೌಲಭ್ಯಗಳ ದುರುಪಯೋಗ ಸೇರಿದಂತೆ ಸಮಾಜಕ್ಕೆ ತೀವ್ರತರವಾದ ದ್ರೋಹವೆಸಗಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ಕಟುವಾಗಿ ಆರೋಪಿಸಿದ್ದಾರೆ. ರಾಜ್ಯದ ಈಡಿಗ ಸಮಾಜವನ್ನು ಕತ್ತಲೆಯಲ್ಲಿಟ್ಟು ತಮ್ಮ ಉದ್ಯಮ ಮತ್ತು ಸ್ವಾರ್ಥಲಾಲಸೆಗಾಗಿ ಸಮಾಜದ ಹೆಸರಿನಲ್ಲಿರುವ ಸಂಘವನ್ನು ಬಳಸಿಕೊಳ್ಳಲಾಗುತ್ತಿದೆ. ಸಮಾಜದ ಪರವಾಗಿ ಯಾವುದೇ ಬೇಡಿಕೆ,ಹೋರಾಟಗಳಿಗೆ ಬೆಂಬಲ ನೀಡದೆ ಸಮಾಜದ ಮುಖಂಡರ ನಡುವೆ ವೈ ಮನಸ್ಸು ಹುಟ್ಟು ಹಾಕುವ ಹಾಗೂ ಆಡಳಿತದಲ್ಲಿರುವ ಮುಖ್ಯಮಂತ್ರಿಗಳಿಗೆ ಸಚಿವರುಗಳಿಗೆ ತಪ್ಪು ಮಾಹಿತಿ ನೀಡಿ ಸಮಾಜ ಒಡೆಯುವ ಕೆಲಸದಲ್ಲಿ ನಿರತ ಅಧ್ಯಕ್ಷ ತಿಮ್ಮೇಗೌಡ ಹಾಗೂ ಅವರ ಆಪ್ತಕೂಟದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಕೂಡ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸಲು ರೂಪರೇಷೆ ಹಾಕಲಾಗಿದೆ ಎಂದು ಗುತ್ತೇದಾರ್ ಹೇಳಿದರು. ಡಾ. ಪ್ರಣವಾನಂದ ಶ್ರೀಗಳು ಸಮಾಜದ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಒತ್ತಾಯಿಸಿ ಜನವರಿ 6 ರಿಂದ ಫ್ರೀಡಂ ಪಾರ್ಕ್ ವರೆಗೆ 700 ಕೀ . ಮೀ. ಕೈಗೊಂಡ ಪಾದಯಾತ್ರೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಫೆಬ್ರವರಿ 28ರ ಮೊದಲು ಮಾತುಕತೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ, ಕುಲಕಸುಬು ಸೇಂದಿ ಪುನರಾರಂಭಿಸಲು ಕಾನೂನಾತ್ಮಕ ಹೋರಾಟ ,ಕುಲ ಶಾಸ್ತ್ರೀಯ ಅಧ್ಯಯನ ಸಮರ್ಪಕವಾಗಿ ನಡೆಯಲು ಶೀಘ್ರದಲ್ಲೇ ತಮ್ಮ ನೇತೃತ್ವದಲ್ಲಿ ಸಮಾಜದ 15 ಮಂದಿ ತಜ್ಞರನ್ನು ಸೇರಿಸಿ ಮೈಸೂರಿನ ಕುಲಶಾಸ್ತ್ರೀಯ ಅಧ್ಯಯನ ಸಂಶೋಧನಾ ತಂಡದ ಜೊತೆ ಸಂವಾದ ನಡೆಸಲು ನಿರ್ಧರಿಸಲಾಗಿದೆ. ಪ್ರತಿ ತಿಂಗಳು ಸಭೆ ಸೇರಿ ಕೈಗೊಂಡ ನಿರ್ಣಯಗಳ ಅನುಷ್ಠಾನದ ಪ್ರಗತಿ ಹಾಗೂ ರಾಜ್ಯಾದ್ಯಂತ ಶ್ರೀ ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಹಿರಿಯ ಮುಖಂಡರ ತಂಡ ಪ್ರವಾಸ ಮಾಡಿ ಈಡಿಗ ಸಂಘ ಹಾಗೂ 26 ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಜಾಗೃತಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಗುತ್ತೇದಾರ್ ಸಭೆಯ ಪೂರ್ಣ ಮಾಹಿತಿ ನೀಡಿದರು. ಈ ಸಭೆಯಲ್ಲಿ ಜಿ.ಎನ್ ಸಂತೋಷ್ ಕುಮಾರ್ ಬೆಂಗಳೂರು, ವೆಂಕಟೇಶ ಗುಂಡನೂರ್ ಯಾದಗಿರಿ, ಅಶೋಕ್ ಗುತ್ತೇದಾರ್ ಸಿರವಾರ, ಸುರೇಶ್ ಗುತ್ತೇದಾರದ ಶ್ರೀಮತಿ ರಾಧಾ ಉಮೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ವಾರ್ತೆಗಳು

ಕಾಲ್ತುಳಿತ ಪ್ರಕರಣಕ್ಕೆ ನಿಜವಾದ ಕಾರಣೀಕರ್ತರು ಯಾರು? ಸಿದ್ಧರಾಮಯ್ಯರವರ ಕ್ರಮ ಎಷ್ಟು ಸರಿ?

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಬೆಂಗಳೂರು: 11 ಮಂದಿ ಆರ್‌ಸಿಬಿ ಅಭಿಮಾನಿಗಳ ದುರಂತ ಸಾವಿಗೆ ಸಿದ್ಧರಾಮಯ್ಯನವರು ಐವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್, ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯವರ ವರ್ಗಾವಣೆ, ಆರ್‌ಸಿಬಿ ಮಾರ್ಕೆಟಿಂಗ್ ಹೆಡ್, ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ಐವರ ಮೇಲೆ ಎಫ್‌ಐಆರ್, ಕೆಎಸ್‌ಸಿಎ ಮೇಲೆ ಪ್ರಕರಣ ದಾಖಲು, ಸಿ.ಎಂ ಅವರ ಆಪ್ತ ಕಾರ್ಯದರ್ಶಿ ಗೋವಿಂದ ರಾಜು ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿ ಕ್ರಮದ ಮೇಲೆ ಕ್ರಮವನ್ನು ಜರಗಿಸುತ್ತಾ ಹೋದರೂ ಎಲ್ಲೂ ಕೂಡಾ ಆರ್‌ಸಿಬಿ ಸಂಭ್ರಮಾಚರಣೆಯನ್ನು ಅವಸರವಸರದಿಂದ ತರಾತುರಿಯಲ್ಲಿ ನಡೆಸಿದ್ದು ಏಕೆ ಎಂಬ ಬಗ್ಗೆ ಇನ್ನೂ ಉತ್ತರ ಕೊಟ್ಟಿಲ್ಲ. ಮಾಜಿ ಡಿಜಿಪಿ ಶಂಕರ್ ಬಿದರಿಯವರು ಹೇಳುವಂತೆ, ಇಂಥದ್ದೊಂದು ಅದ್ಧೂರಿ ಕಾರ‍್ಯಕ್ರಮವನ್ನು ನಡೆಸಲು ಇದಕ್ಕೆ ಭದ್ರತೆ ಕೊಡಲು ಕನಿಷ್ಠ 2-3 ದಿನಗಳ ಕಾಲಾವಕಾಶವನ್ನಾದರೂ ಕೊಡಬೇಕಿತ್ತು. ಆದರೆ, ಮುಖ್ಯಮಂತ್ರಿಯವರು ಅದಕ್ಕಾವಕಾಶ ಕೊಡಲಿಲ್ಲ. ಪೊಲೀಸರ ಮೇಲೆ ಒತ್ತಡ ಹಾಕಿ ಕಾರ‍್ಯಕ್ರಮ ಈಗಲೇ ನಡೆಸಬೇಕೆಂದು ಆದೇಶಿಸಿದ್ದರು.ಅಷ್ಟೇ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ‍್ಯಕ್ರಮವನ್ನು ಹಮ್ಮಿಕೊಂಡಾಗ ಅದಕ್ಕೆ ಮೊದಲು ವಿಧಾನಸೌಧದ ಆವರಣದಲ್ಲಿ ಆರ್‌ಸಿಬಿಆಟಗಾರರ ಸನ್ಮಾನ, ವಿಜಯೋತ್ಸವ ಕಾರ‍್ಯಕ್ರಮ ಏರ್ಪಡಿಸಿದ್ದರು. ಇದರಿಂದ ಪೊಲೀಸರು ಎರಡೆರಡು ಕಡೆಗಳಲ್ಲಿ ಭದ್ರತೆ ಕೊಡಬೇಕಾದಅನಿವಾರ‍್ಯತೆಗೆ, ಸಂಕಟಕ್ಕೆ ಸಿಲುಕಿದರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸರ ತಪ್ಪು ಹೇಗಾಗುತ್ತದೆ?ಎರಡೆರಡು ಕಡೆಗಳಲ್ಲಿ ಕಾರ‍್ಯಕ್ರಮ ನಡೆಸುವ ಅಗತ್ಯವೇನಿತ್ತು? ಸ್ವತಃ ಸಿದ್ಧರಾಮಯ್ಯನವರೇ ಹೇಳುವಂತೆ, ಈ ಕಾರ‍್ಯಕ್ರಮಕ್ಕೆ ತಾನು ಒಪ್ಪಿರಲಿಲ್ಲ.ಖಾಸಗಿ ಕಾರ‍್ಯಕ್ರಮ ಎಂದಿದ್ದೆ. ಆದರೆ, ತನ್ನ ಆಪ್ತ ಕಾರ‍್ಯದರ್ಶಿಯೇ ಮನವೊಲಿಸಿದರು. ಮೈಲೇಜ್ ಸಿಗುತ್ತದೆಂದಿದ್ದರು. ಅದಕ್ಕಾಗಿಯೇ ಈಗ ಗೋವಿಂದ ರಾಜು ಅವರನ್ನು ಆಪ್ತ ಕಾರ‍್ಯದರ್ಶಿ ಸ್ಥಾನದಿಂದ ವಜಾಗೊಳಿಸಿದ್ದು ಎಂದು ಸಿ.ಎಂ. ಅವರ ಸಮಜಾಯಿಷಿ ಹೇಳಿಕೆ.ಇನ್ನು ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆದ ವಿಜಯೋತ್ಸವದ ಬಗ್ಗೆ ಹೇಳುವುದಾದರೆ, ಮಧ್ಯಾಹ್ನ 1 ಗಂಟೆಗೆ ಜನ ಸ್ಟೇಡಿಯಂ ಹೊರಗಡೆಗುಂಪು ಸೇರಿದ್ದರು. ಆರ್‌ಸಿಬಿ ಮಾರ್ಕೇಟಿಂಗ್ ಹೆಡ್ ನಿಖಿಲ್ ಸೋಸಲೆ ಉಚಿತ ಪಾಸು ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿಪೋಸ್ಟ್ ಹಾಕಿರುವುದ್ದರಿಂದ ಎರಡೂವರೆ ಲಕ್ಷಕ್ಕೂ ಮಿಕ್ಕಿ ಆರ್‌ಸಿಬಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಆದರೆ, ಸ್ಟೇಡಿಯಂ ಗೇಟ್ ತೆರೆದದ್ದು ಸಂಜೆ 4 ಗಂಟೆಗೆ. ಎಲ್ಲಾ ಗೇಟ್ ತೆಗೆದಿರಲಿಲ್ಲ. ಕೇವಲ ಎರಡು ಗೇಟ್‌ಗಳನ್ನು ಮಾತ್ರ ತೆರೆದಿದ್ದು ಇದರಿಂದ ಆರ್ ಸಿಬಿ ಅಭಿಮಾನಿಗಳು ಒಳಪ್ರವೇಶಿಸಿದಾಗ ಅಡ್ಡಲಾಗಿಟ್ಟಿದ್ದ ಬ್ಯಾರಿಕೇಡ್‌ಗಳು, ಮ್ಯಾನ್‌ಹೋಲ್ ಸ್ಲಬ್ ಕಟ್ ಆಗಿ ಜನ ಕೆಳಗೆ ಬಿದ್ದರು. ಆಗ ಉಸಿರಾಟದ ಸಮಸ್ಯೆ ಎದುರಾಯಿತು. ಕೆಳಗೆ ಬಿದ್ದವರ ಮೇಲೆ ಜನ ನಡೆದು ಹೋದದ್ದರಿಂದ 11 ಮಂದಿ ಸಾವನ್ನಪ್ಪಿ ,47 ಮಂದಿ ಗಾಯಗೊಂಡರು.ಬೇರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿಯಲ್ಲಿ 4, ಮಣಿಪಾಲ್ ಆಸ್ಪತ್ರೆಯಲ್ಲಿ ಒಬ್ಬರು ಹೀಗೇ 11 ಮಂದಿ ಮೃತಪಟ್ಟರು.ಜನರನ್ನು ನಿಯಂತ್ರಿಸಲಾಗದಾಗ ಪೊಲೀಸರು ಸಹಜವಾಗಿಯೇ ಲಾಠಿ ಚಾರ್ಜ್ ಮಾಡಿದ್ದರು. ಜನರು ದುರಂತ ಸಾವಿಗೀಡಾದರೂಆರ್‌ಸಿಬಿ ಸಂಭ್ರಮಾಚರಣೆಯನ್ನು ನಿಲ್ಲಿಸದೇ ಸಮಾರಂಭವನ್ನು ನಡೆಸಿದ್ದು ಸಂಘಟಕರ ಕಟುಕ, ಅಮಾನವೀಯ ನಿಲುವಿಗೆ ಸಾಕ್ಷಿಯಾಯಿತು.ನಿಜ ಹೇಳಬೇಕಾದರೆ, ಇಷ್ಟು ದೊಡ್ಡ ಕಾರ‍್ಯಕ್ರಮವನ್ನು ಯಾವುದೇ ಪೂರ್ವ ತಯಾರಿ, ಸಿದ್ಧತೆಯಿಲ್ಲದೆ ನಡೆಸಿದ್ದು ಅನಾಹುತಕ್ಕೆ, 11 ಮಂದಿ ಆರ್ ಸಿಬಿ ಅಭಿಮಾನಿಗಳ ದುರಂತ ಸಾವಿಗೆ ಕಾರಣವಾಯಿತು.ಈ ಅವಸರದ ಕಾರ‍್ಯಕ್ರಮದ ರೂವಾರಿ ಯಾರು? ಯಾಕೆ ಈ ಬಗ್ಗೆ ಸಿ.ಎಂ. ಮಾತಾಡುತ್ತಿಲ್ಲ? ಇಡೀ ಪ್ರಕರಣಕ್ಕೆ ಪೊಲೀಸ್ ವೈಫಲ್ಯವೇಕಾರಣವೆಂದು ಹೇಳಿ ಐವರು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ಮಾತ್ರಕ್ಕೆ ಜನ ಇದನ್ನು ನಂಬುತ್ತಾರಾ?40 ವರ್ಷಗಳ ರಾಜಕೀಯ ವೃತ್ತಿ ಬದುಕಿನಲ್ಲಿ ಜನಪರವಾಗಿಯೇ ಸಾಗಿದ್ದ ಸಿದ್ಧರಾಮಯ್ಯನವರು ಇಲ್ಲೇಕೇ ಎಡವಿದರು?ಕಾರ‍್ಯಕ್ರಮದ ಜವಾಬ್ದಾರಿ ವಹಿಸಿದ್ದವರ ಮೇಲೆ ಕ್ರಮ ಜರುಗಿಸಲಾಗಿದೆಂದ ಮಾತ್ರಕ್ಕೆ ಇದನ್ನು ಸಾರ್ವಜನಿಕರು ಒಪ್ಪುತ್ತಾರಾ? ಅಮಾನತಿಗೊಳಗಾದ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದ ದಯಾನಂದ್ ಅವರು 1998ರಲ್ಲಿ ಪುತ್ತೂರು ಎಎಸ್ಪಿಯಾಗಿದ್ದರು. ತದನಂತರ, ದಕ್ಷಿಣ ಕನ್ನಡದ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದರು. ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದು ಖಡಕ್ ಆಡಳಿತ ನೀಡಿದ ಅವರಿಗೆ ಇನ್ನು ಒಂದೆರಡು ತಿಂಗಳಲ್ಲಿ ಡಿಜಿಪಿಯಾಗುವ ಅವಕಾಶವಿತ್ತು.ದಯಾನಂದ್‌ರವರ ಆಪ್ತರೊಬ್ಬರು ಕಾಂಗ್ರೆಸ್ ಹೈಮಾಂಡ್ ಸೋನಿಯಾ ಗಾಂಧಿಯವರ ಆತ್ಮೀಯರಾಗಿದ್ದು, ದಯಾನಂದ್ ಅವರು ಮನಸ್ಸು ಮಾಡಿದ್ದರೆ ಸಸ್ಪೆಂಡ್ ಆದೇಶವನ್ನು ತಕ್ಷಣ ರದ್ದುಗೊಳಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದಯಾನಂದ್ ಪರ ಅಭಿಯಾನ ನಡೆಯುತ್ತಿದೆ. ಇದರ ಮಧ್ಯೆ ಐಪಿಎಸ್ ಅಧಿಕಾರಿಗಳೆಲ್ಲರೂ ಒಟ್ಟು ಸೇರಿ ಐವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ.ಅಧಿಕಾರಿಗಳೆಂದರೆ ಮೊದಲೇ ಸಿಎಂಗೆ ಅಲರ್ಜಿ ಎಂದು ಸಿದ್ಧರಾಮಯ್ಯನವರ ಮೇಲೆ ಈ ಹಿಂದೆಯೇ ಬಹಳಷ್ಟು ಟೀಕೆಗಳಿದ್ದವು. ಅದೀಗ ನಿಜವಾಗಿದೆ.ಸಿದ್ಧರಾಮಯ್ಯನವರು ಮಾಡಿದ್ದು ಎಷ್ಟು ಸರಿ ಎಂಬುವುದು ಚರ್ಚೆಗೆ ಗ್ರಾಸವಾಗಿದೆ.ಇನ್ನೊಂದೆಡೆ, ಇಪ್ಪತ್ತೈದು ಲಕ್ಷ ಕೊಟ್ಟ ಕೂಡಲೇ ಹೋದ ಜೀವ ವಾಪಸ್ ಬರುತ್ತದಾ.ನಾನು ಐವತ್ತು ಲಕ್ಷ ಕೊಡುತ್ತೇನೆ.ನನ್ನ ಮಗನನ್ನು ಜೀವಂತವಾಗಿ ವಾಪಸ್ ಕೊಡುತ್ತೀರಾ ಎಂದು ಮೃತ ಯುವಕನ ಪೋಷಕರೊಬ್ಬರು ಕೇಳುತ್ತಿದ್ದಾರೆ. ಎಲ್ಲದಕ್ಕೂ ಉತ್ತರಿಸಬೇಕಾದ ಹೊಣೆಗಾರಿಕೆ ಸಿಎಂ ಸಿದ್ದರಾಮಯ್ಯ ನವರ ಮೇಲಿದೆ.ಇದಕ್ಕೆ ಆರ್ ಸಿಬಿ ಅಭಿಮಾನಿಗಳ ಅಂಧಾಭಿಮಾನ ಕೂಡಾ ಕಾರಣವಾಗಿದೆ. ಆರ್ ಸಿಬಿ ಕ್ರಿಕೆಟ್ ತಂಡವನ್ನು ಐದು ವರ್ಷಗಳ ಮಟ್ಟಿಗೆ ಬ್ಯಾನ್ ಮಾಡಬೇಕೆಂಬ ಕೂಗು ಕೂಡಾ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಕರ್ನಾಟಕ ವಾರ್ತೆಗಳು

ಭೀಕರ ಕಾಲ್ತುಳಿತದಿಂದ ಮೃತ ಪಟ್ಟ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳಿಗೆ 11 ಲಕ್ಷ ರೂಪಾಯಿ ಪರಿಹಾರ ಘೋಷಣೆ. ಈ ದುರಂತ ಸಾವಿಗೆ ಯಾರೂ ಕಾರಣ?

ವಿಶೇಷ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಯನ್.ಬೆಂಗಳೂರು- ಆರ್ ಸಿ ಬಿ ವಿಜಯೋತ್ಸವದ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತಕ್ಕೆ ಮೃತಪಟ್ಟ 11ಮಂದಿಗಳ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆಯಾಗಿದೆ. ಘಟನೆಗೆ ಕಾರಣ ಸರಕಾರವೇ,ಪೊಲೀಸ್ ಇಲಾಖೆಯೇ,ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಸಾರ್ವತ್ರಿಕ ಒತ್ತಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸುದ್ಧಿ ಗೋಷ್ಠಿ ನಡೆಸಿ ಇದರಲ್ಲಿ ರಾಜಕೀಯ ಬೇಡ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅರ್ಸಿಬಿ ಸಂಭ್ರಮ ಆಚರಣೆ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟ 11ಮಂದಿಗೆ ತಲಾ 10ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಗೊಂಡ 47ಮಂದಿಗಳ ಚಿಕಿತ್ಸೆಯ ಸಂಪೂರ್ಣ ಖರ್ಚು ವೆಚ್ಚ ಭರಿಸಲಾಗುವುದೆಂದು ಸಿಎಂ ತಿಳಿಸಿದ್ದಾರೆ. ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈ ಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆಯಾಗಿರುವುದ್ದರಿಂದ ತನಿಖೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ನೀಡಲಾಗಿದೆ.ತನಿಖೆ ನಡೆಸಿ ಸಂಪೂರ್ಣ ವರದಿ ಒಪ್ಪಿಸಲು ಅವರಿಗೆ ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆಂದು ಸಿಎಂ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಲ್ತುಳಿತಕ್ಕೆ ಕಾರಣವೇನು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬಂದವರಿಗೆ ಮಾತ್ರ ಅವಕಾಶ ನೀಡಲಾಗುವುದೆಂದು KSCA ಹೇಳಿತ್ತು. ಜನ ಜೂನ್ 4ರ ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ನೆರೆದಿದ್ದರು.ಆದರೆ,ಗೇಟ್ ಓಪನ್ ಮಾಡಿದ್ದು 4ಗಂಟೆಗೆ.ಆಗ ಲಕ್ಷಕ್ಕೂ ಮಿಕ್ಕಿ ಆರ್ ಸಿ ಫ್ಯಾನ್ಸ್ ಗಳು ಒಮ್ಮೆಲೇ ರಭಸದಿಂದ ನುಗ್ಗಿದ್ದರು.ಆಗ ಬ್ಯಾರಿಕೇಡ್ ಗಳು ತುಂಡಾದವು.ಇನ್ನೊಂದು ಗೇಟ್ ನಲ್ಲಿಯೂ ಫ್ಯಾನ್ಸ್ ಗಳು ನುಗ್ಗಿದಾಗ ಮ್ಯಾನ್ ಹೋಲ್ ಸ್ಲಬ್ ಕಟ್ ಆಗಿ ಜನ ಕೆಳಗೆ ಬಿದ್ದರು. ಇದರಿಂದ ಉಸಿರಾಟದ ಸಮಸ್ಯೆ ಉಂಟಾಯಿತು. ಮಿತಿ ಮೀರಿದ ಜನರ ನಡುವೆ ನೂಕು ನುಗ್ಗಲು ಶುರುವಾಗಿ ಕೆಳಗೆ ಬಿದ್ದವರ ಎದೆ ಮೇಲೆ ಜನ ತುಳಿದು ಮುನ್ನುಗಿದರು. ಹೀಗೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೀಕರ ಕಾಲ್ತುಳಿತ ನಡೆಯಿತು. ಮೊದಲು ಟಿಕೆಟ್ ಬುಕ್ ಮಾಡಿದ್ದ 20ಸಾವಿರ ಮಂದಿಗೆ ಮಾತ್ರ ಪ್ರವೇಶಾವಕಾಶವೆಂದು KSCA ಹೇಳಿದ್ದು,,ಉಳಿದ ಲಕ್ಷಕ್ಕೂ ಮಿಕ್ಕಿ ಜನರ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮಾಡಿದ್ದು ಈ ವೇಳೆ ಕ್ರೀಡಾಂಗಣದ ಗೇಟ್ ಮುರಿದ ಘಟನೆ ನಡೆದು ಕಾಲ್ತುಳಿತ ಸಂಭವಿಸಿ 11ಮಂದಿ ಆರ್ ಸಿಬಿ ಫ್ಯಾನ್ಸ್ ಗಳ ದುರಂತ ಸಾವು ಸಂಭವಿಸಿದೆ..ಅವಸರದಿಂದ ಸರಿಯಾದ ಪ್ಲಾನಿಂಗ್ ಮಾಡದೆ ವಿಜಯೋತ್ಸವ ಸಂಭ್ರಮವನ್ನು ಸಂಘಟಿಸಿದ್ದು ಅಮಾಯಕ 11ಜನರ ಸಾವಿಗೆ ಕಾರಣವಾಯಿತು.ಪೊಲೀಸ್ ವ್ಯವಸ್ಥೆ ವೈಫಲ್ಯ,ಸರಕಾರದ ನಿರ್ಲಕ್ಷ್ಯವೇ ಈ ದುರಂತ ಘಟನೆಗೆ ಕಾರಣವಾಗಿದೆಂದರೂ ತಪ್ಪಲ್ಲ .ಆರು ಮಂದಿ ಬೇರಿಂಗ್ ಆಸ್ಪತ್ರೆಯಲ್ಲಿ , ನಾಲ್ಕು ಮಂದಿ ವೈದೇಹಿ ಆಸ್ಪತ್ರೆಯಲ್ಲಿ,ಒಬ್ಬರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.ಜೊತೆಗೆ , ಆರ್ ಸಿ ಬಿ ಕೂಡಾ ಸಂತಾಪ ಸೂಚಿಸಿದೆ.11 ಮಂದಿಗಳ ದುರಂತ ಸಾವಿಗೆ ರಾಜ್ಯ ಸರಕಾರವೇ ನೇರ ಹೊಣೆಯೆಂದು ಬಿಜೆಪಿ ಆರೋಪಿಸಿದೆ.

ಕರ್ನಾಟಕ ವಾರ್ತೆಗಳು

ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

ಬೆಂಗಳೂರು, ಏಪ್ರಿಲ್‌ 23 (ಕರ್ನಾಟಕ ವಾರ್ತೆ) :ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ – 2024 ಅನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರವು ಡಿಜಿಟಲ್‌ ಜಾಹೀರಾತಿಗಾಗಿ ಡಿಜಿಟಲ್‌ ಜಾಹೀರಾತು ಏಜೆನ್ಸಿ ಮತ್ತು ಡಿಜಿಟಲ್‌ ಮಾಧ್ಯಮಗಳನ್ನು ಎಂಪ್ಯಾನಲ್‌ಮೆಂಟ್‌ ಮಾಡಿಕೊಳ್ಳುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್‌ ಏಜೆನ್ಸಿ ಮತ್ತು ಮಾಧ್ಯಮಗಳನ್ನು ನೊಂದಾಯಿಸಿಕೊಳ್ಳಲಾಗುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕೆಲವು ವರ್ಷಗಳಿಂದ ಮಾಧ್ಯಮದ ವ್ಯಾಪ್ತಿ ಮತ್ತು ಸ್ವರೂಪ ಬದಲಾಗಿದೆ. ಅಂತರ್ಜಾಲ, ಖಾಸಗಿ ಕಂಪ್ಯೂಟರ್‌, ಸ್ಮಾರ್ಟ್‌ ಟಿವಿ ಹಾಗೂ ಸ್ಮಾರ್ಟ್‌ ಫೋನ್‌, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್‌ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಜೊತೆಗೆ, ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮಾದರಿಯಲ್ಲಿ ಡಿಜಿಟಲ್‌ ಜಾಹೀರಾತು ನೀಡಲು ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿಯನ್ನು ಸರ್ಕಾರ ಹೊರತಂದಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೊಸ ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ ಅನ್ವಯ ಎಲ್ಲಾ ಇಲಾಖೆಗಳು, ನಿಗಮಗಳು, ಪ್ರಾಧಿಕಾರಗಳು, ಮಂಡಳಿಗಳು, ಸ್ಥಳೀಯಾಡಳಿತಗಳು, ಪುರಸಭೆಗಳು, ನಗರ ಪಾಲಿಕೆಗಳು ಮೊದಲಾದವುಗಳಲ್ಲಿ ಡಿಜಿಟಲ್‌ ಜಾಹೀರಾತುಗಳನ್ನು ಕಡ್ಡಾಯವಾಗಿ ಈ ಮಾರ್ಗಸೂಚಿಗೆ ಅನುಸಾರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬಿಡುಗಡೆ / ಪೂರೈಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ ಅನ್ವಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್‌ (ಯೂಟ್ಯೂಬ್‌), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ ಬಿಸಿನೆಸ್‌, ವಾಟ್ಸಾಪ್‌ ಚಾನಲ್), ಸರ್ಚ್ ಇಂಜಿನ್‌ಗಳಾದ ಗೂಗಲ್‌, ಬಿಂಗ್‌, ಸಾಮಾಜಿಕ ಜಾಲತಾಣಗಳಾದ ಎಕ್ಸ್‌ (ಈ ಹಿಂದೆ ಟ್ವಿಟರ್‌), ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಲಿಂಕ್‌ಡ್‌ಇನ್‌, ವಾಟ್ಸಾಪ್‌, ಸ್ನಾಪ್‌ಚಾಟ್‌, ಟೆಲಿಗ್ರಾಂ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್‌, ಅಮೇಜಾನ್‌ ಫ್ರೈಮ್‌, ಡಿಸ್ನಿ ಹಾಟ್‌ಸ್ಟಾರ್‌ ಸೋನಿಲೈವ್‌, ಜಿಯೋ ಸಿನಿಮಾ, ಜೀ 5, ವೂಟ್‌, ಸನ್‌ ನೆಕ್ಸ್ಟ್‌ ಮತ್ತು ಟಾಕೀಸ್, ಫಿನ್‌ಟೆಕ್‌ ಪ್ಲಾಟ್‌ಫಾರ್ಮ್‌ಗಳಾದ ಪೇಟಿಎಂ, ಪೋನ್‌ಪೇ ಮತ್ತು ಜಿಪೇ ಸೇರಿದಂತೆ ಇನ್ನಿತರ ಡಿಜಿಟಲ್‌ ವೇದಿಕೆಗಳಡಿ ಜಾಹೀರಾತು ಅರ್ಹ ಏಜೆನ್ಸಿಗಳ ಮೂಲಕ ನೀಡಲು ಅವುಗಳನ್ನು ಎಂಪ್ಯಾನಲ್‌ ಮಾಡಿಕೊಳ್ಳಲು ವಾರ್ತಾ ಇಲಾಖೆಯು ಉದ್ದೇಶಿಸಿದೆ.ಹಾಗೆಯೇ, ಅಪ್ಲಿಕೇಶನ್ ಡೌನ್‌ಲೋಡ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಬರುವ ವೀಡಿಯೊ, ಡಿಸ್‌ಪ್ಲೇ ಮತ್ತು ಸರ್ಚ್‌ ಸೇರಿದಂತೆ ವಿವಿಧ ವೇದಿಕೆಗಳಡಿ ಜಾಹೀರಾತು ನೀಡಿಕೆ, ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪಲ್‌ ಆಪ್‌ ಸ್ಟೋರ್‌ನಲ್ಲಿ ಕನಿಷ್ಠ 1 ಲಕ್ಷ ಡೌನ್‌ಲೋಡ್‌ ಹೊಂದಿರುವ ಯಾವುದೇ ಆಪ್‌ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವ ಯಾವುದೇ ಡಿಜಿಟಲ್ ಘಟಕ-ವೆಬ್ ಅಪ್ಲಿಕೇಶನ್ ಅಥವಾ ಮೊಬೈಲ್ ಅಪ್ಲಿಕೇಶನ್ ಸೇರಿದಂತೆ ವಿವಿಧ ಮೂಲಗಳಿಂದ ಸುದ್ದಿಗಳನ್ನು ಸಂಗ್ರಹಿಸಿ ಜನರಿಗೆ ನೀಡುವ ವೇದಿಕೆಗಳು. ಇನ್‌ಶಾರ್ಟ್‌ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲ್ಯುಯೆನ್ಸರ್‌ಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಜಾಹೀರಾತು ಪಡೆಯಲು ಅರ್ಹತೆ ಹೊಂದುತ್ತವೆ. ಡಿಜಿಟಲ್ ಜಾಹೀರಾತಿಗಾಗಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಸಹಯೋಗ ಹೊಂದಲು ಬಯಸುವ ಏಜೆನ್ಸಿಗಳು ಭಾರತ ಸರ್ಕಾರದ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ನಲ್ಲಿ ನೋಂದಣಿಯಾದ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಪಬ್ಲಿಕ್‌ ಲಿಮಿಟೆಡ್‌ ಕಂಪನಿ, ಪಾಲುದಾರಿಕೆ, ಲಿಮಿಟೆಡ್‌ ಲಯಬಿಲಿಟಿ ಪಾಲುದಾರಿಕೆ ಹೊಂದಿರಬೇಕು. ಎಂಪ್ಯಾನೆಲಿಂಗ್‌ ಸಮಯದಲ್ಲಿ ಕನಿಷ್ಠ ಎರಡು ವರ್ಷವಾಗಿರಬೇಕು. ಜಿಎಸ್‌ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಕಚೇರಿ ಇರಬೇಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಇರಬೇಕು. ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ಆಳವಾದ ಜ್ಞಾನವಿರಬೇಕು. ಸರ್ಕಾರಗಳಿಗೆ ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ಜಾಹೀರಾತು ನೀಡಲು ಗೂಗಲ್‌ ಅಥವಾ ಮೆಟಾ ಜೊತೆಗೆ ಮಾನ್ಯವಾದ ಒಪ್ಪಂದ/ಒಡಂಬಡಿಕೆ ಹೊಂದಿರಬೇಕು. ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸರ್ಕಾರದ ಜಾಹೀರಾತು ನೀಡಲು ಗೂಗಲ್‌ ಅಥವಾ ಮೆಟಾದಿಂದ ಅನುಮತಿ ಪಡೆದುಕೊಂಡಿರಬೇಕು ಎಂದು ಷರತ್ತುಗಳನ್ನು ನಿಗದಿ ಪಡಿಸಿದೆ.ಡಿಜಿಟಲ್‌ ಮಾಧ್ಯಮ ಘಟಕಕ್ಕೆ ಅರ್ಹತೆವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಡಿಜಿಟಲ್‌ ಜಾಹೀರಾತು ನೀಡಲು ಎಂಪ್ಯಾನೆಲ್‌ಮೆಂಟ್‌ಗಾಗಿ ಡಿಜಿಟಲ್‌ ಮಾಧ್ಯಮ ಘಟಕವು ಭಾರತದ ಸರ್ಕಾರದ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು. ಕನಿಷ್ಠ ಒಂದು ವರ್ಷ ಕಾಲ ಯಾವುದೇ ಸಮಯದ ಅಂತರವಿಲ್ಲದೆ ನಿರಂತರವಾಗಿ ಕಂಟೆಂಟ್‌ ಪ್ರಕಟಿಸಿರಬೇಕು.

ಕರ್ನಾಟಕ ವಾರ್ತೆಗಳು

ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಬಹಳ ಮುಖ್ಯ – ಕರ್ನಾಟಕದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹೆಚ್ ವಿಶ್ವನಾಥ್

ನಮ್ಮನ್ನು ಆಳುವವರು ಯಾರು? ಸರಕಾರ, ರಾಜ ಮಹರಾಜರುಗಳು ಯಾರೂ ಅಲ್ಲ. ಅಧಿಕಾರ ಅಂತಸ್ತುಗಳೂ ಅಲ್ಲ. ನನ್ನನ್ನು ಆಳುವುದು ನನ್ನ ಮನಸ್ಸು. ಅಂತಹ ಮನಸನ್ನು ಮುದವಾಗಿಡುವುದೇ ಸಾಹಿತ್ಯ, ಸಂಸ್ಕೃತಿ, ಕಲೆ, ನೃತ್ಯ. ಇದೆಲ್ಲದಕ್ಕೂ ಹೆಸರಿರುವ ನಾಡು ಮೈಸೂರು. ಅದೆಲ್ಲವನ್ನು ಕೂಡಾ ಜನರಿಗೆ ಪರಿಚಯಿಸಿ ಜನರು ಭಾಗವಹಿಸುವಂತೆ ಒಂದು ದೊಡ್ಡ ಅವಕಾಶ ಕಲ್ಪಿಸಿಕೊಟ್ಟವರು ಮೈಸೂರು ಯದುವಂಶದ ಅರಸರು. ಒಂದು ಗಂಟೆ ಎರಡು ಗಂಟೆೆ ಕೂತು ನಾಟಕ ನೋಡುವುದು ಸಾಹಿತ್ಯ ಸಂಸ್ಕೃತಿ ಕಲೆಯನ್ನು ಆಸ್ವಾದಿಸುವುದು ಮನುಷ್ಯನಿಗೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಕರ್ನಾಟಕ ಸರಕಾರದ ಮೊದಲ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಹಾಲಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.ಅವರು ರಾಷ್ಟೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ದಿನಾಂಕ 25-01-2025ನೇ ಶನಿವಾರ ಕೆ.ಎಸ್.ನರಸಿಂಹ ಸ್ವಾಮಿ ಜನ್ಮದಿನ ಪ್ರಯುಕ್ತ ಮೈಸೂರು ಪುರಭವನದಲ್ಲಿ ಆಯೋಜಿಸಿದ “ಮಲ್ಲಿಗೆ ಕಂಪು” ವಿಚಾರ ಗೋಷ್ಠಿ- ಕವಿಗೋಷ್ಠಿ – ಕೃತಿ ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೈಸೂರಿನ ಪ್ರೇಮ ಕವಿಯ ಮಲ್ಲಿಗೆ ಕಂಪು ಕಾರ್ಯಕ್ರಮ ಆಯೋಜಿಸಲು ಮಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಗಂಗಾಧರ ಗಾಂಧಿ ತಂಡವನ್ನು ನಾನು ಅಭಿನಂದಿಸುವೆ. ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಮೈಸೂರು ಮಲ್ಲಿಗೆ ಕಂಪು ಸದಾ ಹಸಿರಾಗಿರಬೇಕು. ಆ ಮೂಲಕ ಮೈಸೂರು ಮಲ್ಲಿಗೆಯ ಕಂಪು ಜಗದಗಲ ಹಬ್ಬ ಬೇಕೆಂದು ಹೇಳಿದರು. ಇದಕ್ಕೂ ಮುನ್ನ ಕೆ.ವಿ. ಲಕ್ಷ್ಮಣ ಮೂರ್ತಿ ಸಾರಥ್ಯದಲ್ಲಿ ಮೂಡಿಬಂದ ಭೂತಾಯಿ, ಕವನ ಕೃಷಿಕ, ರಾಣಿ ಅಬ್ಬಕ್ಕದೇವಿಯ ಜೊತೆ ಪಯಣ, ಮಾತೃ ಮಡಿಲು ಎಂಬ ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆ.ಎಸ.ನರಸಿಂಹ ಸ್ವಾಮಿಯವರ ಸಾಹಿತ್ಯವನ್ನು ಓದಿ ಗೀತೆಗಳನ್ನು ಆಲಿಸಿ ಬೆಳೆದವರು ನಾವು.ಮತ್ತು ಅವರು ನಮ್ಮ ಮೆಚ್ಚಿನ ಕವಿ ಈ ಕಾರಣದಿಂದಾಗಿ ಅವರ ಜನ್ಮ ದಿನಾಚರಣೆಯನ್ನು ಅನೇಕ ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ.ಈ ಕಾರ್ಯಕ್ರಮವನ್ನು ಈ ಬಾರಿ ಅವರ ಜನ್ಮ ಜಿಲ್ಲೆ ಮೈಸೂರಿನಲ್ಲಿ ನಡೆಸಬೇಕು ಎಂಬ ಆಲೋಚನೆಯಿಂದ ಅವರು ಪ್ರಥಮ ಬಾರಿ ಉದ್ಯೋಗವನ್ನು ಆರಂಭಿಸಿದ ಮೈಸೂರಿನ ಪುರಭವನದಲ್ಲಿ ಆಯೋಜಿಸಿದ್ದೇವೆ.. ಇದು ನಮಗೂ ಸಂತಸ ತಂದಿದೆ ಮತ್ತು ಅವರ ಪುತ್ರ ಕೆ. ಎನ್. ಮಹಾಬಲ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತಂದಿದೆ.ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆಗೈದ ಡಾ. ಅಯುಬ್ ಅಹಮದ್‌ಜಿ, ಯಶೋಧಾ ಆರ್., ರಾಣಿಪ್ರಭ ಹೆಚ್. ಪಿ. ಮಾಧ್ಯಮ ಕ್ಷೇತ್ರದಲ್ಲಿ ಜಯಂತ್ ಜಿ, ಮತ್ತು ಸಂಘಟನಾ ಕ್ಷೇತ್ರದಲ್ಲಿ ಡಾ. ಪಳನಿಸ್ವಾಮಿ ಮೂಡುಗೂರು ಇವರಿಗೆ NSCDF ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರು ಮಹರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮನಾಪುರ, ಲೇಖಕ ಮತ್ತು ವಿಶ್ರಾಂತ IFS ಅಧಿಕಾರಿ ಕೆ.ವಿ.ಲಕ್ಷ್ಮಣ ಮೂರ್ತಿ, ಲೇಖಕ ಮತ್ತು ಕೆ.ಎಸ್.ನರಸಿಂಹಸ್ವಾಮಿ ಪುತ್ರ, ಕೆ. ಎನ್. ಮಹಾಬಲ, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಭಾಗವಹಿಸಿದ್ದರು.ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಯಪ್ಪ ಹೊನ್ನಳ್ಳಿ ಮಾತನಾಡಿ ಕನ್ನಡ ಕಾವ್ಯ, ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಮುಂತಾದ ಹಲವು ರೂಪ ಪಡೆದು ಬದಲಾಗುತ್ತ ಬಂದರು ನವೋದಯದಲ್ಲಿ ಹೊರಹೊಮ್ಮಿದ ಕೆ.ಎಸ್. ನರಸಿಂಹ ಸ್ವಾಮಿಯವರು ಸರ್ವ ಕಾಲಕ್ಕೂ ಸಲ್ಲುವ ಕವಿ. ಅವರ ಮೈಸುರು ಮಲ್ಲಿಗೆ ಅಮರ ಕಾವ್ಯದಂತೆ ಎಂದು ಅವರು ಅಭಿಪ್ರಾಯ ಪಟ್ಟರು.ಕವಿಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್ ಕೊಳ್ಳೆಗಾಲ, ಪದ್ಮಾ ಆನಂದ್, dr. ಮಧುಸೂದನ್ ಎನ್., ಮು.ನಾ. ರಮೇಶ್, ಕೆ.ಟಿ.ಶ್ರೀಮತಿ, ಅನಂತ ಎಮ್. ತಾಮ್ಹನ್ಕರ್, ಗಿರೀಶ್ ವಿ., ಬಿ.ಕೆ ಮೀನಾಕ್ಷಿ, ಗು.ಚಿ. ರಮೇಶ್, ಮಂಜುಳಾ ನಾಗರಾಜು, ಕೆರೊಡಿ ಎಂ ಲೋಲಾಕ್ಷಮ್ಮ ., ಕೆ.ಎಂ. ಪ್ರಭು ಕಲ್ಲಹಳ್ಳಿ, ಕೃ. ಪಾ. ಮಂಜುನಾಥ್, ವಿ. ಮಂಜುಳಾ ಉಪದ್ಯಾಯಿನಿ, ಆಸರೆ ರಾಜೇಂದ್ರ ಪ್ರಸಾದ್ ಚಾಮರಾಜನಗರ, ಎಂ ಶಿವಕುಮಾರ ಕೆಂಪನಪುರ, ಡಾ. ಹೇಮಾಲತಾ ಪೀ.ಎನ್, ಡಾ. ಕಾವೇರಿ ಪ್ರಕಾಶ್, ಮಾ.ಮಹೇಶ ಮಲೆಯೂರು, ಶೀಲ ಸತ್ಯೇಂದ್ರ ಸ್ವಾಮಿ, ಓಂಕಾರ ಪ್ರಿಯ ಬಾಗೇಪಳ್ಳಿ, ಡಾ. ಕ್ಸೇವಿಯರ್ ಫ್ರಾನ್ಸಿಸ್ ದಾವಣಗೆರೆ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ರೇಶ್ಮಾ ಶೆಟ್ಟಿ ಗೋರುರು ನಿರೂಪಿಸಿದರು, ವರ್ಷಾ ನಿಖಿಲ್ ರಾಜ್ ಪ್ರಾರ್ಥನೆ ಗೀತೆ ಹಾಡಿದರು, ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಂದಿಸಿದರು.ಬಳಿಕ ಗಂಗಾಧರ್ ಗಾಂಧಿ ತಂಡದಿಂದ ನಡೆದ ಗೀತ ಗಾಯನವು ಜನಮನ ಸೂರೆಗೊಂಡಿತು.

ಕರ್ನಾಟಕ ವಾರ್ತೆಗಳು

ಅಭಿಯಂತರ ಎನ್ ನಾಗೇಂದ್ರ ರವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ.

ಬೆಂಗಳೂರು: ಸುರ್ವೆ ಕಲ್ಚರಲ್ ಅಕಾಡೆಮಿ ಬೆಂಗಳೂರು ಆಶ್ರಯದಲ್ಲಿ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಸೇವೆ ಹಾಗೂ ಗಾಯನ ಕ್ಷೇತ್ರದಲ್ಲಿ ಗುರುತಿಸಿ ಕೊಂಡ ಮಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ಸಹಾಯಕ ಯೋಜನಾಧಿಕಾರಿಯಾಗಿದ್ದ ಪ್ರಸ್ತುತ ಉಡುಪಿಯಲ್ಲಿ ಅಭಿಯಂತರ ಆಗಿ ಕರ್ತವ್ಯದಲ್ಲಿರುವ ಎನ್ ನಾಗೇಂದ್ರ ಅವರನ್ನು ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಫಲಕದೊಂದಿಗೆ ಶಾಲು ಹಾರ ಮೈಸೂರು ಪೇಟ ತೊಡಿಸಿ ಅಭಿನಂದಿಸಲಾಯಿತು.ಸುರ್ವೆ ಕಲ್ಚರಲ್ ಅಕಾಡೆಮಿ ಸ್ಥಾಪಕ ಅಧ್ಯಕ್ಷ ರಮೇಶ್ ತುರ್ವೆ ಪದಾಧಿಕಾರಿಗಳಾದ ಡಾ. ಎಲ್ಲಪ್ಪ, ಹಾಸ ಕಲಾವಿದೆ ಕವಿತಾ ಸುಧೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ವಾರ್ತೆಗಳು

ಪ್ರತಿ ಕ್ಷೇತ್ರದಲ್ಲೂ ಕರಾವಳಿಗರ ಸಾಧನೆ: ಧರಣಿದೇವಿ. ದಕ್ಷಿಣ ಕನ್ನಡಿಗರ ಸಂಘದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಕರಾವಳಿಗರಿಗೆ ತಮ್ಮ ಜೀವನ ಶೈಲಿಯನ್ನು ಪ್ರಪಂಚದ ಎಲ್ಲಾ ಭಾಗಕ್ಕೂ ಕೊಂಡೊಯ್ಯುವ ಶಕ್ತಿ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು. ನಯನ ಸಭಾಂಗಣದಲ್ಲಿ ದಕ್ಷಿಣ ಕನ್ನಡಿಗರ ಸಂಘದಿಂದ ಭಾನುವಾರ ನಡೆದ ‘ಕರಾವಳಿ ರತ್ನ’ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅವರ ಮಾತನಾಡಿದರು.ಕರಾವಳಿಗರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ, ಪ್ರತಿ ಕ್ಷೇತ್ರದಲ್ಲಿಯೂ ತಮ್ಮದೇ ಛಾಪು ಮೂಡಿಸುತ್ತಾರೆ. ಸಮಾಜದ ಸಾಮರಸ್ಯಕ್ಕೆ ಹಾಗೂ ಒಗ್ಗಟ್ಟಿಗೆ ಸದಾ ಬೆಂಬಲವಾಗಿ ನಿಂತು, ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ಕರಾವಳಿಯು ಕೇವಲ ಸಮೃದ್ಧವಾದ ಪ್ರದೇಶ ಮಾತ್ರವಲ್ಲ, ಅಲ್ಲಿನವರ ಮನಸ್ಸು ಪರಿಶುದ್ಧವಾಗಿದೆ ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಮಾತನಾಡಿ, ಸಮಾಜ ಮುಖಿ ಕಾರ್ಯಗಳನ್ನು ಅಭಿನಂದಿಸುವ ಜವಾಬ್ದಾರಿ ಸಮಾಜದ್ದು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಸಂಘವು ಕಾರ್ಯೋ ನುಖವಾಗಿದೆ. ಸಮಾಜದಲ್ಲಿನ ಉತ್ತಮ ಕಾರ್ಯವನ್ನು ಅಭಿನಂದಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಕರಾವಳಿ ರತ್ನ ಪ್ರಶಸ್ತಿ: 2023-24ನೇ ಸಾಲಿನ ‘ಕರಾವಳಿ ರತ್ನ’ ಪ್ರಶಸ್ತಿಯನ್ನು ಟೀಕೇಸ್ ಗ್ರೂಪ್‌ನ ಸ್ಥಾಪಕ ಉಮರ್ ಟೀಕೇ, ವರ್ಲ್ಡ್ ಫೆಡರೇಷನ ಆಫ್ ಬಂಟ್ಸ್ ಅಸೋಸಿಯೇಷನ್‌ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕ್ಯಾಂಟರ್ಬೆರಿ ಗ್ರೂಪ್‌ನ ಅಧ್ಯಕ್ಷ ಲಿಯೋ ಕ್ವಾಡೋಸ್ ಹಾಗೂ ಆದಾಯ ತೆರಿಗೆಯ ಅಧಿಕಾರಿ ನಿವ್ಯಾ ಶೆಟ್ಟಿ ಅವರಿಗೆ බදයි ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ 13 ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡ ಲಾಯಿತು. ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಕರ್ನಾಟಕ ವಾರ್ತೆಗಳು

ನಿವೃತ್ತ ಸರಕಾರಿ ನೌಕರರ ವೇದಿಕೆ ಹೋರಾಟಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಕರ್ನಾಟಕ ನಿವೃತ್ತ ನೌಕರರ ವೇದಿಕೆಯು ಡಿಸೆಂಬರ್16ರಂದು ಬೆಳಗಾವಿ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಿತು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನ್ನನ್ನು ಭೇಟಿಯಾದ 12 ಜನ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ತಂಡದವರಿಗೆ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದಾರೆ. ನಿವೃತ್ತ ನೌಕರರ ಸಮಸ್ಯೆ ಯನ್ನು ಸಮಾಧಾನದಿಂದ ಆಲಿಸಿದ ಮುಖ್ಯಮಂತ್ರಿ ಯವರು-” ನಾವೇ ಖುದ್ದಾಗಿ ನಮ್ಮ ಸರ್ಕಾರದ ಗೌರವಾನ್ವಿತ ಮಾನ್ಯ ಸತೀಶ ಜಾರಕಿಹೊಳೆಯರನ್ನೂಹಾಗೂ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳನ್ನು ತಮ್ಮ ಪ್ರತಿಭಟನಾ ಸ್ಥಳಕ್ಕೆ ಕಳಿಸಿದ್ದೆವು ಎಂದೂ ತಮ್ಮ ಬೇಡಿಕೆಯು ನಮ್ಮ ಗಮನದಲ್ಲಿದೆ ಎಂದೂ ಕೂಡಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅನುಕೂಲ ಮಾಡಿಕೊಡೋಣ ಎಂದರು. ಧನಾತ್ಮಕವಾಗಿ ಅತ್ಯಂತ ಆತ್ಮೀಯವಾಗಿ ಕಳಕಳಿಯಿಂದ ಗೌರವಾನ್ವಿತ ಜನಪ್ರಿಯ ಮುಖ್ಯಮಂತ್ರಿಗಳು ವೇದಿಕೆಯ ತಂಡದವರಿಗೆ ತಿಳಿಸಿದರು.ಇದು ತಮ್ಮೆಲ್ಲರ ಹೋರಾಟದ ಫಲ ಪೂರ್ಣ ಪ್ರಮಾಣದ ಪರಿಹಾರದ ಆದೇಶ ಆಗುವವರೆಗೆ ಹೋರಾಟ ನಿರಂತರವಾಗಿರಿಸೋಣ ಉತ್ಸಾಹ ಸಹಕಾರ ಪ್ರಯತ್ನದಿಂದಿರೋಣ. ತಮಗೆಲ್ಲರಿಗೂ ದನ್ಯವಾದಗಳೆಂದು ಶೇಖರಪ್ಪ ಬಿಸೇರೊಟ್ಟಿ ಸಂಸ್ಥಾಪಕ ರಾಜ್ಯ ಸಂಚಾಲಕರು, ನಿವೃತ್ತ ನೌಕರರ ವೇದಿಕೆ ಇವರು ತಿಳಿಸಿದ್ದಾರೆ ನಮ್ಮ ವೇದಿಕೆಯ ಹೋರಾಟದ ಫಲವಾಗಿ ವಿವಿಧ ದರ್ಜೆಯ ಅಧಿಕಾರಿಗಳಿಗೆ ಆರ್ಥಿಕವಾಗಿ (ಅಂದಾಜು)ಇಷ್ಟು ಹಣ ದೊರೆಯಲಿದೆA ದರ್ಜೆ ಅಧಿಕಾರಿ,17 ಲಕ್ಷ 35,000 ಸಾವಿರB ದರ್ಜೆ ಅಧಿಕಾರಿ,15 ಲಕ್ಷ 15 ಸಾವಿರC ದರ್ಜೆ ಅಧಿಕಾರಿ12 ಲಕ್ಷ 58000D, ದರ್ಜೆ ನೌಕರ8ಲಕ್ಷ 37000 ಸಾವಿರ ನೌಕರ.DCRG, committeeration, encashment live ಈ ಮೂರು ಸೌಲಭ್ಯಗಳನ್ನು ಆರ್ಥಿಕ ತಜ್ಞರು ಲೆಕ್ಕಾಚಾರ ಮಾಡಿ ಈ ರೀತಿ ಮಾಹಿತಿ ನೀಡಿದ್ದಾರೆ. *ನಮ್ಮ ವೇದಿಕೆಯ ಹೋರಾಟಕ್ಕೆ ನಿಮ್ಮ ಬೆಂಬಲ ನೀಡಿ ನಿಮ್ಮ ಆರ್ಥಿಕ ಸೌಲಭ್ಯವನ್ನು ಪಡೆಯಿರೆಂದು ಹೆಚ್ .ಡಿ. ಮಾದಪ್ಪ ಜಿಲ್ಲಾ ಮಹಾ ಪ್ರಧಾನ ಸಂಚಾಲಕರು ಹಾಗೂ ರಾಜ್ಯ ಸಂಚಾಲಕರು, ನಿವೃತ್ತ ನೌಕರರ ವೇದಿಕೆ ಇವರು ತಿಳಿಸಿದ್ದಾರೆ

ಕರ್ನಾಟಕ ವಾರ್ತೆಗಳು

ಇಂದು (ಡಿಸೆಂಬರ್ 16)ಬೆಳಗಾವಿ ಸುವರ್ಣ ಸೌಧದ ಎದುರು ನಿವೃತ್ತ ಸರಕಾರಿ ನೌಕರರಿಂದ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ. ಸುಮಾರು 8 ಸಾವಿರ ಮಂದಿ ಭಾಗಿ.

ಬೆಳಗಾವಿ: ಬೆಳಗಾವಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ 7ನೇ ವೇತನ ಆಯೋಗದಲ್ಲಿ ವೇತನ ನಷ್ಟ ಸರಿಪಡಿಸುವ ಬಗ್ಗೆ ಸರಕಾರಕ್ಕೆ ಒತ್ತಾಯಿಸಿ ಸುವರ್ಣ ಸೌಧದ ಎದುರು ಇಂದು (ಡಿಸೆಂಬರ್16 ರಂದು) ಬೆಳಿಗ್ಗೆ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿಗಳಾದ ರಾಜಶೇಖರ್ (Ex-ACCT), ಎಸ್. ಕೆ. ಸತ್ಯನಾರಾಯಣ ಬೆಂಗಳೂರು(Ex-ACCT),ಅಂಜನಾಮೂರ್ತಿ (Ex-ACCT), ಬಿ. ಇಂದಿರಾ ಕುಮಾರ್ (Ex-CTO), ವೆಂಕಟೇಶ್ (Ex-CTO), ಗಂಗಾಧರ್(Ex-CTI).ಅನಂತ ಪದ್ಮನಾಭ(Ex-CTO). ರಂಗಣ್ಣ (Ex-CTI). ಎನ್. ಜಿ. ರಂಗಸ್ವಾಮಿ (Ex-CTO) ಸೇರಿದಂತೆ 8 ಸಾವಿರಕ್ಕೂ ಹೆಚ್ಚು ನಿವೃತ್ತ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಿಂದ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಿನ್ನೆ ನಿವೃತ್ತ ಸರಕಾರಿ ನೌಕರರ ನಿಯೋಗ ಸ್ಪೀಕರ್ ಯು. ಟಿ. ಖಾದರ್ ಅವರನ್ನು ಭೇಟಿ ಮಾಡಿ ಪ್ರಸುತ್ತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿತ್ತು. ಇಂದು ಪ್ರತಿಭಟನೆ ನಡೆಯುವಲ್ಲಿಗೆ ಬೈಂದೂರು ಮತ್ತು ಪುತ್ತೂರು ಶಾಸಕರು ಆಗಮಿಸಿ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಭರವಸೆ ನೀಡಿದರು. ಎಂಪಿಎಂ ಷಣ್ಮುಖಯ್ಯ ಅವರು ಸಂಘಟನೆಯ ಪ್ರಧಾನ ಸಂಚಾಲಕರಾಗಿದ್ದಾರೆ

ಕರ್ನಾಟಕ ವಾರ್ತೆಗಳು

ಮೈಸೂರಿನ ಲೇಖಕ, ಸಾಮಾಜಿಕ ಚಿಂತಕ ಎನ್.ವಿ. ರಮೇಶ್ ಅವರ 74 ರ ಜನ್ಮ ದಿನಾಚರಣೆ

ಮೈಸೂರು: ಎನ್. ವಿ. ರಮೇಶ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ನಮನ ಕಲಾ ಮಂಟಪದಲ್ಲಿ ರಾಜ್ಯದ ಲೇಖಕರಿಗೆ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಲೇಖಕರಿಗೆ “ನಾನೇಕೆ ಬರೆಯುತ್ತೇನೆ ” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣವು ಡಿ. 1ರ ಭಾನುವಾರದಂದು ನಡೆಯಿತು.ಕಾರ್ಯಕ್ರಮದಲ್ಲಿ ಮಂಗಳೂರಿನ ಲೇಖಕಿ , ಕವಯತ್ರಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಮಾತನಾಡಿ ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿ ಬರುವಂತೆ ಬರಹ ಓಡಿದಷ್ಟು ಮತ್ತೆ ಮತ್ತೆ ಓದಬೇಕು ಎನ್ನುವ ಹಂಬಲ ಹುಟ್ಟಬೇಕೆ ಹೊರತು ಈ ಕೃತಿ ಯಾಕಾದರೂ ಓದುತ್ತಿದ್ದೇನೆ ಎಂಬ ಭಾವನೆ ಓದುಗರಿಗೆ ಮೂಡಬಾರದು ಎಂದ ಅವರು ಭಾವನೆ ಕಲ್ಪನೆಗಳ ಆಗರ ಬರಹ ಎಂದು ಹೇಳಿದರು. ಮುಂದುವರಿದು ಮಾತನಾಡುತ್ತಾ, ತನ್ನ ಬರಹಕ್ಕೆ ಹಲವಾರು ಕಿರಿಯ,ಹಿರಿಯ ಸಾಹಿತಿಗಳ ಜೀವನ ಗಾತೆ ಪ್ರೇರಣೆ ಎಂದು ಅವರು ಹೇಳಿದರು.ಕೊಪ್ಪಳದ ಲೇಖಕಿ ಅನುಸೂಯ ಜಹಾಂಗೀರ್ ಧಾರ್ ಅಧ್ಯಕ್ಷತೆ ವಹಿಸಿದ್ದರುವೇದಿಕೆಯಲ್ಲಿ ಎನ್.ವಿ.ರಮೇಶ್, ಸ್ಮೈಲ್ ಶಿವ್, ಲೇಖಕ ದಾ.ಕೊಲ್ಚಪ್ಪೇ ಗೋವಿಂದ ಭಟ್. ಕಾದಂಬರಿಕಾರ ಪೀ .ವಿ. ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Scroll to Top