ಬೆಂಗಳೂರು ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರ್ ಶಾಲಾ “ಮಾದರಿ ಸಂಸತ್ತು” ಸ್ಪರ್ಧೆಗೆ ಚಾಲನೆ. ಸ್ಪೀಕರ್ ಯು. ಟಿ. ಖಾದರ್ ರವರ ವಿದ್ಯಾರ್ಥಿ ನಾಯಕತ್ವ ಬೆಳವಣಿಗೆಯ ಆಶಯಕ್ಕೆ ಇಂತಹ ಸ್ಪರ್ಧೆಗಳು ಪೂರಕ : ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ

112.8K Views 28 Aug 2024

ಬೆಂಗಳೂರು ದೆಹಲಿ ಸ್ಕೂಲ್ ನಲ್ಲಿ ಎರಡು ದಿನಗಳ ಅಂತರ್ ಶಾಲಾ ಮಾದರಿ ಸಂಸತ್ತು ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಚಾಲನೆ ನೀಡಿದ ಮೀಫ್ ಉಪಾಧ್ಯಕ್ಷ ಮಾತನಾಡಿ ಯು. ಟಿ. ಖಾದರ್ ರವರು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆದ ನಂತರ ತನ್ನ ಪರಿಕಲ್ಪನೆ ಯಂತೆ ನೂರಾರು ವಿದ್ಯಾ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿ ಗಳು ಅಧಿವೇಶನ ವೀಕ್ಷಣೆ ಮಾಡಿರುವುದು ಇಂತಹ ಕಾರ್ಯಕ್ರಮ ಗಳಿಗೆ ಪ್ರೇರಣೆ ಎಂದರು.
ಸಂಪನ್ಮೂಲ ವ್ಯಕ್ತಿ ಅಡ್ವೋಕೇಟ್ ಹರೀಶ್ ರವರು ಮಾತನಾಡಿ ಚರ್ಚೆ ಯ ಸ್ವರೂಪಗಳು ರಚನಾ ತ್ಮಕ ವಾಗಿರಲಿ ಎಂದರು.
ವಿದ್ಯಾ ಸಂಸ್ಥೆಯ ಉಪ ಪ್ರಾoಶುಪಾಲೆ ಪ್ರೀತಿ, ಕಾರ್ಯಕ್ರಮ ಸಂಯೋಜಕರುಗಳಾದ ಸೋಶಿಯಲ್ ಸಯನ್ಸ್ ಮುಖ್ಯಸ್ಥ ಚಂದ್ರಶೇಖರ್ ಶ್ರೀಮತಿ ಹಂಸ ಮೊದಲಾದವರು ಉಪಸ್ಥಿತರಿದ್ದರು
ತೀರ್ಪು ಗಾರರಾಗಿ ಆನಂದ್ ಮತ್ತು ಹರ್ಷಿತ ಭಾಗವಹಿಸಿದ್ದರು.


ಕಾರ್ಯಕ್ರಮದ ಪ್ರಮುಖಾoಶಗಳು
ಪ್ರಾರಂಭದಲ್ಲಿ ಮಾದರಿ ಸಂಸತ್ತಿನ ರಾಷ್ಟ್ರಪತಿಗಳು ಶಿಷ್ಟಾಚಾರದಂತೆ ಆಗಮಿಸಿ ಅಧಿವೇಶನಕ್ಕೆ ಆಗಮಿಸಿದಾ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸಿದ ನಂತರ ಮಾದರಿ ಲೋಕಸಭೆ ಅಧಿವೇಶನ ಪ್ರಾರಂಭ ಗೊಂಡಿತು.
ಆಡಳಿತ ಪಕ್ಷದ ಸದಸ್ಯರಿಂದ ಸರ್ಕಾರ ದ ಜನಪರ ಕಾರ್ಯಕ್ರಮ ಗಳ ಪ್ರಕಟಣೆ ಪ್ರತಿಪಕ್ಷದ ಸದಸ್ಯರು ಶಿಕ್ಷಣ, ಫಸಲ್ ಭೀಮಾ ಯೋಜನೆ, ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ, ಆರ್ಥಿಕತೆ, ಉದ್ಯೋಗ ವಕಾಶ,ಮೊದಲಾದ ವಿಷಯಗಳಲ್ಲಿ ಕೇಳಿದ ಪ್ರಶ್ನೆ ಗಳಿಗೆ ಆಡಳಿತ ಪಕ್ಷದ ಕೌನ್ಸಿಲ್ ಮಿನಿಸ್ಟರ್ ಗಳು ಉತ್ತರ ನೀಡಿದರು.
ಆತ್ಮ ನಿರ್ಭರ, ಮೇಕ್ ಇನ್ ಇಂಡಿಯಾ, ಅಂತ್ಯೋದಯ ಅನ್ನ ಯೋಜನೆ ಮೊದಲಾದ ಜನ ಪರ ಕಾರ್ಯಕ್ರಮ ಗಳ ಬಗ್ಗೆ ವಿವರಿಸಲಾಯಿತು.

Read More News

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

Scroll to Top