ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳವರ 39ನೇ ವರ್ಷದ ಚಾತುರ್ಮಾಸ್ಯ ಹಾಗೂ ಕಿರಿಯ ಶ್ರೀಗಳಾದ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳವರು ಪ್ರಥಮ ವರ್ಷದ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪ ಶಿರಸಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ರವಿವಾರ ಗುರುಪೂರ್ಣಿಮೆ ದಿನದಂದು ನೆರವೇರಿತು.

99K Views 22 Jul 2024

ಶಿರಸಿ: ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀಗಳವರಿಂದ ವ್ಯಾಸ ಪಂಚಕ, ಆದಿಶಂಕರಚಾರ್ಯರ ಪೂಜೆ ಮೂಲಕ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪಿಸಿದರು.
ಬಳಿಕ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಕುಲಗುರುಗಳ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ವ್ಯಾಸಕ್ಷತೆ ನಡೆಯಿತು. 12.30ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಸೆ. 18ರಂದು ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸತೀಶ್ ಕಾಪಿಕಾಡ್.

Read More News

ವಿಶಾಲ್ ಲಿಮಿಟೆಡ್ ಇನ್ಫ್ರಾ ಸ್ಟ್ರೈಕ್ಚರ್ ನ ಸೀನಿಯರ್ ಮೆನೇಜರ್ ಆಗಿ ರಾಜ್ಯದ ಮೂಲಭೂತ ಸೌಕರ್ಯ ಕಂಪನಿಯಲ್ಲಿ ಉನ್ನತ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಕಾರ್ಕಳ ಮುನಿಯಲುವಿನ ಅಪೂರ್ವ ಸಾಧಕ, ಗ್ರಾಮದ ಸಂಸ್ಕೃತಿ,ವಿನಯತೆಯನ್ನು ತನ್ನ ವೃತ್ತಿ ಜೀವನಕ್ಕೆ ಅಳವಡಿಸಿ ಯುವಜನತೆಗೆ ಮಾದರಿಯಾಗಿರುವ ಹೆಮ್ಮಯ ಕನ್ನಡಿಗ ಜಿ. ಎಸ್. ಗಂಗಾಧರ ಆಚಾರ್ಯ. ಪರಿಚಯ ಲೇಖನ: ಡಾ. ಅಶೋಕ್ ಶೆಟ್ಟಿ. ಬಿ. ಎನ್.

Scroll to Top