ಹೊರ ರಾಜ್ಯ ವಾರ್ತೆಗಳು

ಹೊರ ರಾಜ್ಯ ವಾರ್ತೆಗಳು

ರಾಮಕೃಷ್ಣ ಮೋರ್ ನಾಟ್ಯ ಶಾಲಾ ಚಿಂಚ್ವಾಡ್, ಪುಣೆ ಇಲ್ಲಿ ಪ್ರದರ್ಶನಗೊಂಡ ತುಳುನಾಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ‘ಹೊರನಾಡ ಕನ್ನಡ ರತ್ನ’ ಡಾ. ಸುಧಾಕರ್ ಶೆಟ್ಟಿಯವರಿಗೆ ಸನ್ಮಾನ.

ಹೊರ ರಾಜ್ಯ ವಾರ್ತೆಗಳು

MAGNUM OPUS HOMOEOPATHY ರಾಷ್ಟ್ರೀಯ ತರಬೇತಿ ಸಂಸ್ಥೆ ಇದರ ಸಹ-ಸಂಸ್ಥಾಪಕರಾಗಿ ಪುಣೆಯ ‘ಹೊರನಾಡ ಕನ್ನಡ ರತ್ನ’ ಡಾ. ಸುಧಾಕರ್ ಶೆಟ್ಟಿಯವರ ಸುಪುತ್ರ ಡಾ. ವಿರೇನ್ ಶೆಟ್ಟಿ.

ಪುಣೆ : ಡಾ.ವಿರೇನ್ ಶೆಟ್ಟಿ ಮತ್ತು ಡಾ. ಸನ್ಯಾ ರೂಪನಿ ಅವರು ಹೋಮಿಯೋಪತಿಯಲ್ಲಿ ಸ್ಪರ್ಧಾತ್ಮಕ ಆನ್ ಲೈನ್ ಪರೀಕ್ಷೆ ಬರೆಯುವ ಮಾನ್ಯತೆ ಪಡೆದ MAGNUM OPUS HOMOEOPATHY ರಾಷ್ಟ್ರೀಯ ತರಬೇತಿ ಸಂಸ್ಥೆ ಇದರ ಸಹ-ಸಂಸ್ಥಾಪಕರಾಗಿದ್ದಾರೆ. ಡಾ. ವಿರೇನ್ ಶೆಟ್ಟಿಯವರು ಪುಣೆಯ ‘ಹೊರನಾಡ ಕನ್ನಡ ರತ್ನ’ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರ ಸುಪುತ್ರರಾಗಿದ್ದಾರೆ. AIAPGET ವೆಂಬುವುದು ಎಂ. ಡಿ. ವೈದ್ಯಕೀಯ ಹೋಮಿಯೋಪತಿಗಾಗಿ ಇರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಇದರಲ್ಲಿ ಲಕ್ಷಗಟ್ಟಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರವೇಶ ಪರೀಕ್ಷೆ ಬರೆಯುತ್ತಾರೆ.1 ರಿಂದ 100 ರ ತನಕ ರ‍್ಯಾಂಕ್‌ ಗಳಿರುತ್ತವೆ. MAGNUM OPUS ಮೂಲಕ ತರಬೇತಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರು AIAPET ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ನಿಂದ 100 ರ‍್ಯಾಂಕ್‌ ಗಳಲ್ಲಿ ಒಟ್ಟು 20 ರ‍್ಯಾಂಕ್‌ಗಳನ್ನು ಪಡೆದಿದ್ದು,MAGNUM OPUS ನ ಬಹು ದೊಡ್ಡ ಸಾಧನೆಯಾಗಿದೆ. ಡಾ. ಫಝಲ್ ಅಖ್ತರ್ ಮೊದಲ ರ‍್ಯಾಂಕ್‌, ಡಾ. ವೈಷ್ಣವಿ ಬೈರಾಗಿ 18ನೇ ರ‍್ಯಾಂಕ್‌, ಡಾ.ಈಸ್ ಲಾವತ್ ಮೌನಿಕಾ 23 ನೇ ರ‍್ಯಾಂಕ್‌. ಡಾ. ಶಭಾನ್ ಶಾ 26 ನೇ ರ‍್ಯಾಂಕ್‌ ಪಡೆದಿರುತ್ತಾರೆ. ಹೀಗೇ MAGNUM OPUS ನ ಒಟ್ಟು 20 ಮಂದಿ ರಾಂಕ್ ಗಳಿಸಿರುವುದು ಹೆಮ್ಮೆಯ ಸಂಗತಿ ಮತ್ತು ಸಂಸ್ಥೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ.…. ಡಾ.ವಿರೇನ್ ಶೆಟ್ಟಿ, ಎಂ. ಡಿ (ಮಕ್ಕಳ ವೈದ್ಯಕಿಯ ವಿಭಾಗದಲ್ಲಿ ಹೊಮಿಯೋಪತಿ) ಇವರನ್ನು ಸಂಪರ್ಕಿಸಲು ಇಚ್ಚಿಸುವವರು 8975966156 ಮೊಬೈಲ್ ನಂಬರ್ ನ್ನು ಸಂಪರ್ಕಿಸಬಹುದಾಗಿದೆ

ಹೊರ ರಾಜ್ಯ ವಾರ್ತೆಗಳು

ಆಗಸ್ಟ್ 1ರಿಂದ ಪುಣೆ ಕಂಟೋನೂಮೆಂಟ್ ಎರಿಯಾದಲ್ಲಿ ಡಾ. ಸುಧಾಕರ್ ಶೆಟ್ಟಿಯವರಿಂದ ನ್ಯಾಷನಲ್ ಸ್ಕೂಲ್ ಹೆಲ್ತ್ ಪ್ರೋಗ್ರಾಮ್ ಆರಂಭವಾಗಿದೆ.

ಪುಣೆ :ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಂದ ಪುಣೆ ಕಂಟೋನೂಮೆಂಟ್ ಎರಿಯಾದಲ್ಲಿ ನ್ಯಾಷನಲ್ ಸ್ಕೂಲ್ ಹೆಲ್ತ್ ಪ್ರೋಗ್ರಾಮ್ 2024-25 ಅಗಸ್ಟ್ 1ರಿಂದ ಆರಂಭಗೊಂಡಿದೆ. ನ್ಯಾಷನಲ್ ಸ್ಕೂಲ್ ಹೆಲ್ತ್ ಪ್ರೋಗ್ರಾಮ್ 2024-25 ಪುಣೆ ಕಂಟೋನೂಮೆಂಟ್ ಎರಿಯಾದ ಎಲ್ಲಾ ಶಾಲೆಗಳಲ್ಲಿ ನಡೆಯಲಿದೆ. ಡಾ.ಉಷಾ ತಪಾಸೆ(ಪುಣೆ ಕಂಟೋನೂಮೆಂಟ್ ಹಾಸ್ಪಿಟಲ್ ನ ಆರ್ ಎಂ ಓ), ಡಾ.ಸುಧಾಕರ್ ಶೆಟ್ಟಿ( ಮಕ್ಕಳ ತಜ್ಞರು, ಪುಣೆ ಕಂಟೋನೂಮೆಂಟ್ ಹಾಸ್ಪಿಟಲ್),ಡಾ. ಭುಜಬಲ್(ಎಎಂಓ)ಮತ್ತು ಮಟ್ರೋನ್ ಮೊದಲಾದ ಗಣ್ಯರು ಜುಲೈ 31ರಂದು ನಡೆದ ನ್ಯಾಷನಲ್ ಸ್ಕೂಲ್ ಹೆಲ್ತ್ ಪ್ರೋಗ್ರಾಮ್ 2024-25 ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನ್ಯಾಷನಲ್ ಸ್ಕೂಲ್ ಹೆಲ್ತ್ ಪ್ರೋಗ್ರಾಮ್ ನ್ನು ಅಗಸ್ಟ್ 1 ರ ಬೆಳಿಗ್ಗೆ 8 ಗಂಟೆಗೆ ಪುಣೆಯಲ್ಲಿರುವ ಗಣೇಶ್ ಪೇಟೆಯ ಗುರುನಾನಕ್ ಪ್ರೈಮರಿ ಸ್ಕೂಲ್ ನಲ್ಲಿ ಮತ್ತು ಬೆಳ್ಳಿಗೆ 9.30ಕ್ಕೆ ರಬಿಂದ್ರನಾಥ್ ಪ್ರೈಮರಿ ಸ್ಕೂಲ್ ಕ್ಯಾಂಪ್ ಪುಣೆಯಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು.

ಹೊರ ರಾಜ್ಯ ವಾರ್ತೆಗಳು

ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್.

ಪುಣೆ : ಸುಪ್ರಸಿದ್ದ ಮಕ್ಕಳ ತಜ್ಞ ಡಾ.ಸುಧಾಕಾರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ 30 ವರ್ಷಗಳಿಂದ ಬೇಬಿ ಫ್ರೆಂಡ್ ವೆಂಬ ಸುಸಜ್ಜಿತವಾದ ಮಕ್ಕಳ ವೈದ್ಯಕೀಯ ಕ್ಲಿನಿಕ್ ಮೂಲಕ ಸಾವಿರಾರು ಮಕ್ಕಳ ಚಿಕಿತ್ಸೆ ಮಾಡಿದ್ದಲ್ಲದೆ, ಸಹಸ್ರ ಸಹಸ್ರ ವೈದ್ಯಕೀಯ ಕ್ಯಾಂಪ್ ಗಳ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ವೈದ್ಯಕೀಯ ಸಮಾಜ ಸೇವೆಯಲ್ಲಿ ಮೇರು ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ, ಪುಣೆ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಫೋರ್ಸ್ ಹಾಸ್ಪಿಟಲ್, ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾ ಪೀಠ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹೆಸರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ನಿಸ್ವಾರ್ಥ ಸೇವಾ ಮನೋಭಾವದ ಕಠಿಣ ಪರಿಶ್ರಮಿ ಸರಳ ಸಜ್ಜನ ವೈದ್ಯರಾಗಿರುವ ಇವರು ಮೂಡಬಿದ್ರೆಯಲ್ಲಿಯೂ ಸಂಚಾರಿ ಮಕ್ಕಳ ಕ್ಲಿನಿಕ್ ನ್ನು ಆರಂಭಿಸಿದ್ದು, ಇವರ ವೈದ್ಯಕೀಯ ಸಮಾಜ ಸೇವೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರಕಿವೆ. ಡಾ. ಸುಧಾಕರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಸಿಕ್ಕಿದೆ. ಪುಣೆ ಕಂಟೋನೂಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ, 2022 ರಲ್ಲಿ ಕರ್ನಾಟಕ ಸರಕಾರದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ಚಾರ್ ಸಹಿಬಜಾದೆ ಅವಾರ್ಡ್, ಹೊರನಾಡ ಕನ್ನಡ ರತ್ನ ಪ್ರಶಸ್ತಿ, ಇದೀಗ ರೋಟರಿ ಕ್ಲಬ್ ಪುಣೆಯಿಂದ ಪ್ರತಿಷ್ಠಿತ ಎಕ್ಸೆಲೆನ್ಸ್ ಅವಾರ್ಡ್ ದೊರಕಿದೆ. Mp mla’s news ಪತ್ರಿಕೆ ಮತ್ತು Mpmlasnewstv 24×7 ನ್ಯೂಸ್ ಪೋರ್ಟಲ್ ಇವರಿಗೆ ಅಕ್ಟೋಬರ್ 13 ರಂದು ಸಂಜೆ 4 ಗಂಟೆಗೆ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯುವ 13 ನೇ ಸೌಹಾರ್ದ ಸಂಗಮದಲ್ಲಿ ಸಮಾಜರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ನಿರ್ಧರಿಸಿದೆ.

ಹೊರ ರಾಜ್ಯ ವಾರ್ತೆಗಳು

ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್‌ಗೆ ಇದೀಗ ಯಶಸ್ವಿ 3೦ ವರ್ಷ ತುಂಬಿದೆ.

ಪುಣೆ: ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಪ್ರತಿಷ್ಠಿತ ಬೇಬಿ ಫ್ರೆಂಡ್ ಕ್ಲಿನಿಕ್ ಮಾರ್ಚ್ 4 ರಂದು ಯಶಸ್ವಿ ಮೂರು ದಶಕಗಳನ್ನು ಪೂರೈಸಿದ ಹಿರಿಮೆ, ಮಹತ್ಸಾಧನೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಮೂಲದ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿರುವ ಪುಣೆಯ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರ ಕಠಿಣ ಪರಿಶ್ರಮ, ವೃತ್ತಿ ಬದುಕಿನಲ್ಲಿ ಅವರು ತೋರಿದ ಏಕಾಗ್ರತೆ, ತಲ್ಲೀನತೆ, ಜನಪ್ರಿಯತೆ, ಜನಮನ್ನಣೆ ಕಾರಣವಾಗಿದೆ. ಕಳೆದ 36 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞರಾಗಿ ಪುಣೆಯಲ್ಲಿ ತನ್ನ ಪರಿಣತ ವೈದ್ಯಕೀಯ ಸಮಾಜಸೇವೆ ಮೂಲಕ ವಿಶೇಷ ಛಾಪು ಮೂಡಿಸಿರುವ ಡಾ. ಸುಧಾಕರ ಶೆಟ್ಟಿಯವರು ಮಾರ್ಚ್ 4, 1994 ರಂದು ಪುಣೆಯಲ್ಲಿ ಬೇಬಿ ಫ್ರೆಂಡ್ ಕ್ಲಿನಿಕ್ ಎಂಬ ಸುಸಜ್ಜಿತವಾದ ಮಕ್ಕಳ ಕ್ಲಿನಿಕ್ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿ ಇದೀಗ 3೦ ವರ್ಷಗಳನ್ನು ಪೂರೈಸಿದೆಂಬುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಇದರ ಜೊತೆ, ಪುಣೆಯ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಪೋರ್ಸ್ ಹಾಸ್ಪಿಟಲ್, ರೆಡ್‌ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾಪೀಠ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಅವರು ಮಕ್ಕಳ ಆರೈಕೆ ಮತ್ತು ಕೋವಿಡ್ ಪಿಡುಗು ಸಂದರ್ಭದಲ್ಲಿ 15೦೦ಕ್ಕೂ ಹೆಚ್ಚು ಕನ್ನಡಿಗರಿಗೆ ತನ್ನ ವೈದ್ಯಕೀಯ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವುದರೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೇಬಿ ಫ್ರೆಂಡ್ ಕ್ಲಿನಿಕ್ ಆರಂಭವಾದಂದಿನಿಂದ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬಂದಿರುವ ಅವರು ಮೂಡಬಿದ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಆರಂಭಿಸಿದ್ದಾರೆ.ಡಾ. ಸುಧಾಕರ ಶೆಟ್ಟಿ ಮತ್ತು ಮತ್ತವರ ಪುಣೆಯ ವೈದ್ಯಕೀಯ ತಂಡಕ್ಕೆ ಸತತ 3 ಬಾರಿ ಕೇಂದ್ರ ಸರಕಾರದ ಕಂಟೋನ್ಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸಿ, ಚಾರ್ ಸಹಿ ಬಜಾದೆ ಅವಾರ್ಡ್ ದೊರಕಿರುತ್ತದೆ.

ಹೊರ ರಾಜ್ಯ ವಾರ್ತೆಗಳು

ಕ್ಯಾಪ್ಟನ್ ಬೃಜೇಶ್ ಚೌಟರಿಂದ ಮುಂಬೈಯ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ

ಮುಂಬೈ : ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ನಿನ್ನೆ ಮುಂಬೈಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹೊರ ರಾಜ್ಯ ವಾರ್ತೆಗಳು

ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ -ಕನ್ಯಾನ ಸದಾಶಿವ ಶೆಟ್ಟಿ

ಪುಣೆ : ಒಗ್ಗಟ್ಟೇ ಮೂಲವೆಂದು ಸಂಘಟಿತ ಬಂಟರಾದ ನಾವು ಶ್ರೀಮಂತಿಕೆಯಲ್ಲಿ ಇಂದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ, ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್ 10ರಂದು ಚಿಂಚ್ವಾಡ್ ನ ಪ್ರೊ ರಾಮಕೃಷ್ಣ ಮೋರೆ ಆಡಿಟೋರಿಯಂನಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸದಾಶಿವ ಶೆಟ್ಟಿಯವರು ಮಾತನಾಡಿ ನಾವು ದೈವ ದೇವರ ಆಶೀರ್ವಾದಿಂದ ಪ್ರಯತ್ನ ಮತ್ತು ಸಾಹಸ ಮಾಡಿ ಆರ್ಥಿಕವಾಗಿ ಬೆಳೆದವರು. ವಿಶ್ವ ಬಂಟರ ಶ್ರೆಯೋಭಿವೃದ್ದಿಗಾಗಿ ಸಂಘಟನಾತ್ಮಕ ಹಲವಾರು ಕಾರ್ಯ ಯೋಜನೆಗಳು ನಡೆಯುತ್ತಿವೆ. ವಿಶ್ವ ಬಂಟ ಕೋಶ ಎಂಬ ಕಾರ್ಯವು ಆರಂಭವಾಗಿದೆ. ನಮ್ಮ ಬಡ ಕುಟುಂಬಗಳ ಉದ್ದಾರ ಕೂಡಾ ನಮ್ಮ ಕರ್ತವ್ಯ ಎಂದು ಅರಿತು ಸೇವಾ ಕಾರ್ಯದಲ್ಲಿ ಮುನ್ನಡೆಯೋಣ. ಈ ಎಲ್ಲಾ ಕಾರ್ಯಗಳು ಅರ್ಥಪೂರ್ಣವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಸದಾ ಇರಲಿ. ಇಲ್ಲಿ ಇಂದು ಉತ್ತಮ ಸಂದೇಶ ನೀಡುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಂಘಟಿತ ಸಮಾರಂಭ ನಡೆದಿದೆ. ಹೃದಯ ತುಂಬಿ ಬಂದಿದೆ ಎಂದರು.ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ವಿಧಾನಸಭಾ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ, ಗುಜರಾತ್ ನ ಸಿಲ್ವಾಸ ದಾದರ್ ನಗರ ಹವೇಲಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ಜಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜ್ಯೋತಿ ವಿ ಶೆಟ್ಟಿ, ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ನಾರಾಯಣ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಪದ್ಮನಾಭ ಕೆ ಶೆಟ್ಟಿ, ಎರ್ಮಾಳ್ ಸೀತಾರಾಂ ಶೆಟ್ಟಿ, ಮಹೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ನಳಿನಿ ಶೆಟ್ಟಿ, ಶೋಭಾ ಶೆಟ್ಟಿ, ರೇಖಾ ಶೆಟ್ಟಿ ಪ್ರಾರ್ಥನೆಗೈದರು. ನಿಕಟ ಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅತಿಥಿ ಗಣ್ಯರನ್ನು ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿದರು ಹಾಗೂ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಆಗಮಿಸಿದ ಗಣ್ಯರು ತಮ್ಮ ಸಂದೇಶಗಳನ್ನು ತಿಳಿಸುವ ಅತಿಥಿ ದೇವೋಭವ ಎಂಬ ಪುಸ್ತಕವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಗೌರವ ಅತಿಥಿಗಳಾದ ಗುರುರಾಜ್ ಗಂಟಿಹೊಳೆ, ರಜನಿ ಜಿ .ಶೆಟ್ಟಿಯವರನ್ನು ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಅವಿನಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸ್ಮಿತಾ ಎಂ ಹೆಗ್ಡೆ ಓದಿದರು. ಇದೇ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಗೈದ ಸಮಿತಿಯ ಸೇವಾ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ, ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಜಯಾನಂದ ಶೆಟ್ಟಿ ಪುತ್ತೂರುರವರನ್ನು ಸನ್ಮಾನಿಸಲಾಯಿತು. ಇವರ ಸಾಧನೆಗಳ ವರದಿಯನ್ನು ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು ಪರಿಚಯಿಸಿದರು. ಸಂಘದ ನಾಯಕತ್ವ ವಹಿಸಿ ಪಾದರಸದಂತೆ ಕಾರ್ಯಗೈದು ಕಳೆದ ವರ್ಷ ರಜತ ಸಂಭ್ರಮ ಹಾಗೂ ಸಂಘವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸುನಿತಾ ಅರ್ ಶೆಟ್ಟಿ ದಂಪತಿಗಳನ್ನು ಸಮಾಜ ಬಾಂಧವರ ಪರವಾಗಿ ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿ ನಮನಗಳನ್ನು ಸಲ್ಲಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಬಂಟ ಸಮಾಜ ಬಾಂಧವರಿಂದ ವಿವಿದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು ಹಾಗೂ ಅರ್ಥಗರ್ಭಿತ ಸಂದೇಶ ನೀಡುವ ಹಾಸ್ಯ ಪ್ರಹಸನ ತುಂಬಿದ ಸಭಾಂಗಣದಲ್ಲಿದ್ದ ಭಾಂದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸಾವಿರಾರು ಸಂಖ್ಯೆಯ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಅಭಿಷೇಕ್ ಶೆಟ್ಟಿ ಪಡೀಲ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶೆಟ್ಟಿ ಪೆಲತ್ತೂರು ವಂದಿಸಿದರು. ಚಿತ್ರ, ವರದಿ : ಹರೀಶ್ ಮೂಡಬಿದ್ರಿ

ಕರಾವಳಿ ಸುದ್ದಿ, ಹೊರ ರಾಜ್ಯ ವಾರ್ತೆಗಳು

ಪ್ರಖ್ಯಾತ ಉದ್ಯಮಿ, ಸಮಾಜ ಸೇವಕ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮಾಲಕತ್ವದ ಅತ್ಯಾಧುನಿಕ ಸೌಲಭ್ಯದ ಸುಸಜ್ಜಿತವಾದ ಕೊರೋನೆಟ್ ಬ್ಯೂಟಿಕ್ ಹೋಟೆಲ್ ವಿನೂತನ ವಿನ್ಯಾಸದೊಂದಿಗೆ ಪುಣೆಯ ಆಪೆಯ ರೋಡನಲ್ಲಿ ಶುಭಾರಂಭ

ಪುಣೆ: ಸಮಾಜ ಸೇವಕ, ಪುಣೆಯ ಹೆಸರಾಂತ ಹೊಟೇಲ್ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಪುಣೆ ಬಂಟರ ಸಂಘದ ಅಧ್ಯಕ್ಷ ಮತ್ತು ಬಂಟ ಸಮಾಜದ ಮುಖಂಡ, ಬಡವರ ಬಂಧು ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಬಾಳಿಕೆ ಮಾಲಕತ್ವದ ಕೊರೋನೆಟ್ ಬ್ಯೂಟಿಕ್ ಹೊಟೇಲ್ ನೂತನ ವಿನ್ಯಾಸದೊಂದಿಗೆ ಪುಣೆಯ ಆಪ್ಪೆ ರೋಡ್‌ನಲ್ಲಿ ಮಾ. 1ರಂದು ಶುಭಾರಂಭಗೊಂಡಿತು. ಧಾರ್ಮಿಕ ಕಾರ್ಯಕ್ರಮವಾಗಿ ವಾಸ್ತು ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಯೊಂದಿಗೆ ದೇವತಾ ಕಾರ್ಯಗಳು ನಡೆದವು. ಈ ಸಂದರ್ಭ ಗಣ್ಯರಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂ.ಜಿ.ಆರ್ ಗ್ರೂಪ್‌ನ ಸಿಎಂಡಿ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿಯ ಪ್ರಮುಖರು, ಖ್ಯಾತ ಉದ್ಯಮಿಗಳು ಆಗಮಿಸಿ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟುಬಾಳಿಕೆ, ದಿವ್ಯಾ ಸಂತೋಷ್ ಶೆಟ್ಟಿ ದಂಪತಿಯನ್ನು ಶಾಲು ಹೊದಿಸಿ, ಪುಷ್ಪಗುಚ್ಚ ಸ್ಮರಣಿಕೆ ನೀಡಿ ಅಭಿನಂದಿಸಿ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂ ಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ,ಗೌರವ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ವಿ. ಕೆ. ಗ್ರೂಪ್ ಆಫ್ ಕಂಪೆನೀಸ್‌ ಸಿಎಂಡಿ ಕೆ. ಎಂ.ಶೆಟ್ಟಿ,ಸಿಎ ಎನ್. ಬಿ. ಶೆಟ್ಟಿ,ಹೊಟೇಲ್ ಸಾಯಿ ಪ್ಯಾಲೇಸ್ ಆಡಳಿತ ನಿರ್ದೇಶಕ ರವಿ ಶೆಟ್ಟಿ, ಬಂಟರ ಸಂಘ ಮುಂಬಯಿ, ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಎಸ್‌ಎಂಶೆಟ್ಟಿ ಶಿಕ್ಷಣಸಮೂಹ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಕಾರ್ ಶೆಟ್ಟಿ ಮುಂಡ್ಕೂರು, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪ್ಪೇಂದ್ರ ಶೆಟ್ಟಿ ಮುಂಬಯಿ ಶ್ರೀ ಸಿದ್ದಿವಿನಾಯಕ ಮಂದಿರದ ಟ್ರಸ್ಟಿ ಭಾಸ್ಕರ್ ಶೆಟ್ಟಿ,ನವಿಮುಂಬಯಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂಜೀವ ಎಸ್. ಶೆಟ್ಟಿ, ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಬಾಲಾಜಿ ಗ್ರೂಪ್‌ನ ವಿಜಯ ಶೆಟ್ಟಿ,ತುಂಗಾ ಹಾಸ್ಪಿಟಲ್ ಮುಂಬಯಿ ನಿರ್ದೇಶಕ ಉಮೇಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಪಶ್ಚಿಮ ವಲಯ ಸಮನ್ವಯಕ ಖಾಂದೇಶ ಭಾಸ್ಕರ್ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಹರೀಶ್ ಶೆಟ್ಟಿ ಗುರ್ಮೆ, ಆಶೋಕ್ ಶೆಟ್ಟಿ, ಪ್ರಭಾಕರ ಶೆಟ್ಟಿ ಇನ್ನ, ದಿವಾಕರ ಶೆಟ್ಟಿ ಕುರ್ಲಾ, ಸಮಾಜ ಸೇವಕ ಸಂಚಿತ್ ಶೆಟ್ಟಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರು, ಟ್ರಸ್ಟಿಗಳು, ಕಾರ್ಯಕಾರಿ ಸಮಿತಿಯ ಪದಾ ಧಿಕಾರಿಗಳು, ಪ್ರಾದೇಶಿಕ ಸಮಿತಿ ಪದಾ ಧಿಕಾರಿಗಳು, ಮಹಿಳಾ ವಿಭಾಗ ಪದಾ ಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿಗಳು ಶುಭ ಹಾರೈಸಿದರು.ಸಂತೋಷ್ ಶೆಟ್ಟಿಯವರು ಅತಿಥಿ- ಗಣ್ಯರನ್ನು ಶಾಲು ಹೊದಿಸಿ, ಪುಷ್ಪ ಗುಚ್ಚವನ್ನಿತ್ತು ಸ್ವಾಗತಿಸಿ ಗೌರವಿಸಿದರು. ಬಂಟರ ಸಂಘ ಮುಂಬಯಿ ಮುಖವಾಣಿ ಬಂಟರವಾಣಿ ಸಮಿತಿ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

ಹೊರ ರಾಜ್ಯ ವಾರ್ತೆಗಳು

ಡಾ.ಸುಧಾಕರ್ ಶೆಟ್ಟಿ (ಮಕ್ಕಳ ತಜ್ಞರು, ಪುಣೆ -ಮೂಡುಬಿದಿರೆ)ಯವರ ಬಗ್ಗೆ ಸಂಕ್ಷಿಪ್ತ ಪರಿಚಯ

ಮಂಗಳೂರು :ಡಾ. ಸುಧಾಕರ್ ಶೆಟ್ಟಿ ಪುಣೆ -ಮೂಡಬಿದ್ರಿ ಅವರು ಕಳೆದ 36 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ಪುಣೆಯಲ್ಲಿ ತನ್ನದೇ ಮಾಲೀಕತ್ವದ ಬೇಬಿ ಫ್ರೆಂಡ್ ಎoಬ ಸುಸಜ್ಜಿತವಾದ ಮಕ್ಕಳ ಕ್ಲಿನಿಕ್ ನ್ನು ಹೊಂದಿದ್ದಾರೆ. ಇದರ ಜೊತೆಗೆ, ಪುಣೆ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಫೋರ್ಸ್ ಹಾಸ್ಪಿಟಲ್, ರೆಡ್ ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾ ಪೀಠ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಕ್ಕಳ ಆರೈಕೆ ಮತ್ತು ಕೋವಿಡ್ ಪಿಡುಗು ಸಂದರ್ಭದಲ್ಲಿ 1,500 ಕ್ಕೂ ಹೆಚ್ಚು ಕನ್ನಡಿಗರಿಗೆ ತನ್ನ ವೈದ್ಯಕೀಯ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವುದರೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಅವರು ಮೂಡಬಿದ್ರೆಯಲ್ಲಿ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಆರಂಭಿಸಿ ವಿಸ್ತಾರ ವೈದ್ಯಕೀಯ ಸಮಾಜ ಸೇವೆ ಮೂಲಕ ಮನೆ ಮಾತಾಗಿದ್ದಾರೆ. ಪ್ರಶಸ್ತಿಗಳು : 1.ಡಾ.ಸುಧಾಕರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ ಮೂರು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ದೊರಕಿದೆ. 2. ಪುಣೆ ಕಂಟೋನೋಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ. 3. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2022. 4. ಚಾರ್ ಸಹಿಬಜಾದೆ ಅವಾರ್ಡ್

ಹೊರ ರಾಜ್ಯ ವಾರ್ತೆಗಳು

ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕಾರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ಸತತ 3ನೇ ಬಾರಿಗೆ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್

ಪುಣೆ :ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕಾರ್ ಶೆಟ್ಟಿ ಮತ್ತವರ ವೈದ್ಯಕೀಯ ತಂಡಕ್ಕೆ ವೈದ್ಯಕಿಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯುತ್ತಮ ಸಮಾಜಸೇವೆಗಾಗಿ ಕೇಂದ್ರ ಸರಕಾರದ ಪ್ರತಿಷ್ಠಿತ ಪ್ರಶಸ್ತಿ ರಕ್ಷಾ ಮಂತ್ರಿ ಅವಾರ್ಡ್ ಸತತ 3ನೇ ಬಾರಿಗೆ ದೊರಕಿದೆ.

Scroll to Top