ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಬೇಬಿ ಫ್ರೆಂಡ್ ಕ್ಲಿನಿಕ್‌ಗೆ ಇದೀಗ ಯಶಸ್ವಿ 3೦ ವರ್ಷ ತುಂಬಿದೆ.

115K Views 19 Mar 2024

ಪುಣೆ: ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಮಾಲಕತ್ವದ ಪುಣೆಯ ಪ್ರತಿಷ್ಠಿತ ಬೇಬಿ ಫ್ರೆಂಡ್ ಕ್ಲಿನಿಕ್ ಮಾರ್ಚ್ 4 ರಂದು ಯಶಸ್ವಿ ಮೂರು ದಶಕಗಳನ್ನು ಪೂರೈಸಿದ ಹಿರಿಮೆ, ಮಹತ್ಸಾಧನೆಗೆ ಪಾತ್ರವಾಗಿದೆ.


ಇದಕ್ಕೆ ಕಾರಣ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಮೂಲದ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿರುವ ಪುಣೆಯ ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿಯವರ ಕಠಿಣ ಪರಿಶ್ರಮ, ವೃತ್ತಿ ಬದುಕಿನಲ್ಲಿ ಅವರು ತೋರಿದ ಏಕಾಗ್ರತೆ, ತಲ್ಲೀನತೆ, ಜನಪ್ರಿಯತೆ, ಜನಮನ್ನಣೆ ಕಾರಣವಾಗಿದೆ.


ಕಳೆದ 36 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಕ್ಕಳ ತಜ್ಞರಾಗಿ ಪುಣೆಯಲ್ಲಿ ತನ್ನ ಪರಿಣತ ವೈದ್ಯಕೀಯ ಸಮಾಜಸೇವೆ ಮೂಲಕ ವಿಶೇಷ ಛಾಪು ಮೂಡಿಸಿರುವ ಡಾ. ಸುಧಾಕರ ಶೆಟ್ಟಿಯವರು ಮಾರ್ಚ್ 4, 1994 ರಂದು ಪುಣೆಯಲ್ಲಿ ಬೇಬಿ ಫ್ರೆಂಡ್ ಕ್ಲಿನಿಕ್ ಎಂಬ ಸುಸಜ್ಜಿತವಾದ ಮಕ್ಕಳ ಕ್ಲಿನಿಕ್ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿ ಇದೀಗ 3೦ ವರ್ಷಗಳನ್ನು ಪೂರೈಸಿದೆಂಬುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.


ಇದರ ಜೊತೆ, ಪುಣೆಯ ಪೊಲೀಸ್ ಹಾಸ್ಪಿಟಲ್, ಸ್ಟೇಟ್ ರಿಸರ್ವ್ ಪೊಲೀಸ್ ಪೋರ್ಸ್ ಹಾಸ್ಪಿಟಲ್, ರೆಡ್‌ಕ್ರಾಸ್ ಸೊಸೈಟಿ ಮತ್ತು ಭಾರತೀಯ ವಿದ್ಯಾಪೀಠ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಮಕ್ಕಳ ಆರೈಕೆ ಮತ್ತು ಕೋವಿಡ್ ಪಿಡುಗು ಸಂದರ್ಭದಲ್ಲಿ 15೦೦ಕ್ಕೂ ಹೆಚ್ಚು ಕನ್ನಡಿಗರಿಗೆ ತನ್ನ ವೈದ್ಯಕೀಯ ತಂಡದ ಮೂಲಕ ಅತ್ಯುತ್ತಮ ಚಿಕಿತ್ಸೆ ನೀಡುವುದರೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ. ಬೇಬಿ ಫ್ರೆಂಡ್ ಕ್ಲಿನಿಕ್ ಆರಂಭವಾದಂದಿನಿಂದ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಾ ಬಂದಿರುವ ಅವರು ಮೂಡಬಿದ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಪಿಡಿಯಾಟ್ರಿಕ್ ಕ್ಲಿನಿಕ್ ಆರಂಭಿಸಿದ್ದಾರೆ.
ಡಾ. ಸುಧಾಕರ ಶೆಟ್ಟಿ ಮತ್ತು ಮತ್ತವರ ಪುಣೆಯ ವೈದ್ಯಕೀಯ ತಂಡಕ್ಕೆ ಸತತ 3 ಬಾರಿ ಕೇಂದ್ರ ಸರಕಾರದ ಕಂಟೋನ್ಮೆಂಟ್ ಬೋರ್ಡ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸಿ, ಚಾರ್ ಸಹಿ ಬಜಾದೆ ಅವಾರ್ಡ್ ದೊರಕಿರುತ್ತದೆ.

Read More News

ಸರಕಾರಿ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸಂಪಾದಕರಾಗಿ ಹೊಸ ಅಂಗಣ ಪತ್ರಿಕೆಯನ್ನು ನಿರಂತರವಾಗಿ ಹೊರ ತಂದು ದಶಮಾನೋತ್ಸವದ ಸಂಭ್ರಮ ಕಂಡ ಡಾ.ಪಿ.ಹರಿಶ್ಚಂದ್ರ ಸಾಲ್ಯಾನ್ ಅವರ ಸಾಧನೆ ಜನ ಶ್ಲಾಘನೀಯವಾದದ್ದು. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೃಷಿ ಪ್ರಶಂಸನೀಯ ವಾದದ್ದು- ‘ಹೊಸ ಅಂಗಣ’ ದಶಮಾನೋತ್ಸವದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಶ್ಲಾಘನೆ.

Scroll to Top