ಹೊರ ರಾಜ್ಯ ವಾರ್ತೆಗಳು

ಹೊರ ರಾಜ್ಯ ವಾರ್ತೆಗಳು

ಪುಣೆ ರೆಡ್ ಲೈಟ್ ಏರಿಯಾಕ್ಕೆ ಮಕ್ಕಳ ಆರೋಗ್ಯ ತಪಾಸಣೆಗಾಗಿ ಡಾ. ಸುಧಾಕರ್ ಶೆಟ್ಟಿ(ಪುಣೆ) ಯವರ ಪುನರಾಗಮನ.

ವಿಶೇಷ ಸಂದರ್ಶನ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.ಪುಣೆ: ಮೂವತ್ತು ವರ್ಷಗಳ ನಂತರ ಪುಣೆ ರೆಡ್ ಲೈಟ್ ಏರಿಯಾಕ್ಕೆ ಅಲ್ಲಿನ ಮಕ್ಕಳ ಅರೋಗ್ಯ ತಪಾಸಣೆಗಾಗಿ ಡಾ. ಸುಧಾಕರ್ ಶೆಟ್ಟಿಯವರ ಪುನರಾಗಮನವಾಗಿದೆ. 1995ರಲ್ಲಿ ಪುಣೆ ರೆಡ್ ಲೈಟ್ ಏರಿಯಾದ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ವೈದ್ಯಕೀಯ ಸಾಹಸಿ ಮಕ್ಕಳ ವೈದ್ಯ ಡಾ. ಸುಧಾಕರ್ ಶೆಟ್ಟಿಯವರು ಹೊಸ ದಾಖಲೆ ಬರೆದಿದ್ದರು. ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳು ಕೂಡಾ ಸಮುದಾಯದ ಭವಿಷ್ಯವೆಂದು ಸಾರುವುದು ಡಾ. ಸುಧಾಕರ್ ಶೆಟ್ಟಿಯವರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಪುಣೆ ರೆಡ್ ಲೈಟ್ ಏರಿಯಾದಲ್ಲಿ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಅರೋಗ್ಯ ತಪಾಸಣೆಗೆ ಅಂದಿನ ಸಂಸದ ಸುನೀಲ್ ದತ್ತ್ ಮತ್ತು ಪ್ರಖ್ಯಾತ ವೈದ್ಯರಾದ ಡಾ. ಐ. ಎಸ್. ಗಿಲಾದ ಅವರು ಸಂಪೂರ್ಣ ಸಹಕಾರ ನೀಡಿದ್ದರು. ಇದೀಗ ಡಾ.ಸುಧಾಕರ್ ಶೆಟ್ಟಿ ಅವರು ಮೂವತ್ತು ವರ್ಷಗಳ ನಂತರ ಮತ್ತೆ ಪುಣೆ ರೆಡ್ ಲೈಟ್ ಏರಿಯಾದಲ್ಲಿ ವಾಣಿಜ್ಯ ಲೈಂಗಿಕ ಕಾರ್ಯಕರ್ತೆಯರ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ನಡೆಸಲು ರೀ -ಎಂಟ್ರಿ ಕೊಟ್ಟಿದ್ದಾರೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಈ ಪುನರಾಗಮನ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಎಲ್ಲರೂ ಡಾ. ಸುಧಾಕರ್ ಶೆಟ್ಟಿಯವರ ಸಾಹಸಮಯ ಸಾಧನೆಗೆ ಹ್ಯಾಟ್ಸ್ ಅಪ್ ಹೇಳಿದ್ದಾರೆ. ಡಾ. ಸುಧಾಕರ್ ಶೆಟ್ಟಿ ಅವರು ಪರಿಣಿತ ವೈದ್ಯಕಿಯ ತಂಡದ ಸಹಕಾರದೊಂದಿಗೆ ರೆಡ್ ಲೈಟ್ ಏರಿಯಾದ ಮಹಿಳೆಯರ ಮಕ್ಕಳ ಅಪೌಷ್ಟಿಕತೆ , ಚರ್ಮರೋಗ ಸೇರಿದಂತೆ ಆರೋಗ್ಯ ನ್ಯೂನ್ಯತೆಯ ಬಗ್ಗೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಿದ್ದಾರೆ.ಇದಕ್ಕೆ ಪುಣೆ ಪೊಲೀಸರ ಸಹಕಾರ ಸಿಕ್ಕಿದೆ. ಯಾಕೆಂದರೆ, ಡಾ. ಸುಧಾಕರ್ ಶೆಟ್ಟಿಯವರು ಪುಣೆ ಪೊಲೀಸ್ ಹಾಸ್ಪಿಟಲ್ ನಲ್ಲೂ ಮಕ್ಕಳ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಸುಧಾಕರ್ ಶೆಟ್ಟಿಯವರು ಹೊರನಾಡ ಕನ್ನಡ ರತ್ನ ಮತ್ತು ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2022 ಪುರಸ್ಕೃತರು.ಸತತ ಮೂರು ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಪುರಸ್ಕೃತ ಪುಣೆ ವೈದ್ಯಕೀಯ ತಂಡದ ಸಕ್ರಿಯ ಸದಸ್ಯರಾಗಿರುವ ಡಾ. ಸುಧಾಕರ್ ಶೆಟ್ಟಿಯವರು ಚಾರ್ ಸಹಿ ಬಜಾದೆ ಪ್ರಶಸ್ತಿ ಪುರಸ್ಕೃತರು.

ಹೊರ ರಾಜ್ಯ ವಾರ್ತೆಗಳು

Well known child specialist Dr. Sudhakar shetty(Pune)makes a great come back to treat children in Pune”s red light area.

pune:In 1995, with the support of MP Sunil dutt & Dr I S Gilada,Dr Shetty had set an example to the medical faternity that care & health of children of commercial sex workers (CSW) is very important as they are also the future of the community. After 30 years he is re entering this area to uplift their health by preventing malnutrition & various vitamin deficiency, skin diseases,behavioral problems & School drop outs.He has recieved the support of the Police department as Dr Shetty works at Police hospital as a Pediatrician. On the occasion of deepavali Dr Shetty was pledged to bring light and meaning to the life of these childrenDr shetty will be doing this work as a part of the outreach ( community service) programme of his Baby friend clinic.He will also help all NGOs working in that area. He is a recipient of horanada kannada ratna & dakshina kannada zilla Rajyotsava award 2022

ಹೊರ ರಾಜ್ಯ ವಾರ್ತೆಗಳು

Navratri Festival, traditional koralaparba,Navadurga Award distribution held in Pune Buntara Bhavana

Pune:Golden jubilee year – auspicious Navratri Festival, traditional Korala Parba, prestigious Navadurge Award distribution and mesmerizing Dandiya Raas were held in Buntara Bhavana on 12th October 2024. Union Minister of State for Civil aviation & Cooperation – Mr Murlidhar Anna Mohol, Maharashtra State Higher and Technical Education Minister – Mr Chandrakant Dada Patil grace the ocassion with their presence as a Chief Guests. Renowned Hotelier from Baramati and our Trustee – Mr Shridhar Shetty, Bunts Sangha Pimpri Chinchwad ladies wing Chairperson – Mrs Prabha S Shetty and Bunts Association Pune ladies wing Chairperson – Mrs Reshma R Shetty were the Guest of Honours for packed event which was presided by our President Mr Santosh V Shetty. Traditional festival of Tulunad – Korala Parba performed with all devotion by our General Secretary Mr Ajith Hegde and his better half Mrs Shammi A Hegde.Very meaningful “Navadurge Award”, which is the brainchild of our President, presented to Nine outstanding women, who brought visible changes in the lives of ordinary citizens of Pune.Later in the evening, our members from Managing Committee, Ladies Wing, Youth Wing, North zone, South zone and East Zone performed stunning Dandiya Raas.Memorable day ended with mouthwatering Dinner catered by iconic Shahji’s.

ಹೊರ ರಾಜ್ಯ ವಾರ್ತೆಗಳು

ಮುಲುಂಡ್ ಬಂಟ್ಸ್ ಆಶ್ರಯದಲ್ಲಿ ಅಜೆಕಾರು ಸರಣಿ ತಾಳಮದ್ದಳೆ ಸಮಾರೋಪ. ‘ತವರೂರ ಕಲಾವಿದರಿಂದ ಮುಂಬೈಯಲ್ಲಿ ಯಕ್ಷಗಾನ ಹವಾ’: ಸಿ.ಎ.ಕರುಣಾಕರ ಶೆಟ್ಟಿ

ಮುಂಬೈ: ‘ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬೈಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಇದಕ್ಕೆ ಪ್ರತಿವರ್ಷವೂ ತವರೂರಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ನಮ್ಮನ್ನು ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆತಂದು ಮುಂಬೈಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾಸಂಘಟಕರಿಗೆ ಸಲ್ಲುತ್ತದೆ’ ಎಂದು ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ ಹೇಳಿದ್ದಾರೆ. ಅಜೆಕಾರು ಕಲಾಭಿಮಾನಿ ಬಳಗದ 23ನೇ ವರ್ಷದ ಸರಣಿ ತಾಳಮದ್ದಳೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂದು ಬಂಟ್ಸ್ ವತಿಯಿಂದ ಗೌರವಿಸಲಾಯಿತು.ಅವಿಸ್ಮರಣೀಯ ಸಹಕಾರ:ತವರೂರ ಹಿರಿಯ ಅರ್ಥಧಾರಿ ಮತ್ತು ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವರ್ಷಂಪ್ರತಿ ಎರಡು ತಂಡಗಳಾಗಿ ಮುಂಬೈ ನಗರದ ಉದ್ದಗಲಕ್ಕೆ ಜರಗುವ ತಾಳಮದ್ದಳೆ ಕಾರ್ಯಕ್ರಮಗಳು ಹಾಗೂ ವಿವಿಧ ಮೇಳಗಳ ಪ್ರಸಿದ್ಧ ವೃತ್ತಿ ಕಲಾವಿದರನ್ನು ಸಂಯೋಜಿಸಿ ನೀಡಲಾಗುವ ಯಕ್ಷಗಾನ ಬಯಲಾಟಗಳಿಗೆ ಮುಂಬೈಯ ಜನತೆ ಅವಿಸ್ಮರಣೀಯವಾದ ಸಹಕಾರವನ್ನು ನೀಡುತ್ತಿರುವುದು ತಾಯ್ನಾಡಿನ ಕಲಾವಿದರಿಗೆ ಧನ್ಯತೆಯನ್ನು ತಂದುಕೊಟ್ಟಿದೆ. ಅದರಲ್ಲೂ ಮುಲುಂಡ್ ಬಂಟ್ಸ್ ಆರಂಭದಿಂದಲೂ ಪ್ರತಿ ವರ್ಷ ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು. ಮುಂಬೈ ಮಹಾನಗರದ ಎಲ್ಲಾ ಸಂಘಟಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅಜೆಕಾರು ಕಲಾಭಿಮಾನಿ ಬಳಗ ಮತ್ತು ಕಲಾವಿದರ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಸಂಘಟಕರಿಗೆ ಗೌರವಾರ್ಪಣೆ:ಮುಲುಂಡ್ ಬಂಟ್ಸ್ ಅಧ್ಯಕ್ಷರು ಸಿ/ಎ ಕರುಣಾಕರ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ವಿಶ್ವಸ್ಥರಾದ ಎಸ್.ಬಿ. ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪ್ರಸಾದ ಶೆಟ್ಟಿ, ಕೊಶಾಧಿಕಾರಿ ಸಿ/ಎ ಗಣೇಶ ಶೆಟ್ಟಿ, ಜೊತೆ ಕೊಶಾಧಿಕಾರಿ ಉದಯ ಶೆಟ್ಟಿ ಯಚ್, ಜೊತೆ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಕಡಂದಲೆ ಮತ್ತು ಶೇಖರ ಶೆಟ್ಟಿ ಕಡಂದಲೆ; ಮಹಿಳಾ ವಿಭಾಗದ ಅಧ್ಯಕ್ಷೆ ಆರತಿ.ವೈ ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ.ಕೆ.ಶೆಟ್ಟಿ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ ಅಲ್ಲದೆ ಸಮಿತಿಯ ಹರ್ಷವರ್ಧನ ಶೆಟ್ಟಿ ,ಯೋಗೇಶ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ವಂದಿಸಿದರು. ‘ಭೀಷ್ಮ ಪರಶುರಾಮ – ತುಳುನಾಡ ಬಲೀಂದ್ರೆ’ ತಾಳಮದ್ದಳೆ:ಸಭೆಯ ಬಳಿಕ ಸರಣಿಯ ಕೊನೆಯ ತಾಳಮದ್ದಳೆ ‘ಭೀಷ್ಮ-ಪರಶುರಾಮ (ಕನ್ನಡ); ತುಳುನಾಡ ಬಲೀಂದ್ರೆ (ತುಳು)’ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದ್ದರು.ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಬಲಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಪರಶುರಾಮ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಭೀಷ್ಮ), ಸದಾಶಿವ ಆಳ್ವ ತಲಪಾಡಿ (ವಾಮನ), ಗುರುತೇಜ ಶೆಟ್ಟಿ ಒಡಿಯೂರು (ಶುಕ್ರಾಚಾರ್ಯ) ಅರ್ಥಧಾರಿ ಗಳಾಗಿದ್ದರು.

ಹೊರ ರಾಜ್ಯ ವಾರ್ತೆಗಳು

ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ ಮಕ್ಕಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

ಕಾಸರಗೋಡು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ 2024 ನವೆಂಬರ್ 10ರಂದು ನಡೆಯಲಿರುವ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರ ಸಭೆಯ ಸದಸ್ಯೆ ಶ್ರೀಮತಿ ಶಾರದಾ ಉದ್ಘಾಟಿಸಿದರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಯು.ಆರ್ ಶೆಟ್ಟಿ, ನಿರಂಜನ ಕೊರಕ್ಕೋಡು, ಕೆ. ಗುರುಪ್ರಸಾದ್ ಕೋಟೆಕಣಿ, ಲವ ಮೀಪುಗುರಿ, ದಿವಾಕರ ಅಶೋಕ್ ನಗರ, ಕುಶಲಕುಮಾರ್ ಪಾರಕಟ್ಟೆ ಮೊದಲಾದವರು ಸಲಹೆ ಸೂಚನೆಯಿತ್ತರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಅನಿಲ್ ರಾಜ್ ನಾಗರಕಟ್ಟೆ ವಂದಿಸಿದರು.ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು, ಪ್ರಧಾನ ಸಂಚಾಲಕರಾಗಿ ಕೆ. ಜಗದೀಶ ಕೂಡ್ಲು ಹಾಗೂ ಕಾರ್ಯಕ್ರಮ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಗುರುಪ್ರಸಾದ್ ಕೋಟೆ ಕಣಿ, ಗೌರವ ಸಲಹೆಗಾರರಾಗಿ ಕೆ. ನಿರಂಜನ ಕೊರಕ್ಕೋಡು, ಸಂಚಾಲಕರಾಗಿ ಯು. ಆರ್ ಶೆಟ್ಟಿ ಮಂಗಳೂರು, ಪ್ರದೀಪ್ ಬೇಕಲ್, ದಿವಾಕರ ಅಶೋಕ್ ನಗರ್, ಶ್ರೀಕಾಂತ್ ಕಾಸರಗೋಡು, ಕುಶಲಕುಮಾರ್ .ಕೆ, ಅನಿಲ್ ರಾಜ್ ನಾಗರಕಟ್ಟೆ, ಇವರನ್ನು ಆಯ್ಕೆ ಮಾಡಲಾಯಿತು.2024 ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಇದರ ಪ್ರಚಾರ ಪತ್ರವನ್ನು ಕಾಸರಗೋಡು ನಗರಸಭಾ ಸದಸ್ಯೆ ಶ್ರೀಮತಿ ಶಾರದಾ ಅವರು ಮಕ್ಕಳಿಗೆ ನೀಡಿ ಬಿಡುಗಡೆಗೊಳಿಸಿದರು.

ಹೊರ ರಾಜ್ಯ ವಾರ್ತೆಗಳು

ಅಜೆಕಾರು ಬಳಗ ಆಶ್ರಯದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಕೃತಿದ್ವಯ ಲೋಕಾರ್ಪಣೆ – ಸರಣಿ ತಾಳಮದ್ದಳೆ. ‘ತುಳುನಾಡಿನ ಜನರಲ್ಲಿ ಜಾತಿ ಸಂಕಟವಿಲ್ಲ: ಡಾ.ಸುನೀತಾ ಎಂ. ಶೆಟ್ಟಿ

ಮುಂಬಯಿ: ‘ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ; ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ – ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ’ ಎಂದು ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಹೇಳಿದ್ದಾರೆ. ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆಗಸ್ಟ್ 24ರಂದು ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರಣಂಕಿಲ ಹರಿದಾಸ ಭಟ್ ದೇವಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.ಮುಂಬೈಯ ಹಿರಿಯ ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಾಧನೆಗೆ ಯಕ್ಷಗಾನ ಪೂರಕ: ಪೆರ್ಣಂಕಿಲ ಹರಿದಾಸ ಭಟ್ಇದೇ ಸಂದರ್ಭದಲ್ಲಿ ಮೈಸೂರಿನ ರಾಜ್ ಪ್ರಕಾಶನವು ಪ್ರಕಟಿಸಿದ ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛ ಕನ್ನಡ ಕವನ ಸಂಕಲನವನ್ನು ಹರಿದಾಸ ಭಟ್ ಅನಾವರಣಗೊಳಿಸಿದರು. ಅವರು ಮಾತನಾಡಿ ‘ ಯಕ್ಷಗಾನ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಭಾಸ್ಕರ ರೈಯವರು ಸ್ವತಃ ಯಕ್ಷಗಾನ ಕಲಾವಿದರಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಅವರು ರಚಿಸಿದ ಭಕ್ತಿ ಹಾಗೂ ಭಾವಗೀತೆಗಳು ವಿವಿಧ ಧ್ವನಿಸುರುಳಿಗಳ ಮೂಲಕ ಜನಪ್ರಿಯವಾಗಿವೆ’ ಎಂದರು.‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು – ತುಳು ಕವಿತಾ ಸಂಕಲನವನ್ನು ಡಾ. ಸುನೀತಾ ಎಂ. ಶೆಟ್ಟಿ ಬಿಡುಗಡೆಗೊಳಿಸಿದರು. ‘ಸಬಿ,ಸೀಪೆ,ಸುಗಿಪು ಸೀಯನವೆಂಬ ಮೂರು ವಿಭಾಗಗಳಲ್ಲಿ ತುಳು ಭಾಷೆಯ ಬನಿ ಮತ್ತು ಶಬ್ಧ ಸಮೃದ್ಧಿ ಕುಕ್ಕುವಳ್ಳಿಯವರ ಕವಿತೆಗಳಲ್ಲಿ ಎದ್ದು ತೋರುತ್ತವೆ’ ಎಂದವರು ನುಡಿದರು.ಯಕ್ಷಗಾನ ಕಲಾವಿದ, ಲೇಖಕ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡಿ ಎರಡೂ ಕವನ ಸಂಕಲನಗಳನ್ನು ವಿಶ್ಲೇಷಿಸಿದರು‌. ಮುಂಬಯಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಶುಭ ಹಾರೈಸಿದರು.‘ಪುಣ್ಯನೆಲ ಪೆರ್ಣಂಕಿಲ’ ಧ್ವನಿಸುರುಳಿಗೆ ಬೆಂಗಳೂರಿನ ಡಾ.ವಿದ್ಯಾಭೂಷಣರುಹಾಡಿದ ಕವಿ ಕುಕ್ಕುವಳ್ಳಿ ವಿರಚಿತ ಗಣೇಶ ಸ್ತುತಿಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೃತಿ ಕರ್ತ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. *’ತುಳುನಾಡ ಬಲೀಂದ್ರೆ- ಜಾಬಾಲಿ ನಂದಿನಿ’ ತಾಳಮದ್ದಳೆ:ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು), ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ ಹಾಗೂ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಗುರುತೇಜ ಶೆಟ್ಟಿ ಒಡಿಯೂರು ಅರ್ಥಧಾರಿಗಳಾಗಿ ಪಾತ್ರ ವಹಿಸಿದರು.

ಹೊರ ರಾಜ್ಯ ವಾರ್ತೆಗಳು

ಆ.24: ಮುಂಬೈಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರ 2 ಕೃತಿಗಳ ಅನಾವರಣ ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಠಿ’ ಮತ್ತು ‘ಸೀಯನ’

ಮುಂಬಯಿ: ಕರಾವಳಿ ಕರ್ನಾಟಕದ ಹೆಸರಾಂತ ಸಾಹಿತಿ, ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿಗಳೆರಡು ಮುಂಬೈ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆಗಸ್ಟ್ 24 ರಂದು ಶನಿವಾರ ಸಂಜೆ ಗಂ.4 ಕ್ಕೆ ಅನಾವರಣಗೊಳ್ಳಲಿವೆ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಪ್ರಸಕ್ತ ವರ್ಷ ನಡೆಯಲಿರುವ ಸರಣಿ ತಾಳಮದ್ದಳೆ ಉದ್ಘಾಟನಾ ಸಮಾರಂಭದಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಠಿ’ ಕನ್ನಡ ಕವನ ಸಂಕಲನ:ಕವಿ ಕುಕ್ಕುವಳ್ಳಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿದ ವಿವಿಧ ಕನ್ನಡ ಕವನಗಳು ಕಾವ್ಯ ಸಿರಿ, ಭಾವ ಸಿರಿ,ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣೀದೇವಿ ಮಾಲಗಿತ್ತಿ ಮುನ್ನುಡಿಯ ಸೇಸೆಯಿತ್ತಿದ್ದಾರೆ. ಸಾಹಿತಿ ಚಂದ್ರಕಲಾ ನಂದಾವರ ಬೆನ್ನುಡಿ ಬರೆದಿದ್ದಾರೆ. ಕೃತಿಯನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇ.ಮೂ.ಪೆರ್ಣಂಕಿಲ ಹರಿದಾಸ ಭಟ್ ಅನಾವರಣಗೊಳಿಸುವರು. ‘ಸೀಯನ’ ತುಳು ಗೊಂಚಿಲ್:ಮಾತೃಭಾಷೆ ತುಳುವಿನಲ್ಲಿ ಸಬಿ ಸೀಯನ, ಸೀಪೆ ಸೀಯನ,ಸುಗಿಪು ಸೀಯನ ಎಂಬ ಮೂರು ಗೊಂಚಲುಗಳಾಗಿ ಹೊರಬಂದಿರುವ ‘ಸೀಯನ’ ಚೀಪೆ ಕೋಪೆದ ಪಾಕ ಕಬಿತೆಲು – ಸಂಕಲನಕ್ಕೆ ಹಿರಿಯ ಜಾನಪದ ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ ಮುನ್ನುಡಿ ಬರೆದಿದ್ದಾರೆ. ಕನ್ನಡ – ತುಳು ಸಾಹಿತಿ ಮುದ್ದು ಮೂಡುಬೆಳ್ಳೆ ಅವರ ಬೆನ್ನುಡಿ ಇದೆ. ಈ ಕೃತಿಯನ್ನು ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಬಿಡುಗಡೆಗೊಳಿಸುವರು. ಈ ಎರಡೂ ಕವನ ಸಂಕಲನಗಳನ್ನು ಮೈಸೂರಿನ ರಾಜ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.ಮುಂಬೈಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕೃತಿಕರ್ತರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಉಪಸ್ಥಿತರಿರುವರು. ಕಲಾವಿದ ಸದಾಶಿವ ಆಳ್ವ ತಲಪಾಡಿ ಕೃತಿ ಪರಿಚಯ ನೀಡುವರು‌. ಕಲಾ ಸಂಘಟಕ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರೂಪಿಸುವರು.‘ತುಳುನಾಡ ಬಲೀಂದ್ರೆ- ಜಾಬಾಲಿ ನಂದಿನಿ’ ತಾಳಮದ್ದಳೆ:ಉದ್ಘಾಟನಾ ಸಮಾರಂಭದ ಬಳಿಕ ತಾಳಮದ್ದಳೆ ಸರಣಿಯ ಮೊದಲ ಕಾರ್ಯಕ್ರಮವಾಗಿ ‘ತುಳುನಾಡ ಬಲೀಂದ್ರೆ’ (ತುಳು), ‘ಜಾಬಾಲಿ-ನಂದಿನಿ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗುವುದು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಗುರುತೇಜ ಶೆಟ್ಟಿ ಒಡಿಯೂರು ಅರ್ಥಧಾರಿಗಳಾಗಿರುವರು ಎಂದು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಹೊರ ರಾಜ್ಯ ವಾರ್ತೆಗಳು

ಕೇರಳದ ಎರ್ನಕುಲಂ ನಲ್ಲಿ ಜನಮನ ಸೂರೆಗೊಂಡ ವಿಭಾ ಶ್ರೀನಿವಾಸ್ ನಾಯಕ್ ಭಕ್ತಿ ಸಂಗೀತ ಕಾರ್ಯಕ್ರಮ

ಮಂಗಳೂರು, ಆಗಸ್ಟ್ 17, ಕೇರಳದ ಎರ್ನಕುಲಂ ತಿರುಮಲ ದೇವಸ್ಥಾನದಲ್ಲಿ 48 ನೇ ಅಖಂಡ ಭಜನಾ ಸಪ್ತಾಹದ ಮಹೋತ್ಸವದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.ತಬಲಾದಲ್ಲಿ ಕೃಷ್ಣಕುಮಾರ್, ಹಾರ್ಮೋನಿಯಂ ನಲ್ಲಿ ರಾಧಾಕೃಷ್ಣ ಭಟ್, ಹೃಶಿಕೇಶ್ ಪಾಕ್ವಾಜ್, ಶ್ರೀಜಿತ್, ಕೃಷ್ಣಕಾಂತ್, ಮಹೇಶ್ವರ ತಾಳ ದಲ್ಲಿ ಸಾಥ್ ನೀಡಿದರು.

ಹೊರ ರಾಜ್ಯ ವಾರ್ತೆಗಳು

ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣ ಕಾರ್ಯಕ್ರಮ. ಐಕಳ ಹರೀಶ್ ಶೆಟ್ಟಿಯವರಿಗೆ ಸನ್ಮಾನ

ಮುಂಬೈ: ಶ್ರೀ ಕ್ಷೇತ್ರ ಕಟೀಲಿನ ಗೋಪಾಲಕೃಷ್ಣ ಅಸ್ರಣ್ಣರ 24ನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಬಂಟರ ಸಂಘ ಮುಂಬೈಯ ಬಂಟರ ಭವನದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಹಿಸಿದ್ದರು. ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಒಳಿತಿಗಾಗಿ ಶ್ರಮಿಸಿದ ಐಕಳ ಹರೀಶ್ ಶೆಟ್ಟಿಯವರನ್ನು ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು. ಅಲ್ಲದೆ ಹಲವಾರು ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟವು ಜರಗಿತು.ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ದಾನಿಗಳಾದ ಡಾ. ಆರ್. ಕೆ. ಶೆಟ್ಟಿ, ರತ್ನಾಕರ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ,ಪದ್ಮನಾಭ ಕಟೀಲು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Scroll to Top