ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ ಮಕ್ಕಳ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

108.5K Views 3 Sep 2024

ಕಾಸರಗೋಡು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ 2024 ನವೆಂಬರ್ 10ರಂದು ನಡೆಯಲಿರುವ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರ ಸಭೆಯ ಸದಸ್ಯೆ ಶ್ರೀಮತಿ ಶಾರದಾ ಉದ್ಘಾಟಿಸಿದರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಯು.ಆರ್ ಶೆಟ್ಟಿ, ನಿರಂಜನ ಕೊರಕ್ಕೋಡು, ಕೆ. ಗುರುಪ್ರಸಾದ್ ಕೋಟೆಕಣಿ, ಲವ ಮೀಪುಗುರಿ, ದಿವಾಕರ ಅಶೋಕ್ ನಗರ, ಕುಶಲಕುಮಾರ್ ಪಾರಕಟ್ಟೆ ಮೊದಲಾದವರು ಸಲಹೆ ಸೂಚನೆಯಿತ್ತರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಅನಿಲ್ ರಾಜ್ ನಾಗರಕಟ್ಟೆ ವಂದಿಸಿದರು.
ಸಂಘಟನೆಗಳ ಸಮಾಲೋಚನಾ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಿವರಾಮ ಕಾಸರಗೋಡು, ಪ್ರಧಾನ ಸಂಚಾಲಕರಾಗಿ ಕೆ. ಜಗದೀಶ ಕೂಡ್ಲು ಹಾಗೂ ಕಾರ್ಯಕ್ರಮ ಸಂಯೋಜನ ಸಮಿತಿಯ ಅಧ್ಯಕ್ಷರಾಗಿ ಗುರುಪ್ರಸಾದ್ ಕೋಟೆ ಕಣಿ, ಗೌರವ ಸಲಹೆಗಾರರಾಗಿ ಕೆ. ನಿರಂಜನ ಕೊರಕ್ಕೋಡು, ಸಂಚಾಲಕರಾಗಿ ಯು. ಆರ್ ಶೆಟ್ಟಿ ಮಂಗಳೂರು, ಪ್ರದೀಪ್ ಬೇಕಲ್, ದಿವಾಕರ ಅಶೋಕ್ ನಗರ್, ಶ್ರೀಕಾಂತ್ ಕಾಸರಗೋಡು, ಕುಶಲಕುಮಾರ್ .ಕೆ, ಅನಿಲ್ ರಾಜ್ ನಾಗರಕಟ್ಟೆ, ಇವರನ್ನು ಆಯ್ಕೆ ಮಾಡಲಾಯಿತು.
2024 ನವೆಂಬರ್ 10 ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಇದರ ಪ್ರಚಾರ ಪತ್ರವನ್ನು ಕಾಸರಗೋಡು ನಗರಸಭಾ ಸದಸ್ಯೆ ಶ್ರೀಮತಿ ಶಾರದಾ ಅವರು ಮಕ್ಕಳಿಗೆ ನೀಡಿ ಬಿಡುಗಡೆಗೊಳಿಸಿದರು.

Read More News

ದ.ಕ. ಕಾಂಗ್ರೆಸ್ ಗೆ ಪದ್ಮರಾಜ್ ಸಾರಥ್ಯ: ಬಿಲ್ಲವ ಅಸ್ತ್ರ, ಬಂಟ-ಕ್ರೈಸ್ತ-ಮುಸ್ಲಿಂ ಸಮುದಾಯದ ಪ್ರತಿಕ್ರಿಯೆ ಹೇಗಿದೆ ಮತ್ತು 8 ವಿಧಾನ ಸಭಾ ಕ್ಷೇತ್ರದ ಗೆಲುವಿನ ಟಾರ್ಗೆಟ್ ಸೇರಿದಂತೆ ವಿಶೇಷ ಸಂದರ್ಶನದಲ್ಲಿ ಪದ್ಮರಾಜ್ ಪೂಜಾರಿ ಅವರು ಹೇಳಿದ್ದೇನು? MP MLA’S NEWS SPECIAL EXCLUSIVE REPORT by DR ASHOK SHETTY BN.

Scroll to Top